ಮೋಜ್ ಗೌಪ್ಯತೆ ನೀತಿ
Last updated: 12th August 2024
ನಾವು (ಮೊಹಲ್ಲಾ ಟೆಕ್ ಪ್ರೈವೇಟ್ ಲಿಮಿಟೆಡ್, ಅಥವಾ "MTPL") ನಿಮ್ಮ ಗೌಪ್ಯತೆಯ ಬಗ್ಗೆ ಆಳವಾದ ಕಾಳಜಿಯನ್ನು ಹೊಂದಿದ್ದೇವೆ ಮತ್ತು ನಾವು ಈ ಕಾಳಜಿಯನ್ನು ಬಹಳ ಗಂಭೀರವಾಗಿ ಪರಿಗಣಿಸುತ್ತೇವೆ. ಈ ಗೌಪ್ಯತಾ ನೀತಿ ("ಗೌಪ್ಯತೆ ನೀತಿ") ನಮ್ಮ ಮೊಬೈಲ್ ಅಪ್ಲಿಕೇಶನ್ ಮತ್ತು ಅದರ ಆವೃತ್ತಿಗಳನ್ನು ("ಅಪ್ಲಿಕೇಶನ್") ನೀವು ಬಳಸುವಾಗ ನಿಮ್ಮ ಡೇಟಾವನ್ನು ನಾವು ಹೇಗೆ ಸಂಗ್ರಹಿಸುತ್ತೇವೆ, ಪ್ರಕ್ರಿಯೆಗೊಳಿಸುತ್ತೇವೆ, ಬಳಸುತ್ತೇವೆ ಮತ್ತು ಬಹಿರಂಗಪಡಿಸಬಹುದು ಎಂಬುದನ್ನು ವಿವರಿಸುತ್ತದೆ. "ನಾವು", "ನಮ್ಮ" ಅಥವಾ "ಕಂಪನಿ" ಗೆ ಮಾಡುವ ಉಲ್ಲೇಖಗಳು ಪ್ಲಾಟ್‌ಫಾರಂ ಮತ್ತು/ಅಥವಾ ಮೊಹಲ್ಲಾ ಟೆಕ್ ಪ್ರೈ. ಲಿ ಎಂದು ಅರ್ಥವಾಗಿದೆ. "ನೀವು", "ನಿಮ್ಮ" ಅಥವಾ "ಬಳಕೆದಾರರು" ಎಂಬ ಯಾವುದೇ ಉಲ್ಲೇಖಗಳು ಎಂದರೆ ನಮ್ಮ ಪ್ಲಾಟ್‌ಫಾರಂ ಅನ್ನು ಬಳಸುವ ಯಾವುದೇ ವ್ಯಕ್ತಿ ಅಥವಾ ಸಂಸ್ಥೆಯಾಗಿರುತ್ತದೆ. ಈ ಗೌಪ್ಯತೆ ನೀತಿಯಲ್ಲಿ ವಿವರಿಸಿರುವುದನ್ನು ಹೊರತುಪಡಿಸಿ ಯಾರೊಂದಿಗೂ ನಿಮ್ಮ ಮಾಹಿತಿಯನ್ನು ನಾವು ಹಂಚಿಕೊಳ್ಳುವುದಿಲ್ಲ ಅಥವಾ ಬಳಸುವುದಲ್ಲ.
ಈ ಗೌಪ್ಯತೆ ನೀತಿಯು ಬಳಕೆಯ ನಿಯಮಗಳು ("ನಿಯಮಗಳು") ಭಾಗವಾಗಿದೆ ಮತ್ತು ಇದರೊಂದಿಗೆ ಓದಲ್ಪಡಬೇಕು. ಈ ಪ್ಲಾಟ್‌ಫಾರಂ ಅನ್ನು ಬಳಸುವ ಮೂಲಕ, ಈ ಗೌಪ್ಯತೆ ನೀತಿಯ ನಿಯಮ ಮತ್ತು ಷರತ್ತುಗಳಿಗೆ ನಿವು ಸಮ್ಮತಿಸುತ್ತೀರಿ. ಈ ಗೌಪ್ಯತೆ ನೀತಿಯಲ್ಲಿ ವಿವರಿಸಿದ ರೀತಿಯಲ್ಲಿ ನಿಮ್ಮ ವೈಯಕ್ತಿಕ ಮಾಹಿತಿಯನ್ನು (ಈ ಕೆಳಗೆ ವಿವರಿಸಿದಂತೆ)ನಮ್ಮ ಬಳಕೆ ಮತ್ತು ಬಹಿರಂಗಗೊಳಿಸುವಿಕೆಗೆ ನೀವು ಸಮ್ಮತಿಸುತ್ತೀರಿ. ಈ ಗೌಪ್ಯತೆ ನೀತಿಯಲ್ಲಿ ಬಳಸಿದ, ಆದರೆ ಇಲ್ಲಿ ವಿವರಿಸಿಲ್ಲದ ದಪ್ಪ ಅಕ್ಷರದ ಶಬ್ದಗಳು ನಿಯಮಗಳಲ್ಲಿ ಅಂತಹ ಶಬ್ದಗಳಿಗೆ ನೀಡಿದ ಅರ್ಥವನ್ನು ಹೊಂದಿರುತ್ತವೆ. ಈ ಗೌಪ್ಯತೆ ನೀತಿಯಲ್ಲಿನ ನಿಯಮ ಮತ್ತು ಷರತ್ತುಗಳಿಗೆ ನೀವು ಸಮ್ಮತಿಸದಿದ್ದರೆ, ಈ ಪ್ಲಾಟ್‌ಫಾರಂ ಅನ್ನು ದಯವಿಟ್ಟು ಬಳಸಬೇಡಿ.
#
ನಾವು ಮಾಹಿತಿಯನ್ನು ಸಂಗ್ರಹಿಸುವುದು ಮತ್ತು ಅದನ್ನು ನಾವು ಹೇಗೆ ಬಳಸುತ್ತೇವೆನಿಮ್ಮಿಂದ ನಾವು ಸಂಗ್ರಹಿಸುವ ಮಾಹಿತಿ ಮತ್ತು ಅದನ್ನು ನಾವು ಹೇಗೆ ಬಳಸುತ್ತೇವೆ ಎಂಬುದನ್ನು ಈ ಮುಂದಿನ ಟೇಬಲ್ ಪಟ್ಟಿ ಮಾಡುತ್ತದೆ:
ನಾವು ಸಂಗ್ರಹಿಸುವ ಮಾಹಿತಿ | ನಾವು ಅದನ್ನು ಬಳಸುವುದು ಹೇಗೆ |
---|---|
ಲಾಗ್ ಇನ್ ಡೇಟಾ: ಬಳಕೆದಾರರ ಐಡಿ, ಮೊಬೈಲ್ ಫೋನ್ ನಂಬರ್, ಇಮೇಲ್ ಐಡಿ, ಲಿಂಗ (ಐಚ್ಛಿಕ) ಮತ್ತು ಐಪಿ ವಿಳಾಸ. ನಾವು ಒಂದು ಸೂಚಕ ವಯೋಶ್ರೇಣಿಯನ್ನು ಸಂಗ್ರಹಿಸಬಹುದು. ಇದು ನಮ್ಮ ಪ್ಲಾಟ್‌ಫಾರಂ ಅನ್ನು ಮತ್ತು ನಮ್ಮ ಪ್ಲಾಟ್‌ಫಾರಂನ ಕೆಲವು ವೈಶಿಷ್ಟ್ಯಗಳನ್ನು (ಒಟ್ಟಾರೆಯಾಗಿ "ಲಾಗಿನ್ ಡೇಟಾ") ಬಳಸಲು ನೀವು ಸೂಕ್ತ ವಯಸ್ಸಿನವರಾಗಿದ್ದೀರಿ ಎಂಬುದನ್ನು ನಮಗೆ ಹೇಳುತ್ತದೆ. ನೀವು ಹಂಚಿಕೊಳ್ಳುವ ಕಂಟೆಂಟ್. ಪ್ಲಾಟ್‌ಫಾರಂ ಮೂಲಕ ಇತರ ಬಳಕೆದಾರರಿಗೆ ನೀವು ಲಭ್ಯವಾಗಿಸುವ ಎಲ್ಲ ಮಾಹಿತಿಯನ್ನು ಇದು ಒಳಗೊಂಡಿರುತ್ತದೆ, ಉದಾಹರಣೆಗೆ: - ಯಾವುದೇ ಕೋಟ್‌ಗಳು, ಚಿತ್ರಗಳು, ರಾಜಕೀಯ ಅಭಿಪ್ರಾಯಗಳು, ಧಾರ್ಮಿಕ ಅಭಿಪ್ರಾಯಗಳು, ಪ್ರೊಫೈಲ್ ಫೋಟೋ, ಬಳಕೆದಾರರ ಸ್ವವಿವರ ಮತ್ತು ಬಳಕೆದಾರರ ಹೆಸರು ಇತ್ಯಾದಿ ಸೇರಿದಂತೆ, ಅದಕ್ಕೆ ಸೀಮಿತಗೊಳ್ಳದಂತೆ ಪ್ಲಾಟ್‌ಫಾರಂನಲ್ಲಿ ನೀವು ಸ್ವಯಂಪ್ರೇರಿತವಾಗಿ ಹಂಚಿಕೊಂಡ ನಿಮ್ಮ ಬಗ್ಗೆ ಅಥವಾ ನಿಮಗೆ ಸಂಬಂಧಿಸಿದ ಮಾಹಿತಿ. - ಪ್ಲಾಟ್‌ಫಾರಂನಲ್ಲಿ ನೀವು ಮಾಡುವ ಯಾವುದೇ ಪೋಸ್ಟ್‌ಗಳು. ಇತರ ಮೂಲಗಳಿಂದ ನಾವು ಸ್ವೀಕರಿಸುವ ಮಾಹಿತಿ: ನಾವು ತೃತೀಯ ಪಕ್ಷಗಳೊಂದಿಗೆ ನಿಕಟವಾಗಿ ಕೆಲಸ ಮಾಡುತ್ತಿದ್ದೇವೆ (ಉದಾಹರಣೆಗೆ, ವಹಿವಾಟು ಪಾಲುದಾರರು, ತಾಂತ್ರಿಕ ಉಪ ಗುತ್ತಿಗೆದಾರರು, ವಿಶ್ಲೇಷಣೆ ಪೂರೈಕೆದಾರರು, ಹುಡುಕಾಟ ಮಾಹಿತಿ ಪೂರೈಕೆದಾರರು ಸೇರಿದಂತೆ) ಮತ್ತು ಅಂತಹ ಮೂಲಗಳಿಂದ ನಿಮ್ಮ ಬಗ್ಗೆ ನಾವು ಮಾಹಿತಿಯನ್ನು ಪಡೆಯಬಹುದು. ಇಂತಹ ಡೇಟಾವನ್ನು ಆಂತರಿಕವಾಗಿ ಹಂಚಿಕೊಳ್ಳಬಹುದು ಮತ್ತು ಈ ಪ್ಲಾಟ್‌ಫಾರಂನಲ್ಲಿ ಸಂಗ್ರಹಿಸಿದ ಡೇಟಾದೊಂದಿಗೆ ಸಂಯೋಜಿಸಬಹುದು. ಲಾಗ್ ಡೇಟಾ: "ಲಾಗ್ ಡೇಟಾ" ಎಂಬುದು, ಈ ಕೆಳಗಿನವುಗಳೂ ಸೇರಿದಂತೆ, ಆದರೆ ಅದಕ್ಕೆ ಸೀಮಿತವಾಗಿಲ್ಲದಂತೆ ಕುಕೀಗಳು, ವೆಬ್ ಬೀಕಾನ್‌ಗಳು, ಲಾಗ್ ಫೈಲ್‌ಗಳು, ಸ್ಕ್ರಿಪ್ಟ್‌ಗಳ ಮೂಲಕವಾಗಲೀ ಪ್ಲಾಟ್‌ಫಾರಂ ಅನ್ನು ನೀವು ಬಳಸುವಾಗ ಸ್ವಯಂಚಾಲಿತವಾಗಿ ನಾವು ಸಂಗ್ರಹಿಸುವ ಮಾಹಿತಿಯಾಗಿದೆ: - ನಿಮ್ಮ ವೆಬ್ ಬ್ರೌಸರ್ ಅಥವಾ ಪ್ಲಾಟ್‌ಫಾರಂ ಪ್ರವೇಶಿಸಲು ನೀವು ಬಳಸುವ ಇತರ ಪ್ರೋಗ್ರಾಮ್‌ಗಳು ಲಭ್ಯವಾಗಿಸಿದ ನಿಮ್ಮ ಮೊಬೈಲ್ ಕ್ಯಾರಿಯರ್ ಸಂಬಂಧಿ ಮಾಹಿತಿ, ಕಾನ್ಫಿಗರೇಶನ್ ಮಾಹಿತಿ, ನಿಮ್ಮ ಐಪಿ ವಿಳಾಸ ಮತ್ತು ನಿಮ್ಮ ಸಾಧನದ ಆವೃತ್ತಿ ಮತ್ತು ಗುರುತು ಸಂಖ್ಯೆ ಇತ್ಯಾದಿ ತಾಂತ್ರಿಕ ಮಾಹಿತಿ; - ಬಳಸಿದ ವೆಬ್ ಹುಡುಕಾಟ ಶಬ್ದಗಳು, ಭೇಟಿ ಮಾಡಿದ ಸಾಮಾಜಿಕ ಮಾಧ್ಯಮ ಪ್ರೊಫೈಲ್‌ಗಳು, ಬಳಸಿದ ಮಿನಿ ಅಪ್ಲಿಕೇಶನ್‌ಗಳು ಹಾಗೂ ಪ್ಲಾಟ್‌ಫಾರಂ ಬಳಸುತ್ತಿರುವಾಗ ಪ್ರವೇಶಿಸಿದ ಅಥವಾ ವಿನಂತಿಸಿದ ಇತರ ಮಾಹಿತಿ ಮತ್ತು ಕಂಟೆಂಟ್‌ನ ವಿವರಗಳು ಸೇರಿದಂತೆ ಪ್ಲಾಟ್‌ಫಾರಂ ಬಳಸುತ್ತಿರುವಾಗ ನೀವು ಏನನ್ನು ಹುಡುಕಿದ್ದೀರಿ ಮತ್ತು