Skip to main content

ಕ್ರಿಯೇಟರ್ ರೆಫರಲ್ ಟೆರ್ಮ್ಸ್

Last updated: 14th February 2023

Moj ಕ್ರಿಯೇಟರ್ ರೆಫರಲ್ ಪ್ರೋಗ್ರಾಮ್ (“ಪ್ರೋಗ್ರಾಮ್”) ಇದನ್ನು ಮೊಹಲ್ಲಾ ಟೆಕ್ ಪ್ರೈವೇಟ್ ಲಿಮಿಟೆಡ್ (“ನಾವು”, “MTPL”, “ನಮ್ಮ”) ಪ್ರಸ್ತುತ ಪಡಿಸುತ್ತಿದ್ದು ನಿಮಗೆ (“ನೀವು”/”ರೆಫರರ್”) ರಿವಾರ್ಡ್ ನೀಡಲು ಈ ಪ್ರೋಗ್ರಾಮ್ ಮಾಡಲಾಗಿದೆ. ನಿಮ್ಮ ಗೆಳೆಯರು, ಸಹೋದ್ಯೋಗಿಗಳು ಮತ್ತು ಕುಟುಂಬದವದರನ್ನು (“ಇನ್ವೈಟಿ”) ನಮ್ಮ ಮೊಬೈಲ್ ಅಪ್ಲಿಕೇಶನ್ “Moj” ಮತ್ತು ಅದರ ವರ್ಶನ್ ಗಳಲ್ಲಿ ಕ್ರಿಯೇಟರ್ ಆಗಲು ರೆಫರ್ ಅಥವಾ ರೆಕಮೆಂಡ್ ಮಾಡಬೇಕು. Moj ಮತ್ತು ಅದರ ವರ್ಶನ್ ಗಳನ್ನು ಒಟ್ಟಾಗಿ “ಪ್ಲಾಟಫಾರ್ಮ್” ಎಂದು ಕರೆಯಲಾಗುತ್ತಿದ್ದು ಅಲ್ಲಿ Moj ಫಾರ್ ಕ್ರಿಯೇಟರ್ (“MFC”) ಪ್ರೋಗ್ರಾಮ್ ಗೆ ಅಪ್ಲೈ ಮಾಡಬೇಕು.

ಈ ಷರತ್ತು ಮತ್ತು ನಿಯಮಗಳು (“ನಿಯಮ”) ನಿಮ್ಮ ಮತ್ತು MTPL ಮಧ್ಯೆ ಬೈಂಡಿಂಗ್ ಅಗ್ರಿಮೆಂಟ್ ಆಗಿದ್ದು ನೀವು ಈ ಪ್ರೋಗ್ರಾಮ್ ನಲ್ಲಿ ಹೇಗೆ ಭಾಗವಹಿಸುತ್ತೀರಿ ಎನ್ನುವುದರ ಬಗ್ಗೆ ಗಮನ ಹರಿಸುತ್ತದೆ. ಈ ಪ್ರೋಗ್ರಾಮ್ ನಲ್ಲಿ ಭಾಗವಹಿಸುವುದರ ಮೂಲಕ ನೀವು ಈ ಪ್ಲಾಟಫಾರ್ಮ್ ನ ನಿಯಮ ಮತ್ತು ಷರತ್ತುಗಳ ಬಗ್ಗೆ ಮತ್ತು ಗೌಪ್ಯತೆಯ ಪಾಲಿಸಿಯನ್ನು ಒಪ್ಪುತ್ತೀರಿ. ಈ ನಿಯಮ ಮತ್ತು ಷರತ್ತುಗಳಿಗೆ ನೀವು ಸಂಪೂರ್ಣವಾಗಿ ಒಪ್ಪದೇ ಹೋದಲ್ಲಿ ಈ ಪ್ರೋಗ್ರಾಮ್ ನಲ್ಲಿ ಭಾಗವಹಿಸಲು ನಿಮಗೆ ಅಧಿಕಾರ ಇರುವುದಿಲ್ಲ. MTPL ಯಾವುದೇ ಪೂರ್ವ ಸೂಚನೆ ಇಲ್ಲದೇ ಈ ಸಂಪೂರ್ಣ ಪ್ರೋಗ್ರಾಮ್ ಅಥವಾ ಪ್ರೋಗ್ರಾಮ್ ನ ಯಾವುದೇ ಭಾಗವನ್ನು ಬದಲಾಯಿಸುವ, ರದ್ದುಗೊಳಿಸುವ, ಅಮಾನ್ಯ ಮಾಡುವ ಅಥವಾ ಬದಲಾಯಿಸುವ ಸಂಪೂರ್ಣ ಹಕ್ಕನ್ನು ಹೊಂದಿದೆ. ಯಾವುದೇ ಯೂಸರ್/ ಮುಂಬರುವ ಯೂಸರ್ ನನ್ನು ಪ್ರೋಗ್ರಾಮ್ ನಲ್ಲಿ ಭಾಗವಹಿಸದಂತೆ ಅಮಾನ್ಯ ಮಾಡುವ ಅಧಿಕಾರವನ್ನೂ MTPL ಹೊಂದಿದೆ.