ವೀಕ್ಷಿಸಿದ್ದೀರಿ ಎಂಬುದರ ಬಗೆಗಿನ ಮಾಹಿತಿ; - ಪ್ಲಾಟ್‌ಫಾರಂನಲ್ಲಿ ಸಂವಹನಗಳ ಬಗ್ಗೆ ಸಾಮಾನ್ಯ ಮಾಹಿತಿ, ಉದಾಹರಣೆಗೆ ನೀವು ಸಂವಹನ ನಡೆಸಿದ ಬಳಕೆದಾರರ ಗುರುತು ಮತ್ತು ನಿಮ್ಮ ಸಂವಹನಗಳ ಸಮಯ, ಡೇಟಾ ಮತ್ತು ಅವಧಿ; ಮತ್ತು - ಮೆಟಾಡೇಟಾ ಅಂದರೆ ಹಂಚಿಕೊಂಡ ಫೋಟೋಗ್ರಾಫ್ ಅಥವಾ ವೀಡಿಯೋವನ್ನು ಸೆರೆಹಿಡಿದ ಅಥವಾ ಪೋಸ್ಟ್ ಮಾಡಿದ ದಿನಾಂಕ, ಸಮಯ ಅಥವಾ ಸ್ಥಳದಂತಹ ಪ್ಲಾಟ್‌ಫಾರಂ ಮೂಲಕ ನೀವು ಲಭ್ಯವಾಗಿಸಿದ ಐಟಂಗಳಿಗೆ ಸಂಬಂಧಿಸಿದ ಮಾಹಿತಿ. ಕುಕೀಗಳು: (ಸಿ) ಕುಕೀಗಳು: ನಮ್ಮ ಪ್ಲಾಟ್‌ಫಾರಂನ ಇತರ ಬಳಕೆದಾರರಿಂದ ನಿಮ್ಮನ್ನು ಪ್ರತ್ಯೇಕಿಸಲು ಕುಕೀಗಳನ್ನು ನಮ್ಮ ಪ್ಲಾಟ್‌ಫಾರಂ ಬಳಸುತ್ತದೆ. ನಮ್ಮ ಪ್ಲಾಟ್‌ಫಾರಂ ಅನ್ನು ನೀವು ಬ್ರೌಸ್ ಮಾಡಿದಾಗ ಉತ್ತಮ ಬಳಕೆದಾರರ ಅನುಭವವನ್ನು ಒದಗಿಸಲು ಇದು ನಮಗೆ ಸಹಾಯ ಮಾಡುತ್ತದೆ ಮತ್ತು ಪ್ಲಾಟ್‌ಫಾರಂ ಅನ್ನು ಸುಧಾರಿಸಲು ನಮಗೆ ಅನುವು ಮಾಡುತ್ತದೆ. ನಿಮ್ಮ ಸಾಧನದಲ್ಲಿನ ಕುಕೀಗಳಿಂದ ನಾವು ಕುಕೀ ಡೇಟಾವನ್ನು ಸಂಗ್ರಹಿಸುತ್ತೇವೆ. ನಾವು ಬಳಸುವ ಕುಕೀಗಳ ವಿವರವಾದ ಮಾಹಿತಿ ಮತ್ತು ಅವುಗಳನ್ನು ನಾವು ಬಳಸುವ ಉದ್ದೇಶಕ್ಕೆ, ನಮ್ಮ ಕುಕೀ ನೀತಿಯನ್ನು ದಯವಿಟ್ಟು ನೋಡಿ ಸಮೀಕ್ಷೆಗಳು: ನೀವು ಸಮೀಕ್ಷೆಯಲ್ಲಿ ಭಾಗವಹಿಸಲು ಆಯ್ಕೆ ಮಾಡಿಕೊಂಡರೆ, ನಾವು ಕೆಲವು ವೈಯಕ್ತಿಕ ಮಾಹಿತಿಯನ್ನು ಒದಗಿಸುವಂತೆ ನಿಮ್ಮನ್ನು ವಿನಂತಿಸಬಹುದು., ಅಂದರೆ ನಿಮ್ಮನ್ನು ಗುರುತಿಸಬಹುದಾದ ಯಾವುದೇ ಮಾಹಿತಿ ("ವೈಯಕ್ತಿಕ ಮಾಹಿತಿ"). ಈ ಸಮೀಕ್ಷೆಗಳನ್ನು ನಡೆಸಲು ನಾವು ತೃತೀಯ ಪಕ್ಷದ ಸೇವೆ ಪೂರೈಕೆದಾರರನ್ನು ಬಳಸಬಹುದು ಮತ್ತು ಸಮೀಕ್ಷೆಯನ್ನು ಪೂರ್ಣಗೊಳಿಸುವುದಕ್ಕೂ ಮುನ್ನ ಇದನ್ನು ನಿಮಗೆ ಸೂಚಿಸಬಹುದು. | - ಪ್ಲಾಟ್‌ಫಾರಂನಲ್ಲಿ ಬಳಕೆದಾರರ ಖಾತೆಗೆ ಲಾಗಿನ್ ಸೆಟಪ್ ಮಾಡಲು ಮತ್ತು ಅನುವು ಮಾಡಲು; - Tಈ ಗೌಪ್ಯತೆ ನೀತಿ ಸೇರಿದಂತೆ ಪ್ಲಾಟ್‌ಫಾರಂಗೆ ಬದಲಾವಣೆಗಳ ಬಗ್ಗೆ ನಿಮಗೆ ಸೂಚನೆ ನೀಡುವುದು; - ಬಳಕೆದಾರರ ಬೆಂಬಲ ಅನುಬಂಧ ಸೇರಿದಂತೆ ಸಂವಹನವನ್ನು ಒದಗಿಸುವುದು; - ನಮ್ಮ ನಿಯಮಗಳು, ಷರತ್ತುಗಳು ಮತ್ತು ನೀತಿಗಳು ಹಾಗೂ ನಮ್ಮ ಯಾವುದೇ ಹಕ್ಕುಗಳು ಅಥವಾ ನಮ್ಮ ಸಹಭಾಗಿತ್ವ ಸಂಸ್ಥೆಗಳ ಹಕ್ಕುಗಳು ಅಥವಾ ಪ್ಲಾಟ್‌ಫಾರಂನ ಇತರ ಬಳಕೆದಾರರಿಗೆ ಜಾರಿಗೊಳಿಸಲು; - ಹೊಸ ಸೇವೆಗಳನ್ನು ಅಭಿವೃದ್ಧಿಪಡಿಸಲು ಮತ್ತು ಪ್ರಸ್ತುತ ಸೇವೆಗಳು ಮತ್ತು ಪ್ಲಾಟ್‌ಫಾರಂ ಅನ್ನು ಸುಧಾರಿಸಲು ಮತ್ತು ಬಳಕೆದಾರರ ಪ್ರತಿಕ್ರಿಯೆ ಮತ್ತು ವಿನಂತಿಗಳನ್ನು ಸಮಗ್ರಗೊಳಿಸಲು; - ಭಾಷೆ ಮತ್ತು ಸ್ಥಳ ಆಧರಿತ ವೈಯಕ್ತಿಕಗೊಳಿಸುವಿಕೆಯನ್ನು ಒದಗಿಸಲು; - ಪ್ಲಾಟ್‌ಫಾರಂ ಅಳವಡಿಸಲು ಮತ್ತು ಸಮಸ್ಯೆ ಪರಿಹಾರ, ಡೇಟಾ ವಿಶ್ಲೇಷಣೆ, ಪರೀಕ್ಷೆ, ಸಂಶೋಧನೆ, ಭದ್ರತೆ, ಮೋಸ ಗುರುತಿಸುವಿಕೆ, ಖಾತೆ ನಿರ್ವಹಣೆ ಮತ್ತು ಸಮೀಕ್ಷೆ ಉದ್ದೇಶಗಳೂ ಸೇರಿದಂತೆ ಆಂತರಿಕ ಕಾರ್ಯನಿರ್ವಹಣೆಗಳಿಗೆ; - ನೀವು ಪ್ಲಾಟ್‌ಫಾರಂ ಅನ್ನು ಬಳಸುವುದು ಮತ್ತು ಆಕ್ಸೆಸ್ ಮಾಡುವುದನ್ನು ಉತ್ತಮವಾಗಿ ಅರ್ಥ ಮಾಡಿಕೊಳ್ಳಲು ಮತ್ತು ಪ್ಲಾಟ್‌ಫಾರಂನಲ್ಲಿ ಬಳಕೆದಾರರ ಅನುಭವವನ್ನು ಸುಧಾರಿಸಲು; - ಪ್ಲಾಟ್‌ಫಾರಂ ಅನ್ನು ನಮ್ಮ ಬಳಕೆದಾರರು ಹೇಗೆ ಬಳಸುತ್ತಿದ್ದಾರೆ ಎಂಬುದನ್ನು ಉತ್ತಮವಾಗಿ ಅರ್ಥ ಮಾಡಿಕೊಳ್ಳಲು ಪ್ರದೇಶ, ಫೋನ್ ಮಾಡೆಲ್, ಕಾರ್ಯಾಚಾರಣೆ ಸಿಸ್ಟಂ ಪ್ಲಾಟ್‌ಫಾರಂ, ಸಿಸ್ಟಂ ಭಾಷೆ ಮತ್ತು ಪ್ಲಾಟ್‌ಫಾರಂ ಆವೃತ್ತಿಯಂತಹ ಐಟಂಗಳ ಮೇಲೆ ಬಳಕೆದಾರರ ಭೌಗೋಳಿಕ ವಿಶ್ಲೇಷಣೆಯನ್ನು ನಡೆಸಲು ವೈಯಕ್ತಿಕ ಮಾಹಿತಿ ಸೇರಿದಂತೆ ನಿಮ್ಮ ಮಾಹಿತಿಯನ್ನು ಅನಾಮಿಕಗೊಳಿಸಲು ಮತ್ತು ಸರಾಸರಿಗೊಳಿಸಲು; - ಪ್ಲಾಟ್‌ಫಾರಂನಲ್ಲಿ ಬಳಕೆದಾರರು ತೃತೀಯ ಪಕ್ಷದ ಸೇವೆಗಳ ಪ್ರವೇಶಾವಕಾಶ ಮಾಡುವಾಗ ಯಾವ ಕಂಟೆಂಟ್ ಮತ್ತು ಸೇವೆಗಳನ್ನು ಬಳಸಲಾಗಿದೆ ಎಂಬುದನ್ನು ವೆಬ್ ಮತ್ತು ಖಾತೆ ದಟ್ಟಣೆ ಅಂಕಿ ಅಂಶಗಳ ಸಂಗ್ರಹಣೆಗಾಗಿ ವೈಯಕ್ತಿಕ ಮಾಹಿತಿ ಸೇರಿದಂತೆ ನಿಮ್ಮ ಮಾಹಿತಿಯನ್ನು ಅನಾಮಿಕಗೊಳಿಸಲು ಮತ್ತು ಸರಾಸರಿಗೊಳಿಸಲು; - ನಾವು ಅಥವಾ ಗುಂಪು ನಿರ್ವಹಿಸುವ ಸಂಬಂಧಿತ/ಸಹೋದರಿ ಪ್ಲಾಟ್‌ಫಾರ್ಮ್‌ಗಳಲ್ಲಿ ನಕಲಿಸಬಹುದಾದ ಪ್ರೊಫೈಲ್‌ಗಳನ್ನು ಅಪ್‌ಲೋಡ್ ಮಾಡಲು ಅಥವಾ ರಚಿಸಲು; - ಜಾಹೀರಾತು ಮತ್ತು ಇತರ ಮಾರ್ಕೆಟಿಂಗ್ ಹಾಗೂ ಪ್ರಚಾರ ಚಟುವಟಿಕೆಗಳ ಪರಿಣಾಮಕಾರಿತ್ವವನ್ನು ವಿಶ್ಲೇಷಿಸಲು ಮತ್ತು ಸುಧಾರಿಸಲು. |
ಬಳಕೆದಾರರ ಹುಡುಕಾಟ ಡೇಟಾ: ಪ್ಲಾಟ್‌ಫಾರಂನಲ್ಲಿ ನೀವು ನಡೆಸಿದ ಯಾವುದೇ ಹುಡುಕಾಟಗಳು. | ನಿಮ್ಮ ಹಿಂದಿನ ಹುಡುಕಾಟಗಳಿಗೆ ತ್ವರಿತ ಪ್ರವೇಶಾವಕಾಶವನ್ನು ಒದಗಿಸಲು. ವೈಯಕ್ತಿಕಗೊಳಿಸಲು ವಿಶ್ಲೇಷಣೆಗಳನ್ನು ಬಳಸಲು ಮತ್ತು ಗುರಿಪಡಿಸಿದ ಜಾಹೀರಾತುಗಳನ್ನು ನಿಮಗೆ ತೋರಿಸಲು. |
ಹೆಚ್ಚುವರಿ ಖಾತೆ ಭದ್ರತೆ: (ಎಫ್) ಹೆಚ್ಚುವರಿ ಖಾತೆ ಭದ್ರತೆ: ನಾವು ನಿಮ್ಮ ಫೋನ್ ನಂಬರ್ ಅನ್ನು ಸಂಗ್ರಹಿಸುತ್ತೇವೆ ಮತ್ತು ಒಂದು ಬಾರಿಯ ಪಾಸ್‌ವರ್ಡ್ ("ಒಟಿಪಿ") ಅನ್ನು ನಿಮಗೆ ಕಳುಹಿಸುವ ಮೂಲಕ ನಿಮ್ಮ ಫೋನ್‌ನಲ್ಲಿನ ಎಸ್‌ಎಂಎಸ್‌ಗಳಿಗೆ ಪ್ರವೇಶಾವಕಾಶವನ್ನು ವಿನಂತಿಸುತ್ತೇವೆ ಮತ್ತು ನಮ್ಮ ಪ್ಲಾಟ್‌ಫಾರಂನಲ್ಲಿ ನೋಂದಣಿ ಮಾಡುವಾಗ ನಿಮ್ಮ ಗುರುತನ್ನು ಪರಿಶೀಲಿಸಲು ಒಟಿಪಿ ನಮೂದಿಸುವ ಮೂಲಕ ಇದನ್ನು ನೀವು ದೃಢೀಕರಿಸುತ್ತೀರಿ. ನಿಮ್ಮ ಗುರುತನ್ನು ಪರಿಶೀಲಿಸಲು ಮತ್ತು ನಿಮ್ಮ ಖಾತೆ ಭದ್ರತೆಯನ್ನು ನಿರ್ವಹಿಸಲು. ಜನರೇಟ್ ಮಾಡಿದ ಒಟಿಪಿ ಅನ್ನು ಸ್ವಯಂಚಾಲಿತವಾಗಿ ಓದಲು ನಿಮ್ಮ ಎಸ್‌ಎಂಎಸ್ ಫೋಲ್ಡರ್‌ಗೆ ನಿಮ್ಮ ಪ್ರವೇಶಾವಕಾಶವನ್ನು ನಾವು ವಿನಂತಿಸುತ್ತೇವೆ. | (ಎಫ್) ಹೆಚ್ಚುವರಿ ಖಾತೆ ಭದ್ರತೆ: ನಾವು ನಿಮ್ಮ ಫೋನ್ ನಂಬರ್ ಅನ್ನು ಸಂಗ್ರಹಿಸುತ್ತೇವೆ ಮತ್ತು ಒಂದು ಬಾರಿಯ ಪಾಸ್‌ವರ್ಡ್ ("ಒಟಿಪಿ") ಅನ್ನು ನಿಮಗೆ ಕಳುಹಿಸುವ ಮೂಲಕ ನಿಮ್ಮ ಫೋನ್‌ನಲ್ಲಿನ ಎಸ್‌ಎಂಎಸ್‌ಗಳಿಗೆ ಪ್ರವೇಶಾವಕಾಶವನ್ನು ವಿನಂತಿಸುತ್ತೇವೆ ಮತ್ತು ನಮ್ಮ ಪ್ಲಾಟ್‌ಫಾರಂನಲ್ಲಿ ನೋಂದಣಿ ಮಾಡುವಾಗ ನಿಮ್ಮ ಗುರುತನ್ನು ಪರಿಶೀಲಿಸಲು ಒಟಿಪಿ ನಮೂದಿಸುವ ಮೂಲಕ ಇದನ್ನು ನೀವು ದೃಢೀಕರಿಸುತ್ತೀರಿ. ನಿಮ್ಮ ಗುರುತನ್ನು ಪರಿಶೀಲಿಸಲು ಮತ್ತು ನಿಮ್ಮ ಖಾತೆ ಭದ್ರತೆಯನ್ನು ನಿರ್ವಹಿಸಲು. ಜನರೇಟ್ ಮಾಡಿದ ಒಟಿಪಿ ಅನ್ನು ಸ್ವಯಂಚಾಲಿತವಾಗಿ ಓದಲು ನಿಮ್ಮ ಎಸ್‌ಎಂಎಸ್ ಫೋಲ್ಡರ್‌ಗೆ ನಿಮ್ಮ ಪ್ರವೇಶಾವಕಾಶವನ್ನು ನಾವು ವಿನಂತಿಸುತ್ತೇವೆ. |
ಸಂಪರ್ಕಗಳ ಪಟ್ಟಿ: ನಿಮ್ಮ ಮೊಬೈಲ್ ಸಾಧನದಲ್ಲಿ ಸಂಪರ್ಕಗಳ ಪಟ್ಟಿಯನ್ನು ನಾವು ಪ್ರವೇಶಿಸುತ್ತೇವೆ. ನಿಮ್ಮ ಸಂಪರ್ಕಗಳ ಪಟ್ಟಿಯನ್ನು ಪ್ರವೇಶಿಸುವುದಕ್ಕೂ ಮುನ್ನ ನಿಮ್ಮ ಸಮ್ಮತಿಯನ್ನು ನಾವು ಎಂದೂ ಕೇಳುತ್ತೇವೆ ಮತ್ತು ನಿಮ್ಮ ಸಂಪರ್ಕಗಳ ಪಟ್ಟಿಯ ಪ್ರವೇಶಾವಕಾಶವನ್ನು ನಮಗೆ ನೀಡಲು ನೀವು ನಿರಾಕರಿಸಬಹುದು. | ಸಲಹೆ ನೀಡಲು ಮತ್ತು ಪ್ಲಾಟ್‌ಫಾರಂಗೆ ನಿಮ್ಮ ಸ್ನೇಹಿತರು ಮತ್ತು ಇತರ ಸಂಪರ್ಕಗಳನ್ನು ಆಹ್ವಾನಿಸಲು ಮತ್ತು ಪ್ಲಾಟ್‌ಫಾರಂಗೆ ಯಾವುದೇ ವ್ಯಕ್ತಿ ಸೇರುವಾಗ ನಿಮಗೆ ಸೂಚನೆ ನೀಡಲು. |
ಸ್ಥಳ ಮಾಹಿತಿ: "ಸ್ಥಳ ಡೇಟಾ" ಎಂಬುದು ನಿಮ್ಮ ಜಿಪಿಎಸ್, ಐಪಿ ವಿಳಾಸ, ಮತ್ತು/ಅಥವಾ ಸ್ಥಳ ಮಾಹಿತಿಯನ್ನು ಒಳಗೊಂಡಿರುವ ಸಾರ್ವಜನಿಕ ಪೋಸ್ಟ್‌ಗಳಿಂದ ಪಡೆಯುವ ಮಾಹಿತಿಯಾಗಿದೆ. Yನಿಮ್ಮ ಖಾತೆಯನ್ನು ಹಲವು ಬಾರಿ ಲಾಗಿನ್ ಮಾಡಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳುವಂತಹ ನಮ್ಮ ಪ್ಲಾಟ್‌ಫಾರಂಅನ್ನು ಸುಧಾರಿಸುವುದಕ್ಕಾಗಿ ಮತ್ತು ಸೇವೆಗಳನ್ನು ಒದಗಿಸಲು ನಿಮ್ಮ ಐಪಿ ವಿಳಾಸ, ಸಾಧನ ಅಥವಾ ಇಂಟರ್ನೆಟ್ ಸೇವೆಯಿಂದ ಸ್ಥಳ ಮಾಹಿತಿಯನ್ನು ನಾವು ಪಡೆಯುವುದರಿಂದ ಪ್ಲಾಟ್‌ಫಾರಂ ಅನ್ನು ಪ್ರವೇಶಿಸುವಾಗ ನೀವು ನಮಗೆ ಮತ್ತುಇತರ ಪ್ಲಾಟ್‌ಫಾರಂ ಬಳಕೆದಾರರಿಗೆ ಕೆಲವು ಸ್ಥಳ ಮಾಹಿತಿಯನ್ನು ಬಹಿರಂಗಗೊಳಿಸಿತ್ತೀರಿ. | - ಭದ್ರತೆ, ಮೋಸದ ಗುರುತಿಸುವಿಕೆ ಮತ್ತು ಖಾತೆ ನಿರ್ವಹಣೆಗೆ; - ವರ್ಧಿತ ಕಂಟೆಂಟ್ ಟಾರ್ಗೆಟಿಂಗ್‌ಗೆ ಬಳಸಲು; - ನೀವು ಬಳಸಲು ಆಯ್ಕೆ ಮಾಡಿದ ಸ್ಥಳ ಆಧರಿತ ಸೇವೆಗಳನ್ನು ನಿಮಗೆ ಒದಗಿಸಲು: - ಕಾಲಕಾಲಕ್ಕೆ ಪ್ಲಾಟ್‌ಫಾರಂನಲ್ಲಿ ಲಭ್ಯವಾಗಿಸಬಹುದಾದ ಮಿನಿ ಅಪ್ಲಿಕೇಶನ್‌ಗಳಿಗೆ, ಅವು ಒದಗಿಸುವ ಸೇವೆಗಳನ್ನು ಆಧರಿಸಿ ಬೇಕಾಗುವ ಮಾಹಿತಿ (ಯಾವುದೇ ಮಿನಿ ಅಪ್ಲಿಕೇಶನ್‌ಗೆ ನಿಮ್ಮ ಸ್ಥಳವನ್ನು ಬಹಿರಂಗಗೊಳಿಸಲು ನೀವು ಆಯ್ಕೆ ಮಾಡಿದರೆ); - ಭಾಷೆ ಮತ್ತು ಸ್ಥಳ ಕಸ್ಟಮೈಸೇಶನ್ ಒದಗಿಸಲು. |
ಗ್ರಾಹಕ ಬೆಂಬಲ ಮಾಹಿತಿ: ಕಾಲಕಾಲಕ್ಕೆ ನಮ್ಮ ಪ್ಲಾಟ್‌ಫಾರಂ ಅನ್ನು ಬಳಸಲು ನಿಮಗೆ ಅಗತ್ಯವಿರಬಹುದಾದ ಯಾವುದೇ ನೆರವು ಅಥವಾ ಬೆಂಬಲ ಕುರಿತಂತೆ ನಮ್ಮ ಗ್ರಾಹಕ ಬೆಂಬಲ ತಂಡಕ್ಕೆ ನೀವು ಒದಗಿಸಬಹುದಾದ ಯಾವುದೇ ಮಾಹಿತಿ. | ಬೆಂಬಲ ಮತ್ತು ನೆರವನ್ನು ನಿಮಗೆ ಒದಗಿಸಲು ಸಹಾಯ ಮಾಡಲು |
ಸಾಧನ ಡೇಟಾ: "ಸಾಧನ ಡೇಟಾ" ಎಂಬುದು ಮಿತಿಗೆ ಒಳಪಡದಂತೆ ಈ ಮುಂದಿನದನ್ನು ಒಳಗೊಂಡಿರುತ್ತದೆ: § ಸಾಧನ ಗುಣಲಕ್ಷಣಗಳು: ಆಪರೇಟಿಂಗ್ ಸಿಸ್ಟಂ, ಆಪರೇಟಿಂಗ್ ಸಿಸ್ಟಂ ಆವೃತ್ತಿ ಮತ್ತು ಭಾಷೆ, ಹಾರ್ಡ್‌ವೇರ್ ಮತ್ತು ಸಾಫ್ಟ್‌ವೇರ್ ಆವೃತ್ತಿಗಳು, ಸಾಧನದ ಕಂಪನಿ ಮತ್ತು ಮಾಡೆಲ್, ಸ್ಕ್ರೀನ್ ರೆಸೊಲ್ಯುಶನ್, ಬ್ಯಾಟರಿ ಮಟ್ಟ, ಸಂಕೇತ ಸಾಮರ್ಥ್ಯ, ಸಾಧನದ RAM, ಸಾಧನದ ಬಿಟ್‌ರೇಟ್, ಲಭ್ಯ ಸಂಗ್ರಹ ಸ್ಥಳದಂತಹ ಮಾಹಿತಿ, ಸಾಧನದ CPU, ಬ್ರೌಸರ್ ವಿಧ, ಆಪ್ ಮತ್ತು ಫೈಲ್ ಹೆಸರುಗಳು ಮತ್ತು ವಿಧಗಳು ಮತ್ತು ಪ್ಲಗ್‌ಇನ್‌ಗಳಿಗೆ ಸಂಬಂಧಿಸಿದ ಮಾಹಿತಿ. § ಸಾಧನ ಕಾರ್ಯಾಚರಣೆಗಳು: ವಿಂಡೋ ಅನ್ನು ಮುನ್ನೆಲೆಗೆ ತರಲಾಗಿದೆ ಅಥವಾ ಹಿನ್ನೆಲೆಗೆ ತಳ್ಳಲಾಗಿದೆ ಎಂಬಂತಹ ಸಾಧನದಲ್ಲಿ ನಡೆಸಿದ ಕಾರ್ಯಾಚರಣೆಗಳು ಮತ್ತು ವರ್ತನೆಗಳ ಬಗೆಗಿನ ಮಾಹಿತಿ, § ಗುರುತುಕಾರಕಗಳು: ವಿಶಿಷ್ಟ ಗುರುತುಕಾರಕಗಳು, ಸಾಧನದ ಐಡಿಗಳು, ಜಾಹೀರಾತು ಐಡಿಗಳು ಮತ್ತು ಇತರ ಗುರುತುಕಾರಕಗಳು, ಉದಾ,. ಗೇಮ್‌ಗಳು, ಆಪ್‌ಗಳು ಅಥವಾ ನೀವು ಬಳಸುವ ಖಾತೆಗಳು. § ಸಾಧನ ಸಂಕೇತಗಳು: : ನಾವು ನಿಮ್ಮ ಬ್ಲೂಟೂತ್ ಸಂಕೇತಗಳು ಮತ್ತು ಸಮೀಪದ ವೈಫೈ ಆಕ್ಸೆಸ್ ಪಾಯಿಂಟ್‌ಗಳು, ಬೀಕಾನ್‌ಗಳು ಮತ್ತು ಸೆಲ್ ಟವರ್‌ಗಳ ಮಾಹಿತಿಯನ್ನು ಸಂಗ್ರಹಿಸಬಹುದು. § ಸಾಧನ ಸೆಟ್ಟಿಂಗ್‌ಗಳಿಂದ ಡೇಟಾ: iನಿಮ್ಮ ಜಿಪಿಎಸ್, ಸ್ಥಳ, ಕ್ಯಾಮೆರಾ ಅಥವಾ ಫೋಟೋಗಳಂತಹ ನೀವು ಆನ್ ಮಾಡುವ ಸಾಧನ ಸೆಟ್ಟಿಂಗ್‌ಗಳ ಮೂಲಕ ನಾವು ಸ್ವೀಕರಿಸಲು ನೀವು ಅನುವು ಮಾಡುವ ಮಾಹಿತಿ. § ನೆಟ್‌ವರ್ಕ್ ಮತ್ತು ಸಂಪರ್ಕಗಳು: ನಿಮ್ಮ ಮೊಬೈಲ್ ಆಪರೇಟರ್ ಅಥವಾ ಐಎಸ್‌ಪಿ, ನೆಟ್‌ವರ್ಕ್ ವಿಧ ಮತ್ತು ವೇಗ, ಡೇಟಾ ಬಳಕೆ, ಭಾಷೆ, ಸಮಯ ವಲಯ, ಮೊಬೈಲ್ ಫೋನ್ ನಂಬರ್, ಐಪಿ ವಿಳಾಸ ಮತ್ತು ಸಂಪರ್ಕ ವೇಗದಂತಹ ಮಾಹಿತಿ. § ಅಪ್ಲಿಕೇಶನ್ ಮತ್ತು ಅಪ್ಲಿಕೇಶನ್ ಆವೃತ್ತಿ: ನಿಮ್ಮ ಮೊಬೈಲ್ ಸಾಧನದಲ್ಲಿ ಸಂಗ್ರಹಿಸಿದ ಯಾವುದೇ ಮೊಬೈಲ್ ಅಪ್ಲಿಕೇಶನ್‌ಗಳು. § ಮಾಧ್ಯಮ: ಸೀಮಿತತೆ ಇಲ್ಲದೇ ಚಿತ್ರಗಳು, ವೀಡಿಯೋಗಳು ಮತ್ತು ಆಡಿಯೋ ಫೈಲ್‌ಗಳು ಮತ್ತು ನಿಮ್ಮ ಫೋನ್‌ನಲ್ಲಿ ಸಂಗ್ರಹ ಸ್ಥಳ ಸೇರಿದಂತೆ ನಿಮ್ಮ ಮೊಬೈಲ್ ಸಾಧನದಲ್ಲಿನ ಮಾಧ್ಯಮ ಗ್ಯಾಲರಿಯನ್ನು ನಾವು ಪ್ರವೇಶಿಸುತ್ತೇವೆ. ಆದಾಗ್ಯೂ, ನಿಮ್ಮ ಚಿತ್ರಗಳನ್ನು ಪ್ರವೇಶಿಸುವುದಕ್ಕೂ ಮೊದಲು ನಾವು ಎಂದಿಗೂ ನಿಮ್ಮ ಅನುಮತಿಯನ್ನು ಪಡೆಯುತ್ತೇವೆ ಮತ್ತು ಇಂತಹ ಪ್ರವೇಶಾವಕಾಶವನ್ನು ನಮಗೆ ನಿರಾಕರಿಸುವ ಆಯ್ಕೆಯನ್ನು ನೀವು ಹೊಂದಿರುತ್ತೀರಿ. | -ಪ್ಲಾಟ್‌ಫಾರಂ ಬಳಸಿ ಯಾವುದೇ ವೀಡಿಯೋಗಳು ಮತ್ತು ಚಿತ್ರಗಳ ಹಂಚಿಕೆಯನ್ನು ಅನುವು ಮಾಡುವುದು; - ನಿಮ್ಮ ಮೊಬೈಲ್ ಸಾಧನಕ್ಕೆ ಹೊಂದಲು ನಮ್ಮ ಪ್ಲಾಟ್‌ಫಾರಂ ಅನ್ನು ಕಸ್ಟಮೈಸ್ ಮಾಡುವುದು; - Fಕ್ಯಾಮೆರಾ ಕಾನ್ಫಿಗರೇಶನ್‌ಗಳ ಉದ್ದೇಶಕ್ಕೆ; - Uವಾಟ್ಸಾಪ್ ಮತ್ತು/ಅಥವಾ ಫೇಸ್‌ಬುಕ್ ಮೂಲಕ ಹಂಚಿಕೊಳ್ಳುವ ಉದ್ದೇಶಕ್ಕೆ ಪ್ಲಾಟ್‌ಫಾರಂನಿಂದ ಯಾವುದೇ ಕಂಟೆಂಟ್ ಡೌನ್‌ಲೋಡ್ ಮಾಡಲು ಅನುವಾಗಲು ನಿಮ್ಮ ಸಾಧನದಲ್ಲಿ ಸಾಕಷ್ಟು ಸಂಗ್ರಹ ಸ್ಥಳ ಇದೆಯೇ ಎಂಬುದನ್ನು ಅರ್ಥ ಮಾಡಿಕೊಳ್ಳುವುದು; - ನಮ್ಮ ಪ್ಲಾಟ್‌ಫಾರಂನಲ್ಲಿ ನಿಮ್ಮ ಬಳಕೆದಾರರ ಅನುಭವವನ್ನು ಆಪ್ಟಿಮೈಸ್ ಮಾಡುವುದು; - ಸೂಕ್ತ ಬಳಕೆದಾರರ ವೀಡಿಯೋ ಅನುಭವವನ್ನು ಒದಗಿಸುವುದು; - ನಿಮ್ಮ ಮೊಬೈಲ್ ಸಾಧನದಲ್ಲಿ ಡೌನ್‌ಲೋಡ್ ಮಾಡಿದ ಅಪ್ಲಿಕೇಶನ್‌ಗಳ ಮೂಲಕ ಪ್ಲಾಟ್‌ಫಾರಂನಲ್ಲಿ ಯಾವುದೇ ಕಂಟೆಂಟ್ ಹಂಚಿಕೆಯನ್ನು ಅನುವು ಮಾಡುವುದು; - Tನಮ್ಮ ನಿಯಮಗಳು, ಷರತ್ತುಗಳು ಮತ್ತು ನೀತಿಗಳನ್ನು ಜಾರಿಗೊಳಿಸುವುದಕ್ಕಾಗಿ ನಮ್ಮ ಗುರುತನ್ನು ಪರಿಶೀಲಿಸುವುದು; - ಪ್ಲಾಟ್‌ಫಾರಂ ಅನ್ನು ಸುಧಾರಿಸುವುದು. - ಸ್ಥಳ ಫೀಡ್ ಉದ್ದೇಶಗಳಿಗೆ ಬಳಸುವುದು; - ಬಳಕೆದಾರರ ಭಾಷೆ/ವೈಯಕ್ತಿಕಗೊಳಿಸುವಿಕೆಯನ್ನು ಪಡೆಯುವುದು; - ಕ್ಯಾಮೆರಾ ಲೆನ್ಸ್‌ಗಳ ಗುಣಮಟ್ಟವನ್ನು ಸುಧಾರಿಸುವುದು |
ಫೋನ್ ಕರೆ ಲಾಗ್‌ಗಳು -ಒಟಿಪಿ ನೋಂದಣಿಗೆ ಪರ್ಯಾಯವಾಗಿ, ತಪ್ಪಿದ ಕರೆ ಕಾರ್ಯವಿಧಾನದ ಮೂಲಕ ನಮ್ಮ ಬಳಕೆದಾರರು ತಮ್ಮ ಫೋನ್ ಸಂಖ್ಯೆಯನ್ನು ಪರಿಶೀಲಿಸಲು ಅನುಕೂಲವಾಗುವಂತೆ ನಾವು ಬಳಕೆದಾರರ ಸಾಧನದಿಂದ ಕರೆ ಲಾಗ್‌ಗಳನ್ನು ಓದುವ ಅನುಮತಿಯನ್ನು ಕೇಳುತ್ತೇವೆ. ನೋಂದಣಿ ಉದ್ದೇಶಗಳಿಗಾಗಿ ಒಟಿಪಿ ವಿತರಣೆಯಲ್ಲಿ ವಿಳಂಬವಾದರೆ ಈ ಕಾರ್ಯವಿಧಾನವನ್ನು ಬಳಕೆದಾರರು ಆರಿಸಿಕೊಳ್ಳುತ್ತಾರೆ. | ನೋಂದಣಿ ಉದ್ದೇಶಗಳಿಗಾಗಿ |
ಲೆನ್ಸ್‌ಗಳ ಗುಣಮಟ್ಟವನ್ನು ಸುಧಾರಿಸಲು ನಾವು ಆಪಲ್‌ನ ಟ್ರ್ಯೂಡೆಪ್ತ್ ಕ್ಯಾಮೆರಾದಿಂದಲೂ ಮಾಹಿತಿಯನ್ನು ಬಳಸಬಹುದು. ಟ್ರ್ಯೂಡೆಪ್ತ್ ಕ್ಯಾಮೆರಾದಿಂದ ಮಾಹಿತಿಯನ್ನು ನೈಜ ಸಮಯದಲ್ಲಿ ಬಳಸಲಾಗುತ್ತದೆ ಮತ್ತು ನಮ್ಮ ಸರ್ವರ್‌ಗಳಲ್ಲಿ ನಾವು ಈ ಮಾಹಿತಿಯನ್ನು ಸಂಗ್ರಹಿಸುವುದಿಲ್ಲ. ಈ ಮಾಹಿತಿಯನ್ನು ತೃತೀಯ ಪಕ್ಷಗಳೊಂದಿಗೆ ಹಂಚಿಕೊಳ್ಳಲಾಗುವುದಿಲ್ಲ. |
#
ನಿಮ್ಮ ಮಾಹಿತಿಯ ಬಹಿರಂಗಗೊಳಿಸುವಿಕೆನಾವು ನಿಮ್ಮ ಮಾಹಿತಿಯನ್ನು ಈ ಮುಂದಿನ ರೀತಿಯಲ್ಲಿ ಬಹಿರಂಗಗೊಳಿಸುತ್ತೇವೆ:
#
ಇತರರಿಗೆ ಗೋಚರಿಸುವ ಕಂಟೆಂಟ್ಸಾರ್ವಜನಿಕ ಕಂಟೆಂಟ್, ಅಂದರೆ, ನಿಮ್ಮ ಬಳಕೆದಾರರ ಪ್ರೊಫೈಲ್ ಅಥವಾ ಇನ್ನೊಂದು ಬಳಕೆದಾರರ ಪ್ರೊಫೈಲ್‌ನಲ್ಲಿ ನೀವು ಪೋಸ್ಟ್ ಮಾಡುವ ಯಾವುದೇ ಕಂಟೆಂಟ್, ಕಾಮೆಂಟ್ ಪೋಸ್ಟ್ ಮಾಡುವಂಥವುಗಳಿಗೆ ಹುಡುಕಾಟ ಇಂಜಿನ್‌ಗಳೂ ಸೇರಿದಂತೆ ಎಲ್ಲರಿಗೂ ಪ್ರವೇಶಾವಕಾಶ ಇರುತ್ತದೆ. ನಿಮ್ಮ ಪ್ರೊಫೈಲ್ ಪುಟ ಮಾಹಿತಿ ಸೇರಿದಂತೆ ಪ್ಲಾಟ್‌ಫಾರಂಗೆ ಪೋಸ್ಟ್ ಮಾಡುವ ಮೂಲಕ ನೀವು ಸ್ವಯಂಪ್ರೇರಿತವಾಗಿ ಬಹಿರಂಗಗೊಳಿಸುವ ಯಾವುದೇ ಮಾಹಿತಿಗೆ ಎಲ್ಲರಿಗೂ ಪ್ರವೇಶಾವಕಾಶ ಇರುತ್ತದೆ. ಪ್ಲಾಟ್‌ಫಾರಂನಲ್ಲಿ ಸಾರ್ವಜನಿಕಗೊಳಿಸಲು ನೀವು ಆಯ್ಕೆ ಮಾಡುವ ಕಂಟೆಂಟ್ ಅನ್ನು ಸಲ್ಲಿಕೆ, ಪೋಸ್ಟ್ ಅಥವಾ ಹಂಚಿಕೆ ಮಾಡಿದಾಗ, ಅದನ್ನು ಇತರರು ಪುನಃ ಹಂಚಿಕೊಳ್ಳಬಹುದು. ಯಾರೊಂದಿಗೆ ಇದನ್ನು ನೀವು ಹಂಚಿಕೊಳ್ಳಲು ಬಯಸುತ್ತೀರಿ ಎಂಬುದನ್ನು ನೀವು ನಿರ್ಧರಿಸಬಹುದು. ಯಾಕೆಂದರೆ, ನಮ್ಮ ಪ್ಲಾಟ್‌ಫಾರಂನಲ್ಲಿ ನಿಮ್ಮ ಚಟುವಟಿಕೆಯನ್ನು ನೋಡುವ ಜನರು, ನೀವು ಹಂಚಿಕೊಂಡಿರುವ ಪ್ರೇಕ್ಷಕರಿಂದಲೂ ಹೊರಗಿನ ಜನರೂ ಸೇರಿದಂತೆ ಪ್ಲಾಟ್‌ಫಾರಂನಲ್ಲಿ ಮತ್ತು ಹೊರಗೆ ಇತರರೊಂದಿಗೆ ಇದನ್ನು ಹಂಚಿಕೊಳ್ಳಬಹುದು.
ನಿಮ್ಮ ಫೋಟೋವನ್ನು ಪೋಸ್ಟ್ ಮಾಡುವುದು ಅಥವಾ ತಮ್ಮ ಯಾವುದೇ ಪೋಸ್ಟ್‌ಗಳಲ್ಲಿ ನಿಮ್ಮನ್ನು ಟ್ಯಾಗ್ ಮಾಡುವುದು ಸೇರಿದಂತೆ ಅವರು ಆಯ್ಕೆ ಮಾಡುವ ಪ್ರೇಕ್ಷಕರೊಂದಿಗೆ ನಿಮ್ಮ ಬಗ್ಗೆ ಕಂಟೆಂಟ್ ಅನ್ನು ರಚಿಸಲು ಮತ್ತು ಹಂಚಿಕೊಳ್ಳಲು ನಮ್ಮ ಪ್ಲಾಟ್‌ಫಾರಂ ಅನ್ನು ಬಳಕೆದಾರರು ಬಳಸಬಹುದು. ಯಾವುದೇ ಸಾಮಾಜಿಕ ಮಾಧ್ಯಮ ಸೈಟ್ ಅಥವಾ ಯಾವುದೇ ಇತರ ಆನ್‌ಲೈನ್ ಅಥವಾ ಆಫ್‌ಲೈನ್ ಪ್ಲಾಟ್‌ಫಾರಂನಲ್ಲಿ ಎಲ್ಲ ಸಾರ್ವಜನಿಕ ಕಂಟೆಂಟ್ ಅನ್ನು ಹಂಚಿಕೊಳ್ಳುವ ಹಕ್ಕನ್ನು ನಾವು ಕಾಯ್ದಿರಿಸಿದ್ದೇವೆ. ಈ ಗೌಪ್ಯತೆ ನೀತಿಯಲ್ಲಿ ಅಭಿವ್ಯಕ್ತಿಪೂರ್ವಕವಾಗಿ ಒದಗಿಸಿಲ್ಲದಿದ್ದಲ್ಲಿ, ಅನಾಮಿಕಗೊಳಿಸಿದ ಆಧಾರದಲ್ಲಿರುವುದನ್ನು ಹೊರತುಪಡಿಸಿ, ನಿಮ್ಮ ವೈಯಕ್ತಿಕ ಮಾಹಿತಿಯನ್ನು ತೃತೀಯ ಪಕ್ಷಗಳಿಗೆ ನಾವು ಎಂದಿಗೂ ಬಾಡಿಗೆಗೆ ನೀಡುವುದಿಲ್ಲ ಅಥವಾ ಮಾರಾಟ ಮಾಡುವುದಿಲ್ಲ.