ಅರ್ಹತೆ:#

ಈ ಪ್ರೋಗ್ರಾಮ್ ನಲ್ಲಿ ಭಾಗವಹಿಸುವ ಅರ್ಹತೆ ಪಡೆಯಲು, ರೆಫರರ್ ಈ ಪ್ಲಾಟಫಾರ್ಮ್ ನಲ್ಲಿ ಒಬ್ಬ ರೆಜಿಸ್ಟರ್ಡ್ ಯೂಸರ್ ಆಗಿರಬೇಕು.

ಅರ್ಹ ರೆಫರಲ್:#

ಒಂದು “ಅರ್ಹ ರೆಫರಲ್” ಎಂದರೆ ಈ ಕೆಳಕಂಡ ಪರಿಸ್ಥಿತಿಗಳಿಗೆ ಅನುಗುಣವಾಗಿರಬೇಕು:

  • ಇನ್ವೈಟಿ, ರೆಫರರ್ ಶೇರ್ ಮಾಡಿರುವ ಲಿಂಕ್ ನ ಮೇಲೆ 7 ದಿನಗಳ ಒಳಗೆ ಕ್ಲಿಕ್ ಮಾಡಿ MFC ಪ್ರೋಗ್ರಾಮ್ ಗೆ ಅಪ್ಲೈ ಮಾಡಬೇಕು. ಮತ್ತು MTPL ಟೀಮ್ ಪರಿಶೀಲಿಸಿದ ನಂತರ MFC ಕ್ರಿಯೇಟರ್ ಆಗಿ ಆಯ್ಕೆಯಾಗಬೇಕು.
  • ಇನ್ವೈಟಿ MFC ಗೆ ಆಯ್ಕೆಯಾದರೂ ಕೂಡ, ರೆಫರರ್ ಶೇರ್ ಮಾಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡದೇ ಹೋದಲ್ಲಿ ಅದನ್ನು ಕ್ವಾಲಿಫೈಡ್ ರೆಫರಲ್ ಎಂದು ಪರಿಗಣಿಸಲಾಗುವುದಿಲ್ಲ.
  • ಇನ್ವೈಟಿ, ರೆಫರಲ್ ಲಿಂಕ್ ಮೇಲೆ ಕ್ಲಿಕ್ ಮಾಡಿ 7 ದಿನಗಳ ಒಳಗೆ MFC ಪ್ರೋಗ್ರಾಮ್ ನಲ್ಲಿ ಭಾಗವಹಿಸದೇ ಇದ್ದರೆ ಅದನ್ನು ಅರ್ಹ ರೆಫರಲ್ ಎಂದು ಪರಿಗಣಿಸಲಾಗುವುದಿಲ್ಲ.
  • ಇನ್ವೈಟಿ, ಈ ಮುಂಚೆಯೇ MFC ಪ್ರೋಗ್ರಾಮ್ ನಲ್ಲಿ ಭಾಗವಹಿಸಿದ್ದರೆ ಅಥವಾ ಮುಂಚೆಯೇ MFC ಕ್ರಿಯೇಟರ್ ಆಗಿದ್ದರೆ, ಅದನ್ನು ಅರ್ಹ ರೆಫರಲ್ ಎಂದು ಪರಿಗಣಿಸಲಾಗುವುದಿಲ್ಲ.
  • ಇನ್ವೈಟಿ, MFC ಪ್ರೋಗ್ರಾಮ್ ನಲ್ಲಿ ಅಪ್ಲೈ ಮಾಡಿದ ನಂತರ MTPL ಟೀಮ್ ನ ಪರಿಶೀಲನೆಯ ನಂತರ ಪ್ರೋಗ್ರಾಮ್ ನ ಭಾಗವಾಗಲು ಆಯ್ಕೆಯಾಗದಿದ್ದಲ್ಲಿ ಅದನ್ನು ಅರ್ಹ ರೆಫರಲ್ ಎಂದು ಪರಿಗಣಿಸಕಾಗುವುದಿಲ್ಲ.
  • ಇನ್ವೈಟಿಯನ್ನು ಮುಂಚೆಯೇ ಬೇರೊಬ್ಬ ರೆಫರರ್ ರೆಫರ್ ಮಾಡಿದ್ದಲ್ಲಿ, ಅದನ್ನು ಅರ್ಹ ರೆಫರಲ್ ಎಂದು ಪರಿಗಣಿಸಲಾಗುವುದಿಲ್ಲ.
  • ಒಬ್ಬ ಇನ್ವೈಟಿಗೆ ಕೇವಲ ಒಂದು ಅರ್ಹ ರೆಫರಲ್ ಗೆ ಮಾತ್ರ ಅವಕಾಶವಿರುತ್ತದೆ. ಅಂದರೆ, ಒಬ್ಬ ರೆಫರರ್ ಒಬ್ಬ ಇನ್ವೈಟಿಗಾಗಿ ರಿವಾರ್ಡ್ ಪಡೆದಿದ್ದಲ್ಲಿ, ಅದೇ ಇನ್ವೈಟಿಗೆ ಬೇರೊಬ್ಬ ರೆಫರರ್ ರಿವಾರ್ಡ್ ಪಡೆಯಲು ಸಾಧ್ಯವಿಲ್ಲ.