#
ನಮ್ಮ ಕಂಪನಿಗಳ ಸಮೂಹದೊಂದಿಗೆ ಹಂಚಿಕೊಳ್ಳುವುದುನಮ್ಮ ಗುಂಪಿನ ಯಾವುದೇ ಸದಸ್ಯರೊಂದಿಗೆ ನಿಮ್ಮ ವೈಯಕ್ತಿಕ ಮಾಹಿತಿ ಸೇರಿದಂತೆ ನೀವು ನಮ್ಮೊಂದಿಗೆ ಹಂಚಿಕೊಳ್ಳುವ ಮಾಹಿತಿಯನ್ನು ನಾವು ಹಂಚಿಕೊಳ್ಳಬಹುದು. "ಸಮೂಹ" ಎಂಬ ಶಬ್ದದ ಅರ್ಥವು ನಮ್ಮ ನಿಯಂತ್ರಣದಲ್ಲಿರುವ ಯಾವುದೇ ಸಂಸ್ಥೆ ಅಥವಾ ನಾವು ನಿಯಂತ್ರಣಕ್ಕೊಳಪಟ್ಟಿರುವ ಯಾವುದೇ ಸಂಸ್ಥೆ ಅಥವಾ ನೇರವಾಗಿ ಆಗಲೀ ಅಥವಾ ಪರೋಕ್ಷವಾಗಿಯಾಗಲೀ ನಮ್ಮ ಸಾಮಾನ್ಯ ನಿಯಂತ್ರಣದಲ್ಲಿರುವ ಯಾವುದೇ ಸಂಸ್ಥೆ ಎಂಬ ಅರ್ಥವನ್ನು ಹೊಂದಿರುತ್ತದೆ.
#
ಇತರರೊಂದಿಗೆ ನೀವು ಹಂಚಿಕೊಳ್ಳುವುದುನಮ್ಮ ಪ್ಲಾಟ್‌ಫಾರಂ ಅನ್ನು ಬಳಸಿ ನೀವು ಕಂಟೆಂಟ್ ಹಂಚಿಕೊಳ್ಳುವಾಗ ಮತ್ತು ಸಂವಹನ ನಡೆಸುವಾಗ, ಇಂತಹ ಕಂಟೆಂಟ್ ಅನ್ನು ಯಾರು ವೀಕ್ಷಿಸಬಹುದು ಎಂಬುದನ್ನು ನೀವು ಆಯ್ಕೆ ಮಾಡಬಹುದು. ಉದಾಹರಣೆಗೆ, ಫೇಸ್‌ಬುಕ್‌ನಲ್ಲಿ ನಮ್ಮ ಪ್ಲಾಟ್‌ಫಾರಂನಿಂದ ಯಾವುದೇ ಕಂಟೆಂಟ್ ಅನ್ನು ಪೋಸ್ಟ್ ಮಾಡುವಾಗ, ಪೋಸ್ಟ್‌ಗೆ ಪ್ರೇಕ್ಷಕರನ್ನು ಸ್ನೇಹಿತರು, ಸ್ನೇಹಿತರ ಸಮೂಹ ಅಥವಾ ನಿಮ್ಮ ಎಲ್ಲ ಸ್ನೇಹಿತರು ಎಂಬಂತೆ ನೀವು ಪ್ರೇಕ್ಷಕರನ್ನು ಆಯ್ಕೆ ಮಾಡಬಹುದು. ಇದೇ ರೀತಿ, ನಿಮ್ಮ ಪ್ಲಾಟ್‌ಫಾರಂನಲ್ಲಿ ಹಂಚಿಕೊಳ್ಳಲು ನಿಮ್ಮ ಮೊಬೈಲ್ ಸಾಧನದಲ್ಲಿ ವಾಟ್ಸ್‌ಆಪ್ ಅಥವಾ ಯಾವುದೇ ಇತರ ಅಪ್ಲಿಕೇಶನ್ ಅನ್ನು ನೀವು ಬಳಸಿದಾಗ, ಕಂಟೆಂಟ್ ಅನ್ನು ನೀವು ಯಾರೊಂದಿಗೆ ಹಂಚಿಕೊಳ್ಳುತ್ತೀರಿ ಎಂಬುದನ್ನು ಆಯ್ಕೆ ಮಾಡಿ. ನೀವು ಹಂಚಿಕೊಂಡಿರುವ ಮಾಹಿತಿಯನ್ನು ಅಂತಹ ವ್ಯಕ್ತಿಗಳು (ಪ್ಲಾಟ್‌ಫಾರಂನಲ್ಲಿ ಲಭ್ಯವಿರುವ ವಾಟ್ಸಾಪ್ ಅಥವಾ ಫೇಸ್‌ಬುಕ್‌ನಂತಹ ಯಾವುದೇ ಹಂಚಿಕೆ ಆಯ್ಕೆಗಳ ಮೂಲಕ ಯಾರೊಂದಿಗೆ ನೀವು ಕಂಟೆಂಟ್ ಅನ್ನು ಹಂಚಿಕೊಳ್ಳಲು ಆಯ್ಕೆ ಮಾಡಿಕೊಳ್ಳುತ್ತೀರೋ ಅಂತಹ ವ್ಯಕ್ತಿಗಳು) ಬಳಸುವ ರೀತಿಯನ್ನು ನಾವು ನಿಯಂತ್ರಿಸುವುದಿಲ್ಲ ಮತ್ತು ನಾವು ಬಾಧ್ಯವಾಗಿರುವುದಿಲ್ಲ.
#
ತೃತೀಯ ಪಕ್ಷಗಳೊಂದಿಗೆ ಹಂಚಿಕೊಳ್ಳುವುದುಆಯ್ದ ತೃತೀಯ ಪಕ್ಷಗಳೊಂದಿಗೆ ನಾವು ನಿಮ್ಮ ಮಾಹಿತಿಯನ್ನು ಹಂಚಿಕೊಳ್ಳಬಹುದು (ವೈಯಕ್ತಿಕ ಮಾಹಿತಿ ಸೇರಿದಂತೆ):
- ವ್ಯಾಪಾರ ಪಾಲುದಾರರು, ಪೂರೈಕೆದಾರರು ಮತ್ತು ಉಪ-ಗುತ್ತಿಗೆದಾರರು ("ಅಂಗಸಂಸ್ಥೆಗಳು"). ಸೇವೆ ಮತ್ತು ಅಂಗಸಂಸ್ಥೆಗಳ ಸ್ವಂತ ಸೇವೆಗಳನ್ನು ಒದಗಿಸಲು, ಅರ್ಥಮಾಡಿಕೊಳ್ಳಲು ಮತ್ತು ಸುಧಾರಿಸಿ ಸಹಾಯ ಮಾಡಲು ಅಂಗಸಂಸ್ಥೆಗಳು ಈ ಮಾಹಿತಿಯನ್ನು ಬಳಸಬಹುದು.
- ನಿಮಗೆ ಮತ್ತು ಇತರರಿಗೆ ಸೂಕ್ತ ಜಾಹೀರಾತುಗಳನ್ನು ಆಯ್ಕೆ ಮಾಡುವುದು ಮತ್ತು ಒದಗಿಸುವುದು ಜಾಹೀರಾತುದಾರರು ಮತ್ತು ಜಾಹೀರಾತು ನೆಟ್‌ವರ್ಕ್‌ಗೆ ಅಗತ್ಯವಿರುತ್ತದೆ. ನಮ್ಮ ಜಾಹೀರಾತುದಾರರಿಗೆ ಗುರುತಿಸಬಹುದಾದ ವ್ಯಕ್ತಿಗಳ ಬಗ್ಗೆ ಮಾಹಿತಿಯನ್ನು ನಾವು ಬಹಿರಂಗಗೊಳಿಸುವುದಿಲ್ಲ. ಆದರೆ, ನಮ್ಮ ಬಳಕೆದಾರರಿಗೆ ಕ್ರೋಢೀಕೃತ ಮಾಹಿತಿಯನ್ನು ನಾವು ಒದಗಿಸಬಹುದು (ಉದಾಹರಣೆಗೆ, ನಿರ್ದಿಷ್ಟ ವಯೋಸಮೂಹದ ಯಾವುದೇ ನಿರ್ದಿಷ್ಟ ಸಂಖ್ಯೆಯ ಮಹಿಳೆಯುರು ಅವರ ಜಾಹೀರಾತನ್ನು ನಿರ್ದಿಷ್ಟ ದಿನದಂದು ಕ್ಲಿಕ್ ಮಾಡಿದ್ದಾರೆ ಎಂದು ಅವರಿಗೆ ನಾವು ಮಾಹಿತಿ ನೀಡಬಹುದು). ಜಾಹೀರಾತುದಾರರು ಟಾರ್ಗೆಟ್ ಮಾಡಲು ಬಯಸಿದ ಪ್ರೇಕ್ಷಕರ ವಿಧವನ್ನು ತಲುಪಲು ಅವರಿಗೆ ಸಹಾಯ ಮಾಡಲೂ ಇಂತಹ ಕ್ರೋಢೀಕೃತ ಮಾಹಿತಿಯನ್ನು ನಾವು ಬಳಸಬಹುದು.
- ಯಾವುದೇ ಕಾನೂನು ಬಾಧ್ಯತೆ ಅಥವಾ ಯಾವುದೇ ಸರ್ಕಾರಿ ವಿನಂತಿಗೆ ಬದ್ಧವಾಗಲು ನಿಮ್ಮ ವೈಯಕ್ತಿಕ ಡೇಟಾ ಅಥವಾ ಮಾಹಿತಿಯನ್ನು ಹಂಚಿಕೊಳ್ಳಲು ಸಕಾರಣವಾಗಿ ಅಗತ್ಯ ಎಂದು ನಾವು ಉತ್ತಮ ನಂಬಿಕೆಯನ್ನು ಹೊಂದಿದ್ದರೆ; ಅಥವಾ ಸ್ವತ್ತು ಅಥವಾ ಕಂಪನಿ, ನಮ್ಮ ಗ್ರಾಹರಕು ಅಥವಾ ಸಾರ್ವಜನಿಕರ ಸುರಕ್ಷತೆಗೆ ಅಪಾಯವನ್ನು ತಡೆಯಲು ಅಥವಾ ಹಕ್ಕುಗಳನ್ನು ರಕ್ಷಿಸಲು; ಸಾರ್ವಜನಿಕ ಸುರಕ್ಷತೆ, ಮೋಸ, ಭದ್ರತೆ ಅಥವಾ ತಾಂತ್ರಿಕ ಸಮಸ್ಯೆಗಳನ್ನು ಗುರುತಿಸಲು, ತಡೆಯಲು ಅಥವಾ ಇತರ ರೀತಿಯಲ್ಲಿ ಪರಿಹರಿಸಲು ಸರ್ಕಾರಿ ಸಂಸ್ಥೆಗಳು ಅಥವಾ ಕಾನೂನು ಜಾರಿ ಏಜೆನ್ಸಿಗಳು;
ಈ ಮುಂದಿನ ಸನ್ನಿವೇಶಗಳಲ್ಲಿ ಆಯ್ದ ತೃತೀಯ ಪಕ್ಷಗಳೊಂದಿಗೂ ನಿಮ್ಮ ಮಾಹಿತಿಯನ್ನು (ವೈಯಕ್ತಿಕ ಮಾಹಿತಿ ಸೇರಿದಂತೆ) ನಾವು ಬಹಿರಂಗಗೊಳಿಸಬಹುದು:
ಕಂಪನಿ ಅಥವಾ ಗಮನಾರ್ಹವಾಗಿ ಅದರ ಎಲ್ಲ ಸ್ವತ್ತುಗಳನ್ನು ತೃತೀಯ ಪಕ್ಷಗಳು ಸ್ವಾಧೀನಪಡಿಸಿಕೊಂಡರೆ, ಇಂತಹ ಪ್ರಕರಣದಲ್ಲಿ ತನ್ನ ಗ್ರಾಹಕರ ಬಗ್ಗೆ ಹೊಂದಿರುವ ಮಾಹಿತಿಯು ವರ್ಗಾವಣೆಗೊಂಡ ಸ್ವತ್ತುಗಳಲ್ಲಿ ಒಂದಾಗಿರುತ್ತದೆ. ನಾವು ವಿಲೀನ, ಸ್ವಾಧೀನ, ದಿವಾಳಿತನ, ಮರುಸಂಘಟನೆ ಅಥವಾ ಸ್ವತ್ತು ಮಾರಾಟದಲ್ಲಿ ತೊಡಗಿಸಿಕೊಂಡರೆ, ನಿಮ್ಮ ಮಾಹಿತಿಯನ್ನು ವರ್ಗಾವಣೆ ಮಾಡಲಾಗುತ್ತದೆ ಅಥವಾ ವಿಭಿನ್ನ ಗೌಪ್ಯತೆ ನೀತಿಗೆ ಒಳಪಡುತ್ತದೆ, ಇದನ್ನು ನಾವು ನಿಮಗೆ ಮುಂಗಡವಾಗಿ ಸೂಚನೆ ನೀಡುತ್ತೇ. ಇದರಿಂದಾಗಿ ನೀವು ವರ್ಗಾವಣೆಗೂ ಮುನ್ನ ನಿಮ್ಮ ಖಾತೆಯನ್ನು ಅಳಿಸುವ ಮೂಲಕ ಇಂತಹ ಹೊಸ ನೀತಿಯಿಂದ ನೀವು ಹೊರಗಿರಬಹುದು.
ನಮ್ಮ ನಿಯಮಗಳು ಮತ್ತು/ಅಥವಾ ಯಾವುದೇ ಇತರ ಕರಾರುಗಳನ್ನು ಜಾರಿಗೊಳಿಸಲು ಅಥವಾ ಅನ್ವಯಿಸುವುದಕ್ಕಾಗಿ.
#
ಭದ್ರತಾ ಅಭ್ಯಾಸಗಳುನಾವು ಸಂಗ್ರಹಿಸಿದ ಮಾಹಿತಿಯನ್ನು ಸುರಕ್ಷಿತಗೊಳಿಸಲು ಸೂಕ್ತ ತಾಂತ್ರಿಕ ಮತ್ತು ಭದ್ರತಾ ಕ್ರಮಗಳನ್ನು ನಾವು ಹೊಂದಿದ್ದೇವೆ. ಪ್ಲಾಟ್‌ಫಾರಂ ಪ್ರವೇಶಾವಕಾಶಕ್ಕೆ ನಿಮಗೆ ಅನುವು ಮಾಡಲು ನಾವು ನಿಮಗೆ ನೀಡಿರುವ (ಅಥವಾ ನೀವು ಆಯ್ಕೆ ಮಾಡಿರುವ) ಬಳಕೆದಾರರ ಹೆಸರಿನಂತಹ ವಿವರಗಳನ್ನು ಗೌಪ್ಯವಾಗಿಡುವುದಕ್ಕೆ ನೀವು ಜವಾಬ್ದಾರರಾಗಿರುತ್ತೀರಿ. ಯಾರೊಂದಿಗೂ ಪಾಸ್‌ವರ್ಡ್ ಅನ್ನು ಹಂಚಿಕೊಳ್ಳದಂತೆ ನಾವು ನಿಮ್ಮನ್ನು ಕೇಳುತ್ತೇವೆ.
#
ನಿಮ್ಮ ವೈಯಕ್ತಿಕ ಮಾಹಿತಿಯನ್ನು ನಾವು ಎಲ್ಲಿ ಸಂಗ್ರಹಿಸುತ್ತೇವೆನಾವು ನಿಮ್ಮ ಡೇಟಾವನ್ನು ಅಮೇಜಾನ್ ವೆಬ್ ಸರ್ವೀಸಸ್ ಇಂಕ್ (ಕೇಂದ್ರ ಕಚೇರಿ 410 ಟೆರ್ರಿ ಏವ್. ಎನ್ ಸೀಟಲ್, ವಾಷಿಂಗ್ಟನ್ 98109) ಒದಗಿಸಿದ ಅಮೇಜಾನ್ ವೆಬ್ ಸರ್ವೀಸಸ್ ಕ್ಲೌಡ್ ಪ್ಲಾಟ್‌ಫಾರಂನಲ್ಲಿ ಮತ್ತು ಗೂಗಲ್ ಎಲ್‌ಎಲ್‌ಸಿ (ಕೇಂದ್ರ ಕಚೇರಿ 1101 ಎಸ್ ಫ್ಲವರ್ ಸ್ಟ್ರೀಟ್, ಬರ್ಬ್ಯಾಂಕ್, ಕ್ಯಾಲಿಫೋರ್ನಿಯಾ 91502 ಯುಎಸ್‌ಎ) ಒದಗಿಸಿದ ಗೂಗಲ್ ಕ್ಲೌಡ್ ಪ್ಲಾಟ್‌ಫಾರಂನಲ್ಲಿ, ಭಾರತ ಮತ್ತು ವಿದೇಶದಲ್ಲಿರುವ ಸರ್ವರ್‌ಗಳಲ್ಲಿ ನಾವು ಸಂಗ್ರಹಿಸುತ್ತೇವೆ. ಮಾಹಿತಿಯ ನಷ್ಟ, ದುರ್ಬಳಕೆ ಮತ್ತು ಬದಲಾವಣೆಯಿಂದ ರಕ್ಷಿಸಲು ಅಮೇಜಾನ್ ವೆಬ್ ಸರ್ವೀಸಸ್ ಮತ್ತು ಗೂಗಲ್ ಕ್ಲೌಡ್ ಪ್ಲಾಟ್‌ಫಾರಂ ಸುರಕ್ಷತಾ ಕ್ರಮಗಳನ್ನು ಅನುಷ್ಠಾನಗೊಳಿಸುತ್ತವೆ ಮತ್ತು ಇದರ ವಿವರಗಳು https://aws.amazon.com/ ಮತ್ತು https://cloud.google.com ನಲ್ಲಿ ಲಭ್ಯವಿವೆ. ಅಮೇಜಾನ್ ವೆಬ್ ಸರ್ವೀಸಸ್ ಮತ್ತು ಗೂಗಲ್ ಕ್ಲೌಡ್ ಪ್ಲಾಟ್‌ಫಾರಂ ಅಳವಡಿಸಿಕೊಂಡ ಗೌಪ್ಯತೆ ನೀತಿಗಳು https://aws.amazon.com/privacy/?nc1=f_pr ಮತ್ತು https://policies.google.com/privacy ನಲ್ಲಿ ಲಭ್ಯವಿವೆ.
#
ಈ ನೀತಿಗೆ ಬದಲಾವಣೆಗಳುಈ ಗೌಪ್ಯತೆ ನೀತಿಯನ್ನು ಕಾಲಕಾಲಕ್ಕೆ ಕಂಪನಿ ನವೀಕರಿಸಬಹುದು. ನೀವು ತಿಳಿದುಕೊಳ್ಳುವುದು ಪ್ರಮುಖವಾಗಿರುವ ಯಾವುದೇ ಬದಲಾವಣೆಯನ್ನು ಈ ಗೌಪ್ಯತೆ ನೀತಿಗೆ ಮಾಡಿದರೂ, ಈ ಲಿಂಕ್‌ನಲ್ಲಿ ನಾವು ನವೀಕರಿಸಿದ ಗೌಪ್ಯತೆ ನೀತಿಯನ್ನು ನಾವು ಪೋಸ್ಟ್ ಮಾಡುತ್ತೇವೆ.
#
ಹಕ್ಕುಹೇಳಿಕೆದುರಾದೃಷ್ಟವಶಾತ್, ಇಂಟರ್ನೆಟ್ ಮೂಲಕ ಮಾಹಿತಿಯ ವರ್ಗಾವಣೆಯು ಸಂಪೂರ್ಣವಾಗಿ ಸುರಕ್ಷಿತವಾಗಿಲ್ಲದಿರಬಹುದು. ನಿಮ್ಮ ವೈಯಕ್ತಿಕ ಮಾಹಿತಿಯನ್ನು ರಕ್ಷಿಸಲು ನಾವು ಉತ್ತಮ ಪ್ರಯತ್ನವನ್ನು ಮಾಡುತ್ತೇವೆಯಾದರೂ, ಪ್ಲಾಟ್‌ಫಾರಂಗೆ ವರ್ಗಾವಣೆ ಮಾಡಿದ ನಿಮ್ಮ ಡೇಟಾದ ಸುರಕ್ಷತೆಗೆ ನಾವು ಗ್ಯಾರಂಟಿ ನೀಡಲಾಗದು; ಯಾವುದೇ ವರ್ಗಾವಣೆಯು ನಿಮ್ಮ ಸ್ವಂತ ರಿಸ್ಕ್‌ಗೆ ಒಳಪಟ್ಟಿರುತ್ತದೆ. ನಿಮ್ಮ ಮಾಹಿತಿಯನ್ನು ನಾವು ಸ್ವೀಕರಿಸಿದ ನಂತರ, ನಮ್ಮ ಸಾಮರ್ಥ್ಯಕ್ಕೆ ಉತ್ತಮವಾಗಿ ಅನಧಿಕೃತ ಪ್ರವೇಶಾವಕಾಶವನ್ನು ತಡೆಯಲು ಕಠಿಣ ಕ್ರಮಗಳು ಮತ್ತು ಭದ್ರತಾ ವೈಶಿಷ್ಟ್ಯಗಳನ್ನು ನಾವು ಬಳಸುತ್ತೇವೆ.
#
ನಿಮ್ಮ ಹಕ್ಕುಗಳುನಿಮ್ಮ ಬಳಕೆದಾರರ ಖಾತೆ/ಪ್ರೊಫೈಲ್ ಮತ್ತು ನಿಮ್ಮ ಖಾತೆ/ಪ್ರೊಫೈಲ್‌ನಿಂದ ಯಾವುದೇ ಸಮಯದಲ್ಲಿ ಕಂಟೆಂಟ್ ಅನ್ನು ತೆಗೆದುಹಾಕಲು ಅಥವಾ ಅಳಿಸಲು ನೀವು ಮುಕ್ತವಾಗಿದ್ದೀರಿ. ಆದಾಗ್ಯೂ, ನಿಮ್ಮ ಚಟುವಟಿಕೆಗಳ ಇತಿಹಾಸ ಮತ್ತು ನಮ್ಮ ಪ್ಲಾಟ್‌ಫಾರಂನಲ್ಲಿ ಖಾತೆಯು ನಮ್ಮಲ್ಲಿ ಲಭ್ಯವಿರುತ್ತದೆ, ನಮ್ಮ ಡೇಟಾ ಧಾರಣ ನೀತಿಗಳ ಪ್ರಕಾರ ನಿಮ್ಮ ಖಾತೆ ಅಥವಾ ವಿಷಯವನ್ನು ನಾವು ಅಳಿಸಿದಾಗ ಸೇರಿದಂತೆ.
ಲಾಗಿನ್ ಮಾಡುವ ಮೂಲಕ ಮತ್ತು ನಿಮ್ಮ ಪ್ರೊಫೈಲ್ ಪುಟಕ್ಕೆ ಭೇಟಿ ನೀಡುವ ಮೂಲಕ ನಿಮ್ಮ ಖಾತೆಯಿಂದ ವೈಯಕ್ತಿಕ ಮಾಹಿತಿಯನ್ನು ನೀವು ಸರಿಪಡಿಸಬಹುದು, ತಿದ್ದುಪಡಿ ಮಾಡಬಹದು, ಸೇರಿಸಬಹುದು ಅಥವಾ ಅಳಿಸಬಹುದು. ಈ ಮೇಲೆ ಸೂಚಿಸಿದಂತೆ, ಈ ಸಂದೇಶದಲ್ಲಿ ಈ ಮುಂದಿನ ಸೂಚನೆಗಳ ಮೂಲಕ ನಮ್ಮಿಂದ ಅನಗತ್ಯ ಇಮೇಲ್ ಸಂವಹನಗಳಿಂದ ನೀವು ಹೊರಗುಳಿಯಬಹುದು. ಆದಾಗ್ಯೂ, ನಿಮ್ಮ ಖಾತೆಯನ್ನು ಅಳಿಸುವವರೆಗೆ ಎಲ್ಲ ಸಿಸ್ಟಮ್ ಇಮೇಲ್‌ಗಳನ್ನು ನೀವು ಸ್ವೀಕರಿಸುತ್ತಿರುತ್ತೀರಿ.ಪ್ಲಾಟ್‌ಫಾರ್ಮ್‌ನಿಂದ ನಿಮ್ಮ ಖಾತೆಯನ್ನು ಅಳಿಸಲು ಮತ್ತು ಬಳಕೆದಾರರ ಡೇಟಾವನ್ನು ತೆಗೆದುಹಾಕಲು, ದಯವಿಟ್ಟು ನಿಮ್ಮ ಅಪ್ಲಿಕೇಶನ್‌ನ ಸೆಟ್ಟಿಂಗ್‌ಗಳಿಗೆ ಹೋಗಿ ಮತ್ತು 'ಖಾತೆ ಅಳಿಸುವಿಕೆಗೆ ವಿನಂತಿ'/'ನನ್ನ ಡೇಟಾವನ್ನು ಅಳಿಸಿ' ಆಯ್ಕೆಯನ್ನು ಕ್ಲಿಕ್ ಮಾಡಿ. ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಖಾತೆ ಡಿಲೀಟ್ ಮಾಡುವ ನೀತಿ - FAQs ಮತ್ತು ನಮ್ಮ ಡೇಟಾ ಧಾರಣ ನೀತಿಗಳನ್ನು ಓದಿ.