ರಿವಾರ್ಡ್:#

  • ರೆಫರಲ್ ಲಿಂಕ್ ಉಪಯೋಗಿಸಿ, ಇನ್ವೈಟಿ MFC ಪ್ರೋಗ್ರಾಮ್ ಗೆ ಜಾಯಿನ್ ಆದಲ್ಲಿ ರೆಫರರ್ ತನ್ನ ಅರ್ಹ ರೆಫರಲ್ ಗೆ 100 ಮಿಂಟ್ಸ್ (“ರಿವಾರ್ಡ್”) ಪಡೆಯಲು ಅರ್ಹರಾಗುತ್ತಾರೆ.. ಷರತ್ತುಗಳಿಗೆ ಬದ್ಧವಾಗಿ ರಿವಾರ್ಡ್ ಗಳನ್ನು ರೆಫರರ್ ಗೆ ನೀಡಲಾಗುವುದು. ರಿವಾರ್ಡ್ ಗಳನ್ನು ರೆಫರರ್ ನ ಮೊಬೈಲ್ ಅಪ್ಲಿಕೇಶನ್ ವ್ಯಾಲೆಟ್ ಗೆ ಮಿಂಟ್ಸ್(100 ಮಿಂಟ್ಸ್) ರೂಪದಲ್ಲಿ ಕ್ರೆಡಿಟ್ ಮಾಡಲಾಗುತ್ತದೆ.
  • ರಿವಾರ್ಡ್ ಗಳು ವೆರಿಫಿಕೇಷನ್ ಗೆ ಒಳಪಟ್ಟಿರುತ್ತವೆ. MTPL ತನಿಖೆಯ ಉದ್ದೇಶಗಳಿಗಾಗಿ ರಿವಾರ್ಡ್ ನೀಡುವಿಕೆಯನ್ನು ವಿಳಂಬ ಮಾಡಬಹುದು. MTPL ತನ್ನ ಸ್ವಂತ ವಿವೇಚನೆಯಿಂದ, ಈ ನಿಯಮಗಳನ್ನು ಉಲ್ಲಂಘಿಸಿ ಮೋಸ, ಅನುಮಾನಾಸ್ಪದ ಎಂದು ಭಾವಿಸಿದರೆ, ಅಥವಾ MTPL, ಅದರ ಅಂಗಸಂಸ್ಥೆಗಳು ಅಥವಾ ಅವರ ಯಾವುದೇ ಅಧಿಕಾರಿಗಳು, ನಿರ್ದೇಶಕರು, ಉದ್ಯೋಗಿಗಳು, ಪ್ರತಿನಿಧಿಗಳು ಮತ್ತು ಏಜೆಂಟರ ಮೇಲೆ ಸಂಭಾವ್ಯ ಹೊಣೆಗಾರಿಕೆಯನ್ನು ವಿಧಿಸುತ್ತದೆ ಎಂದು ಭಾವಿಸಿದರೆ ಯಾವುದೇ ವ್ಯವಹಾರವನ್ನು ವೆರಿಫೈ ಮಾಡಲು ಮತ್ತು ಪ್ರಕ್ರಿಯೆಗೊಳಿಸಲು ಸಹ ನಿರಾಕರಿಸಬಹುದು.
  • MTPL ನ ಎಲ್ಲಾ ನಿರ್ಧಾರಗಳು ಅಂತಿಮ ಮತ್ತು ಬದ್ಧವಾಗಿರುತ್ತವೆ, ಅದು ಕ್ವಾಲಿಫೈಡ್ ರೆಫರಲ್ ನ ವಿಚಾರವಾಗಿರಬಹುದು ಅಥವಾ ವೆರಿಫೈಡ್ ರಿವಾರ್ಡ್ ಆಗಿರಬಹುದು.