#
ಡೇಟಾ ಹಿಡಿದಿಟ್ಟುಕೊಳ್ಳುವಿಕೆಮಾಹಿತಿಯನ್ನು ಕಾನೂನುಬದ್ಧವಾಗಿ ಬಳಸಬಹುದಾದ ಉದ್ದೇಶಗಳಿಗಾಗಿ ನಾವು ನಿಮ್ಮ ಸೂಕ್ಷ್ಮ ವೈಯಕ್ತಿಕ ಮಾಹಿತಿಯನ್ನು (ಈ ಪ್ಯಾರಾಗ್ರಾಫ್‌ನಲ್ಲಿ ಕೆಳಗೆ ವಿವರಿಸಲಾಗಿದೆ) ಅಗತ್ಯಕ್ಕಿಂತ ಹೆಚ್ಚು ಕಾಲ ಉಳಿಸಿಕೊಳ್ಳುವುದಿಲ್ಲ. ಪ್ಲಾಟ್‌ಫಾರ್ಮ್‌ನಲ್ಲಿ ನೀವು ರಚಿಸಿದ ಯಾವುದೇ ಇತರ ವೀಡಿಯೊ/ಚಿತ್ರವನ್ನು ಅಪ್‌ಲೋಡ್ ಮಾಡಿದ ದಿನಾಂಕದಿಂದ 180 ದಿನಗಳವರೆಗೆ ಸಂಗ್ರಹಿಸಲಾಗುತ್ತದೆ. 180 ದಿನಗಳು ಕಳೆದ ನಂತರ, ಅಂತಹ ಎಲ್ಲಾ ಬಳಕೆದಾರರ ವಿಷಯವನ್ನು ಸ್ವಯಂಚಾಲಿತವಾಗಿ ಅಳಿಸಲಾಗುತ್ತದೆ. ಆದಾಗ್ಯೂ, ಕೆಲವು ಮೂರನೇ ವ್ಯಕ್ತಿಗಳೊಂದಿಗಿನ ಒಪ್ಪಂದದ ಕಾರ್ಯಕ್ಷಮತೆಗಾಗಿ, ಪ್ಲಾಟ್‌ಫಾರ್ಮ್‌ನ ವ್ಯಾಪಾರ ಉದ್ದೇಶಗಳು, ಪ್ಲಾಟ್‌ಫಾರ್ಮ್‌ನಲ್ಲಿ ನೀಡಲಾದ ಉತ್ಪನ್ನಗಳ ನಿಬಂಧನೆ ಮತ್ತು ಅನ್ವಯವಾಗುವ ಕಾನೂನಿನ ಅನುಸರಣೆಗಾಗಿ, ನಾವು 180 ದಿನಗಳ ಧಾರಣ ಅವಧಿಯನ್ನು ಮೀರಿ ವಿಷಯವನ್ನು ಉಳಿಸಿಕೊಳ್ಳಬಹುದು. 180 ದಿನಗಳ ಧಾರಣ ಅವಧಿಯನ್ನು ಮೀರಿ ಪ್ರವೇಶಕ್ಕಾಗಿ ಅಂತಹ ವಿಷಯದ ಪ್ರತಿಗಳನ್ನು ರಚಿಸಲು ನೀವು ಮಾತ್ರ ಜವಾಬ್ದಾರರಾಗಿರುತ್ತೀರಿ. ನಿಮ್ಮ ಖಾತೆಯನ್ನು ಅಳಿಸಲು ಸಹ ನೀವು ಆಯ್ಕೆ ಮಾಡಬಹುದು. ನಿಷ್ಕ್ರಿಯತೆಯಿಂದಾಗಿ ನಿಮ್ಮ ಖಾತೆಯು ಸ್ವಯಂ ಅಳಿಸಲ್ಪಟ್ಟಿರಬಹುದು. ಪ್ಲಾಟ್‌ಫಾರ್ಮ್‌ನ ಕ್ಯಾಶ್ ಮಾಡಿದ ಮತ್ತು ಆರ್ಕೈವ್ ಮಾಡಿದ ಪುಟಗಳಲ್ಲಿ ಅಥವಾ ಇತರ ಬಳಕೆದಾರರು ಆ ಮಾಹಿತಿಯನ್ನು ನಕಲಿಸಿದ್ದರೆ ಅಥವಾ ಉಳಿಸಿದ್ದರೆ, ನಮ್ಮ ಸಿಸ್ಟಂಗಳಲ್ಲಿ ಯಾವುದೇ ಸಾರ್ವಜನಿಕ ವಿಷಯದ ನಕಲುಗಳನ್ನು ಉಳಿಸಿಕೊಳ್ಳುವ ಸಾಧ್ಯತೆಯೂ ಇದೆ. ಹೆಚ್ಚುವರಿಯಾಗಿ, ಇಂಟರ್ನೆಟ್‌ನ ಸ್ವರೂಪದಿಂದಾಗಿ, ನಾವು/ನೀವು ನಿಮ್ಮ ಖಾತೆಯಿಂದ ತೆಗೆದುಹಾಕಿರುವ ಅಥವಾ ಅಳಿಸಿದ ವಿಷಯವನ್ನು ಒಳಗೊಂಡಂತೆ ನಿಮ್ಮ ವಿಷಯದ ಪ್ರತಿಗಳು ಇಂಟರ್ನೆಟ್‌ನಲ್ಲಿ ಬೇರೆಡೆ ಅಸ್ತಿತ್ವದಲ್ಲಿರಬಹುದು ಮತ್ತು ಅನಿರ್ದಿಷ್ಟವಾಗಿ ಉಳಿಸಿಕೊಳ್ಳಬಹುದು. "ಸೂಕ್ಷ್ಮ ವೈಯಕ್ತಿಕ ಮಾಹಿತಿ" ಎಂದರೆ ಪಾಸ್‌ವರ್ಡ್‌ಗಳು ಮತ್ತು ನಿಯಮಗಳ ಸೆಕ್ಷನ್ 3 ರ ಅಡಿಯಲ್ಲಿ ಸೂಕ್ಷ್ಮ ಎಂದು ವರ್ಗೀಕರಿಸಲಾದ ಯಾವುದೇ ಇತರ ಮಾಹಿತಿ.
#
ತೃತೀಯ ಪಕ್ಷದ ಲಿಂಕ್ಗಳುಪ್ಲಾಟ್ಫಾರಂ ಕಾಲಕಾಲಕ್ಕೆ ನಮ್ಮ ಪಾಲುದಾರರ ನೆಟ್‌ವರ್ಕ್‌ಗಳು, ಜಾಹೀರಾತುದಾರರು, ಅಂಗಸಂಸ್ಥೆಗಳು ಮತ್ತು/ಅಥವಾ ಯಾವುದೇ ಇತರ ವೆಬ್‌ಸೈಟ್‌ಗಳು ಅಥವಾ ಮೊಬೈಲ್ ಅಪ್ಲಿಕೇಶನ್‌ಗಳಿಂದ ಮತ್ತು ಅವುಗಳಿಗೆ ಲಿಂಕ್‌ಗಳನ್ನು ಹೊಂದಿರಬಹುದು. ನೀವು ಈ ವೆಬ್‌ಸೈಟ್‌ಗಳಿಗೆ ಲಿಂಕ್‌ಗಳನ್ನು ಅನುಸರಿಸಿದರೆ, ಈ ವೆಬ್‌ಸೈಟ್‌ಗಳು ತಮ್ಮದೇ ಗೌಪ್ಯತೆ ನಿಯಮಗಳನ್ನು ಹೊಂದಿರುತ್ತವೆ ಮತ್ತು ಈ ನೀತಿಗಳಿಗೆ ನಾವು ಯಾವುದೇ ಜವಾಬ್ದಾರಿ ಅಥವಾ ಬಾಧ್ಯತೆಯನ್ನು ಸಮ್ಮತಿಸುವುದಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್‌ಸೈಟ್‌ಗಳು ಅಥವಾ ಮೊಬೈಲ್ ಅಪ್ಲಿಕೇಶನ್‌ಗೆ ಯಾವುದೇ ವೈಯಕ್ತಿಕ ಡೇಟಾ ಸಲ್ಲಿಸುವುದಕ್ಕೂ ಮೊದಲು ದಯವಿಟ್ಟು ಈ ನೀತಿಗಳನ್ನು ಪರಿಶೀಲಿಸಿ.
#
ಮ್ಯೂಸಿಕ್ ಲೇಬಲ್ಗಳುಅಪ್ಲಿಕೇಶನ್ ಕಿರು-ವೀಡಿಯೊ ಪ್ಲಾಟ್‌ಫಾರ್ಮ್ ಆಗಿರುವುದರಿಂದ, ಪ್ಲಾಟ್‌ಫಾರ್ಮ್‌ನಲ್ಲಿ ಅತ್ಯುತ್ತಮ ಬಳಕೆದಾರರ ಅನುಭವವನ್ನು ಖಚಿತಪಡಿಸಿಕೊಳ್ಳಲು ನಾವು ವಿವಿಧ ಸಂಗೀತ ಲೇಬಲ್‌ಗಳೊಂದಿಗೆ ಸಂಗೀತ ಪರವಾನಗಿ ಒಪ್ಪಂದಗಳನ್ನು ಮಾಡಿಕೊಂಡಿದ್ದೇವೆ. ಸಂಗೀತ ಡೇಟಾಗೆ ಸಂಬಂಧಿಸಿದ ಮಾಹಿತಿಯನ್ನು ಅನಾಮಿಕ ರೀತಿಯಲ್ಲಿ ಕಾಲಕಾಲಕ್ಕೆ ಅಂತಹ ಮ್ಯೂಸಿಕ್ ಲೇಬಲ್‌ಗಳೊಂದಿಗೆ ಹಂಚಿಕೊಳ್ಳಬಹುದಾಗಿದೆ.
#
ಥರ್ಡ್ ಪಾರ್ಟಿಯ ಎಂಬೆಡ್‌ಗಳು ಮತ್ತು ಸೇವೆಗಳು#
ಥರ್ಡ್ ಪಾರ್ಟಿಯ ಎಂಬೆಡ್‌ಗಳು ಮತ್ತು ಸೇವೆಗಳು ಯಾವುವು?ನೀವು ಗಮನಿಸಬೇಕಾದ ಒಂದು ವಿಷಯವೆಂದರೆ ಪ್ಲಾಟ್‌ಫಾರ್ಮ್‌ನಲ್ಲಿ ಪ್ರದರ್ಶಿಸಲಾದ ಕೆಲವು ಕಂಟೆಂಟ್ ಅನ್ನು ಪ್ಲಾಟ್‌ಫಾರ್ಮ್ ಹೋಸ್ಟ್ ಮಾಡಲಾಗುವುದಿಲ್ಲ.. ಈ "ಎಂಬೆಡ್‌ಗಳನ್ನು" ಥರ್ಡ್ ಪಾರ್ಟಿ ಯಿಂದ ಹೋಸ್ಟ್ ಮಾಡಲಾಗಿದೆ ಮತ್ತು ಪ್ಲಾಟ್‌ಫಾರ್ಮ್‌ನಲ್ಲಿ ಎಂಬೆಡ್ ಮಾಡಲಾಗಿದೆ. ಉದಾಹರಣೆಗೆ YouTube ಅಥವಾ Vimeo ವಿಡಿಯೋಗಳು, Imgur ಅಥವಾ Giphy gifs, SoundCloud ಆಡಿಯೋ ಫೈಲ್‌ಗಳು, Twitter ಟ್ವೀಟ್‌ಗಳು ಅಥವಾ ಪ್ಲಾಟ್‌ಫಾರ್ಮ್‌ನಲ್ಲಿನ ಪೋಸ್ಟ್‌ನಲ್ಲಿ ಗೋಚರಿಸುವ Scribd ಡಾಕ್ಯುಮೆಂಟ್‌ಗಳು.ನೀವು ನೇರವಾಗಿ ಆ ಸೈಟ್‌ಗಳಿಗೆ ಭೇಟಿ ನೀಡುತ್ತಿರುವಂತೆ ಈ ಫೈಲ್‌ಗಳು ಹೋಸ್ಟ್ ಮಾಡಿದ ಸೈಟ್‌ಗೆ ಡೇಟಾವನ್ನು ಕಳುಹಿಸುತ್ತವೆ ( ಉದಾಹರಣೆಗೆ, ಎಂಬೆಡ್ ಮಾಡಿದ YouTube ವಿಡಿಯೋದೊಂದಿಗೆ ನೀವು ಪ್ಲಾಟ್‌ಫಾರ್ಮ್ ಪೋಸ್ಟ್ ಪೇಜ್ ಅನ್ನು ಲೋಡ್ ಮಾಡಿದಾಗ, ನಿಮ್ಮ ಚಟುವಟಿಕೆಗೆ ಸಂಬಂಧಿಸಿದ ಡೇಟಾವನ್ನು YouTube ಸ್ವೀಕರಿಸುತ್ತದೆ).
ಪ್ಲಾಟ್‌ಫಾರ್ಮ್‌ನಲ್ಲಿ ನಿಮಗೆ ಕೆಲವು ಫೀಚರ್ ಗಳನ್ನು ಒದಗಿಸಲು ಸ್ವತಂತ್ರವಾಗಿ ಡೇಟಾವನ್ನು ಸಂಗ್ರಹಿಸಬಹುದಾದ ಥರ್ಡ್ ಪಾರ್ಟಿಯ ಸೇವೆಗಳೊಂದಿಗೆ ನಾವು ಪಾಲುದಾರರಾಗಿದ್ದೇವೆ. ಈ ಥರ್ಡ್-ಪಾರ್ಟಿ ಸೇವೆಗಳನ್ನು ನೀವು ಪ್ಲಾಟ್‌ಫಾರ್ಮ್‌ನಲ್ಲಿ ಆ್ಯಕ್ಸೆಸ್ ಮಾಡಿದಾಗ ಅವುಗಳ ಬಳಕೆಯ ನಿಯಮಗಳ ಕುರಿತು ನಿಮಗೆ ಸೂಚಿಸಬಹುದು. ಉದಾಹರಣೆಗೆ, Snap Inc. ಲೆನ್ಸ್‌ನಂತಹ ನಿರ್ದಿಷ್ಟ ಫೀಚರ್ ಗಳ ಬಳಕೆಯನ್ನು ಸುಲಭಗೊಳಿಸಲು ನಿಮ್ಮ ಮುಖದಿಂದ ಕೆಲವು ಇಮೇಜ್ ಗಳನ್ನು ಸಂಗ್ರಹಿಸಿಟ್ಟುಕೊಳ್ಳಬಹುದು ಮತ್ತು ಅವುಗಳ ನಿಯಮಗಳು ಮತ್ತು ಷರತ್ತುಗಳ ಬಗ್ಗೆ ನಿಮಗೆ ತಿಳಿಸಬಹುದು. ಅಂತಹ ಸಂಗ್ರಹಣೆಯ ವಿವರಗಳು, ನಿಯಮಗಳು ಮತ್ತು ಷರತ್ತುಗಳ ಬಗ್ಗೆ ನಿಮಗೆ ಮುಂಚಿತವಾಗಿ ತಿಳಿಸಬಹುದು (https://snap.com/en-US/privacy/privacy-policy ಮತ್ತು https://snap.com/en-US/terms ನಲ್ಲಿ ಲಭ್ಯವಿದೆ).