ಹೊಣೆಗಾರಿಕೆ:#

ಈ ಪ್ರೋಗ್ರಾಮ್ ನಲ್ಲಿ ಭಾಗವಹಿಸುವ ಮೂಲಕ ರೆಫರರ್ ಮತ್ತು ಇನ್ವೈಟಿ ಈ ವಿಷಯಗಳಿಗೆ ಒಪ್ಪುತ್ತಾರೆ:

  • MTPL ನ ನಿರ್ಧಾರಗಳಿಗೆ ಮತ್ತು MTPL ನ ಗೌಪ್ಯತೆಯ ಪಾಲಿಸಿಗೆ ಮತ್ತು ಷರತ್ತುಗಳಿಗೆ ಬದ್ಧವಾಗಿರಬೇಕು.

  • MTPL, ಅದಕ್ಕೆ ಸಂಬಂಧಿಸಿದ ಉದ್ಯೋಗಿಗಳು, ನಿರ್ದೇಶಕರು, ಅಧಿಕಾರಿಗಳು, ಲೈಸೆನ್ಸ್ ಹೊಂದಿರುವವರು, ಶೇರ್ ಹೊಂದಿರುವವರು, ವಕೀಲರು ಮತ್ತು ಏಜೆಂಟರು ಸೇರಿದಂತೆ ಯಾವುದೇ ಸೀಮೆ ಇಲ್ಲದೇ, ಅವರಿಗೆ ಸಂಬಂಧಿಸಿದ ಜಾಹೀರಾತುಗಳು ಮತ್ತು ಪ್ರಚಾರ ಸಂಸ್ಥೆಗಳು ಮತ್ತು ಅದಕ್ಕೆ ಸಂಬಂಧಿಸಿದ ಯಾವುದೇ ವ್ಯಕ್ತಿ ಅಥವಾ ಸಂಸ್ಥೆಯ ಜೊತೆಗೆ ಪ್ರೋಗ್ರಾಮ್ ನ ನಿರ್ಮಾಣ, ನಡೆಸುವಿಕೆ ಅಥವಾ ಆಡಳಿತ (ಸಾಮೂಹಿಕ ರೂಪದಲ್ಲಿ ಜಾರಿ ಮಾಡಿದಂತಹ ಪಕ್ಷ) ಎಲ್ಲಿಂದಲೇ ಆಗಲಿ ಎಲ್ಲ ದಾವೆಗಳು, ಬೇಡಿಕೆಗಳು, ಸಮಸ್ಯೆಗಳು, ನಷ್ಟಗಳು, ಕೊಡುಕೊಳ್ಳುವಿಕೆ, ಖರ್ಚುಗಳಿಗೆ ಕಾರಣ, ನಿರ್ಮಾಣವಾಗುವ ಸಂದರ್ಭಗಳಲ್ಲಿ ಅಥವಾ ರೆಫರರ್ ಗಳ ಪಾಲ್ಗೊಳ್ಳುವಿಕೆಗೆ ಸಂಬಂಧಿಸಿದಂತೆ (ಯಾವುದೇ ಸೀಮೆ ಇಲ್ಲದೇ) ಯಾವುದೇ ವ್ಯಕ್ತಿಯ (ಜನರ) ಆಸ್ತಿಯ ಹಾನಿ, ಸಮಸ್ಯೆ, ವೈಯಕ್ತಿಕ ಗಾಯ ಅಥವಾ ಸಾವು ಹಾಗೂ/ ಅಥವಾ ಪ್ರೋಗ್ರಾಮ್ ನ ರಿವಾರ್ಡ್ ಪಡೆಯುವಿಕೆ ಹಾಗೂ/ಅಥವಾ ರಿವಾರ್ಡ್ ನ ಉಪಯೋಗ ಅಥವಾ ದುರುಪಯೋಗ); ಸೇರಿದಂತೆ