#
ಥರ್ಡ್-ಪಾರ್ಟಿಯ ಎಂಬೆಡ್‌ಗಳು ಮತ್ತು ಸೇವೆಗಳೊಂದಿಗೆ ಗೌಪ್ಯತೆ ಕಾಳಜಿಗಳುಥರ್ಡ್-ಪಾರ್ಟಿ ಯಾವ ಡೇಟಾವನ್ನು ಸಂಗ್ರಹಿಸುತ್ತದೆ ಅಥವಾ ಆ ಡೇಟಾವನ್ನು ಅವರು ಹೇಗೆ ಬಳಸುತ್ತಾರೆ ಎಂಬುದರ ಮೇಲೆ ಪ್ಲಾಟ್‌ಫಾರ್ಮ್ ಯಾವುದೇ ನಿಯಂತ್ರಣವನ್ನು ಹೊಂದಿಲ್ಲ. ಆದ್ದರಿಂದ, ಪ್ಲಾಟ್‌ಫಾರ್ಮ್‌ನಲ್ಲಿ ಥರ್ಡ್-ಪಾರ್ಟಿಯ ಎಂಬೆಡ್‌ಗಳು ಮತ್ತು ಸೇವೆಗಳು ಈ ಗೌಪ್ಯತಾ ನೀತಿಯಿಂದ ಒಳಗೊಳ್ಳುವುದಿಲ್ಲ. ಅವರು ಥರ್ಡ್-ಪಾರ್ಟಿ ಸೇವೆಗಳ ಗೌಪ್ಯತಾ ನೀತಿಯಿಂದ ಆವರಿಸಲ್ಪಟ್ಟಿದ್ದಾರೆ. ಅಂತಹ ಎಂಬೆಡ್ ಅಥವಾ API ಸೇವೆಗಳನ್ನು ಬಳಸುವ ಮೂಲಕ, ನೀವು ಮೂರನೇ ವ್ಯಕ್ತಿಯ ಸೇವಾ ನಿಯಮಗಳಿಗೆ ಬದ್ಧರಾಗಿರಲು ಒಪ್ಪುತ್ತೀರಿ.
#
ಥರ್ಡ್-ಪಾರ್ಟಿಯ ಎಂಬೆಡ್‌ಗಳು ಮತ್ತು API ಸೇವೆಗಳ ಬಳಕೆಗೆ ಅನ್ವಯವಾಗುವ ಥರ್ಡ್-ಪಾರ್ಟಿಯ ನೀತಿಗಳ ಪಟ್ಟಿ:ಪ್ಲಾಟ್‌ಫಾರ್ಮ್‌ನಲ್ಲಿ ಬಳಸುತ್ತಿರುವ ಪ್ರಸ್ತುತ ಥರ್ಡ್-ಪಾರ್ಟಿಯ API ಸೇವೆಗಳ ಸಂಪೂರ್ಣವಲ್ಲದ ಪಟ್ಟಿಯನ್ನು ದಯವಿಟ್ಟು ಕೆಳಗೆ ಹುಡುಕಿ:
- YouTube API ಸೇವೆಗಳು ಇಲ್ಲಿ ಲಭ್ಯವಿರುವ ನೀತಿಗಳಿಂದ ನಿಯಂತ್ರಿಸಲ್ಪಡುತ್ತವೆ: https://www.youtube.com/t/terms
- Snap Inc ನ ಸೇವೆಗಳನ್ನು ಸೇವಾ ನಿಯಮಗಳಿಂದ ನಿಯಂತ್ರಿಸಲಾಗುತ್ತದೆ, ಇಲ್ಲಿ ಲಭ್ಯವಿದೆ: https://snap.com/en-US/terms
ನೀತಿಗಳ ಅನ್ವಯಕ್ಕೆ ಸಂಬಂಧಿಸಿದಂತೆ ಯಾವುದೇ ಸಂಘರ್ಷ ಅಥವಾ ಅಸಮಂಜಸತೆಯ ಸಂದರ್ಭದಲ್ಲಿ, ಅಂತಹ ಥರ್ಡ್-ಪಾರ್ಟಿಯ ಸೇವಾ ನಿಯಮಗಳು ಥರ್ಡ್-ಪಾರ್ಟಿಯ ಉತ್ಪನ್ನ/ಸೇವೆಗಳ ಬಳಕೆಯನ್ನು ನಿಯಂತ್ರಿಸುತ್ತದೆ ಮತ್ತು ಇಲ್ಲಿ ಲಭ್ಯವಿರುವ MTPL ಪ್ಲಾಟ್‌ಫಾರ್ಮ್ ನೀತಿಗಳು ಇದರಲ್ಲಿ ಲಭ್ಯವಿರುವ ವಿಷಯವನ್ನು ಮತ್ತು MTPL ಒದಗಿಸಿದ ಸೇವೆಗಳು ನಿಯಂತ್ರಿಸುತ್ತದೆ.
#
ತೃತೀಯ ಪಕ್ಷದ ಎಂಬೆಡ್‌ಗಳೊಂದಿಗೆ ವೈಯಕ್ತಿಕ ಮಾಹಿತಿಯನ್ನು ಹಂಚಿಕೊಳ್ಳುವುದುಕೆಲವು ಎಂಬೆಡ್‌ಗಳು ನಿಮ್ಮ ಇಮೇಲ್ ವಿಳಾಸದಂತಹ ವೈಯಕ್ತಿಕ ಮಾಹಿತಿಯನ್ನು ನಮೂನೆಯ ಮೂಲಕ ಕೇಳಬಹುದು. ಪ್ಲಾಟ್‌ಫಾರಂನಿಂದ ಕೆಟ್ಟ ವರ್ತನೆ ಮಾಡುವವರನ್ನು ದೂರವಿಡುವ ಉತ್ತಮ ಪ್ರಯತ್ನವನ್ನು ನಾವು ಮಾಡುತ್ತೇವೆ. ಈ ಮೇಲೆ ವಿವರಿಸಿದಂತೆ, ಅವರ ಕ್ರಮಗಳು ಈ ಗೌಪ್ಯತೆ ನೀತಿಗೆ ಒಳಪಟ್ಟಿರುವುದಿಲ್ಲ. ಹೀಗಾಗಿ, ನಿಮ್ಮ ಇಮೇಲ್ ವಿಳಾಸ ಅಥವಾ ಯಾವುದೇ ಇತರ ವೈಯಕ್ತಿಕ ಮಾಹಿತಿಯನ್ನು ಕೇಳುವ ಎಂಬೆಡ್ ಫಾರ್ಮ್‌ಗಳನ್ನು ಪ್ಲಾಟ್‌ಫಾರಂನಲ್ಲಿ ಕಂಡಾಗ ದಯವಿಟ್ಟು ಎಚ್ಚರಿಕೆಯಿಂದಿರಿ. ನೀವು ಯಾರಿಗೆ ನಿಮ್ಮ ಮಾಹಿತಿಯನ್ನು ಸಲ್ಲಿಸುತ್ತಿದ್ದೀರಿ ಮತ್ತು ಅವನ್ನು ಅವರು ಏನು ಮಾಡುತ್ತೇವೆ ಎಂದು ಹೇಳುತ್ತಿದ್ದಾರೆ ಎಂಬುದನ್ನು ಅರ್ಥ ಮಾಡಿಕೊಳ್ಳಿ. ಎಂಬೆಡ್ ಮಾಡಿದ ನಮೂನೆಯ ಮೂಲಕ ಯಾವುದೇ ತೃತೀಯ ಪಕ್ಷಕ್ಕೆ ವೈಯಕ್ತಿಕ ಮಾಹಿತಿಯನ್ನು ಸಲ್ಲಿಸಬೇಡಿ ಎಂದು ನಾವು ಸಲಹೆ ಮಾಡುತ್ತೇವೆ.
#
ನಿಮ್ಮದೇ ತೃತೀಯ ಪಕ್ಷದ ಎಂಬೆಡ್ ರಚಿಸುವುದುಬಳಕೆದಾರರ ವೈಯಕ್ತಿಕ ಮಾಹಿತಿಯ ಸಲ್ಲಿಕೆಗೆ ಅನುವು ಮಾಡುವ ನಮೂನೆಯನ್ನು ನೀವು ಎಂಬೆಡ್ ಮಾಡಿದರೆ, ಸಂಗ್ರಹಿಸಿದ ಯಾವುದೇ ಮಾಹಿತಿಯನ್ನು ಹೇಗೆ ಬಳಸಲು ಉದ್ದೇಶಿಸಿದ್ದೀರಿ ಎಂಬುದನ್ನು ಸ್ಪಷ್ಟವಾಗಿ ತಿಳಿಸುವ ಅನ್ವಯಿಕ ಗೌಪ್ಯತೆ ನೀತಿಗೆ ಸೂಕ್ತವಾದ ಲಿಂಕ್ ಅನ್ನು ಎಂಬೆಡ್ ಮಾಡಿದ ನಮೂನಯೆ ಪಕ್ಕದಲ್ಲಿ ನೀವು ಒದಗಿಸಬೇಕು. ಇದನ್ನು ಮಾಡಲು ವಿಫಲವಾದರೆ, ಕಂಪನಿಯು ಪೋಸ್ಟ್ ನಿಷ್ಕ್ರಿಯಗೊಳಿಸಬಹುದು ಅಥವಾ ನಿಮ್ಮ ಖಾತೆಯನ್ನು ಮಿತಿಗೊಳಿಸಬಹುದು ಅಥವಾ ನಿಷ್ಕ್ರಿಯಗೊಳಿಸಬಹುದು.
#
ನಮ್ಮಿಂದ ಸಂವಹನಅಗತ್ಯ ಎಂದು ಭಾವಿಸಿದಾಗ ಸೇವೆ ಸಂಬಂಧಿ ಘೋಷಣೆಗಳನ್ನು ಕಾಲಕಾಲಕ್ಕೆ ನಾವು ಕಳುಹಿಸಬಹುದು (ನಿರ್ವಹಣೆ, ಭದ್ರತೆ, ಗೌಪ್ಯತೆ ಅಥವಾ ಆಡಳಿತ ಸಂಬಂಧಿ ಸಂವಹನಗಳಿಗೆ ಪ್ಲಾಟ್‌ಫಾರಂ ಅನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸುವುದು). ನಾವು ಇದನ್ನು ಎಸ್‌ಎಂಎಸ್ ಮೂಲಕ ಕಳುಹಿಸುತ್ತೇವೆ. ಪ್ರಚಾರದ ಉದ್ದೇಶದ ಮತ್ತು ನಿಮ್ಮ ಖಾತೆಯನ್ನು ಸಂರಕ್ಷಿಸುವ ಉದ್ದೇಶದ ಮತ್ತು ಪ್ಲಾಟ್‌ಫಾರಂಗೆ ಮಾಡಲಾಗುವ ಪ್ರಮುಖ ಬದಲಾವಣೆಗಳಿಗೆ ಮಾಹಿತಿ ನೀಡುವ ಉದ್ದೇಶದ ಈ ಸೇವೆ ಸಂಬಂಧಿ ಘೋಷಣೆಗಳಿಂದ ನೀವು ಹೊರಗುಳಿಯದಿರಬಹುದು.
#
ದೂರು ನಿರ್ವಹಣೆ ಅಧಿಕಾರಿಡೇಟಾ ಸುರಕ್ಷತೆ, ಗೌಪ್ಯತೆ ಮತ್ತು ಪ್ಲಾಟ್‌ಫಾರ್ಮ್ ಬಳಕೆಯ ಕಾಳಜಿಗಳಿಗೆ ಸಂಬಂಧಿಸಿದಂತೆ ನಿಮ್ಮ ಕಾಳಜಿಯನ್ನು ಪರಿಹರಿಸಲು ನಾವು ಕುಂದುಕೊರತೆ ಅಧಿಕಾರಿಯನ್ನು ಹೊಂದಿದ್ದೇವೆ. ದೂರು ಸ್ವೀಕರಿಸಿದ 15 (ಹದಿನೈದು) ದಿನಗಳೊಳಗೆ ಸಮಸ್ಯೆಯನ್ನು ನಾವು ಪರಿಹರಿಸುತ್ತೇವೆ. ನೀವು ದೂರು ನಿರ್ವಹಣೆ ಅಧಿಕಾರಿ ಶಮಿಸ್ ಹರ್ಲೀನ್ ಸೇಥಿ ಅವರನ್ನು ಈ ಕೆಳಗಿನ ಯಾವುದೇ ಒಂದರ ಮೂಲಕ ಸಂಪರ್ಕಿಸಬಹುದು:
ವಿಳಾಸ: ಮೊಹಲ್ಲಾ ಟೆಕ್ ಪ್ರೈವೆಟ್ ಲಿಮಿಟೆಡ್,
ನಾರ್ತ್ ಟವರ್ ಸ್ಮಾರ್ಟ್‌ವರ್ಕ್ಸ್, ವೈಷ್ಣವಿ ಟೆಕ್ ಪಾರ್ಕ್,
ಸರ್ವೆ ನಂ. 16/1 & ನಂ. 17/2 ಅಂಬಲಿಪುರ ಗ್ರಾಮ, ವರ್ತೂರು ಹೋಬಳಿ,
ಬೆಂಗಳೂರು ನಗರ, ಕರ್ನಾಟಕ - 560103
ಇಮೇಲ್: grievance@sharechat.co
ಗಮನಿಸಿ - ದಯವಿಟ್ಟು ಬಳಕೆದಾರರ ಸಂಬಂಧಿತ ಎಲ್ಲಾ ಕುಂದುಕೊರತೆಗಳನ್ನು ತ್ವರಿತವಾಗಿ ಪ್ರಕ್ರಿಯೆಗೊಳಿಸಲು ಮತ್ತು ಪರಿಹರಿಸಲು ಮೇಲೆ ತಿಳಿಸಿದ ಇಮೇಲ್ ಐಡಿಗೆ ಸಂಪರ್ಕಿಸಿ.
ನೋಡಲ್ ಸಂಪರ್ಕ ವ್ಯಕ್ತಿ - ಮಿಸ್ ಹರ್ಲೀನ್ ಸೇಥಿ
ಇಮೇಲ್: nodalofficer@sharechat.co
ಗಮನಿಸಿ - ಈ ಇಮೇಲ್ ಕೇವಲ ಪೊಲೀಸ್ ಮತ್ತು ತನಿಖಾ ಸಂಸ್ಥೆಗಳ ಬಳಕೆಗಾಗಿ ಮಾತ್ರ. ಎಲ್ಲಾ ಬಳಕೆದಾರ ಸಂಬಂಧಿತ ಕುಂದುಕೊರತೆಗಳಿಗಾಗಿ, ದಯವಿಟ್ಟು ನಮ್ಮನ್ನು grievance@sharechat.co ನಲ್ಲಿ ಸಂಪರ್ಕಿಸಿ.