  • MTPL ಯಾವುದೇ ಪ್ರತ್ಯಕ್ಷ, ಪರೋಕ್ಷ, ಆಕಸ್ಮಿಕ, ವಿಶೇಷ, ಪರಿಣಾಮಪೂರ್ವಕ ಅಥವಾ ಅನುಕರಣೀಯ ಸಮಸ್ಯೆಗಳಿಗೆ ನಿಮಗೆ ಉತ್ತರ ನೀಡುವ ಬಾಧ್ಯತೆಯನ್ನು ಹೊಂದಿರುವುದಿಲ್ಲ. ಅದರಲ್ಲಿ ಲಾಭ, ಸದ್ಭಾವನೆ, ಉಪಯೋಗ, ಡೇಟಾ ಅಥವಾ ಕಾಣದ ಹಾನಿಗಳು(ಈ ಥರದ ನಷ್ಟಗಳ ಬಗ್ಗೆ MTPL ಗೆ ಮುಂಚೆಯೇ ಸೂಚನೆ ನೀಡಿದ್ದರೂ) ಅದರಿಂದ ಆಗುವ ನಷ್ಟಗಳಿಂದ ಆಗುವ ಸಮಸ್ಯೆಗಳು ಇರುತ್ತವೆ, ಆದರೇ ಅವು ಇಷ್ಟಕ್ಕೆ ಮಾತ್ರ ಸೀಮಿತವಾಗಿರುವುದಿಲ್ಲ, ಮತ್ತು ಅವುಗಳು ಕಾರಣವಾಗುತ್ತವೆ. (i) ಪ್ರೋಗ್ರಾಮ್ ನ ಉಪಯೋಗ ಮತ್ತು ಉಪಯೋಗವನ್ನು ಪಡೆದುಕೊಳ್ಳಲು ಅಸಮರ್ಥತೆ (ii) ನಿಮ್ಮ ಟ್ರಾನ್ಸಮಿಶನ್ ಅಥವಾ ಡೇಟಾದ ಅನಧಿಕೃತ ಆ್ಯಕ್ಸೆಸ್ ಅಥವಾ ಬದಲಾವಣೆ (iv) ಪ್ರೋಗ್ರಾಮ್ ನ ಬಗ್ಗೆ ಯಾವುದೇ ಥರ್ಡ್ ಪಾರ್ಟಿ ಮಾತು ಅಥವಾ ನಡುವಳಿಕೆ; ಅಥವಾ (v) ಪ್ರೋಗ್ರಾಮ್ ಗೆ ಸಂಬಂಧಿಸಿದ ಯಾವುದೇ ಬೇರೆ ವಿಷಯ

  • ತಮ್ಮ ಸ್ವಂತ ಜವಾಬ್ದಾರಿಯಿಂದ ಪ್ರೋಗ್ರಾಮ್ ನಲ್ಲಿ ಭಾಗವಹಿಸಬೇಕು.

ಮೋಸದ ಮತ್ತು ಅನುಮಾನಾಸ್ಪದ ನಡುವಳಿಕೆ:#

  • ಒಬ್ಬ ರೆಫರರ್ ಪ್ರೋಗ್ರಾಮ್ ನಲ್ಲಿ ಭಾಗವಹಿಸುವುದನ್ನು ಮತ್ತು ರಿವಾರ್ಡ್ ಪಡೆಯುವುದನ್ನು MTPL ತನ್ನ ಸ್ವಂತ ವಿವೇಚನೆಯಿಂದ ತಡೆಯಬಹುದಾಗಿದೆ. ಆ ರೆಫರರ್ ಯಾವುದೇ ರೀತಿಯಲ್ಲಿ ಪ್ರೋಗ್ರಾಮ್ ನ ಸಮಗ್ರತೆ, ನ್ಯಾಯಸಮ್ಮತ ಕಾರ್ಯಾಚರಣೆಯನ್ನು ಮೋಸ, ಹ್ಯಾಕಿಂಗ್, ವಂಚನೆ, ದುರುದ್ದೇಶಪೂರಿತ ಚಟುವಟಿಕೆಯ ಮೂಲಕ ತಡೆಯಲು ಪ್ರಯತ್ನಿಸಿದಲ್ಲಿ ಅಥವಾ ಪ್ಲಾಟಫಾರ್ಮ್ ನ ನಿಯಮ ಮತ್ತು ಷರತ್ತುಗಳನ್ನು ಉಲ್ಲಂಘಿಸಲು ಪ್ರಯತ್ನಿಸಿದಲ್ಲಿ ಅಥವಾ ರಿವಾರ್ಡ್ ನೀಡುವಿಕೆಯಿಂದ MTPL, ಅದರ ಅಂಗಸಂಸ್ಥೆಗಳು, ಅದರ ಯಾವುದೇ ಅಧಿಕಾರಿಗಳು, ನಿರ್ದೇಶಕರು, ಉದ್ಯೋಗಿಗಳು, ಪ್ರತಿನಿಧಿಗಳು ಮತ್ತು ಏಜೆಂಟರ ಮೇಲೆ ಸಂಭಾವ್ಯ ಹೊಣೆಗಾರಿಕೆ ಇದೆ ಎಂದು ಕಂಡುಬಂದಲ್ಲಿ ಈ ರೀತಿ ಮಾಡಬಹುದು.
  • ರೆಫರರ್ ಅಥವಾ ಇನ್ವೈಟಿ ಬೇರೆ ಬೇರೆ ಅಥವಾ ಸುಳ್ಳು ಇಮೇಲ್ ಅಡ್ರೆಸ್ ಮುಖಾಂತರ ಪ್ರೋಗ್ರಾಮ್ ಗೆ ಪ್ರವೇಶ ನೀಡಬಾರದು. ಕಾಲ್ಪನಿಕೆ ಐಡೆಂಟಿಟಿ ಅಥವಾ ಸಿಸ್ಟಮ್, ಬಾಟ್ ಅಥವಾ ಡಿವೈಸ್, ಆರ್ಟಿಫೈಸ್ ಬಳಸಿ ಪ್ರೋಗ್ರಾಮ್ ನಲ್ಲಿ ಪಾರ್ಟಿಸಿಪೇಟ್ ಮಾಡಲು ಅಥವಾ ರಿವಾರ್ಡ್ ಪಡೆಯಲು ಪ್ರಯತ್ನಿಸಬಾರದು.
  • ಯಾವುದೇ ರೆಫರರ್ ಎಂಟ್ರಿ ಪ್ರಾಸೆಸ್ ಅಥವಾ ಪ್ರೋಗ್ರಾಮ್ ನ ಅಥವಾ ಪ್ಲಾಟಫಾರ್ಮ್ ನ ಕಾರ್ಯಚಟುವಟಿಕೆಯಲ್ಲಿ ಮೋಸ ಮಾಡಲು ಪ್ರಯತ್ನಿಸಿದಲ್ಲಿ ಅಥವಾ ಈ ಷರತ್ತುಗಳನ್ನು ಯಾವುದೇ ರೀತಿಯಲ್ಲಿ ಉಲ್ಲಂಘಿಸಲು ಪ್ರಯತ್ನಿಸಿದಲ್ಲಿ ರೆಫರರ್ ಅನ್ನು ಅಮಾನ್ಯ ಮಾಡುವ/ಅಥವಾ ರಿವಾರ್ಡ್ ಅನ್ನು ಕ್ಯಾನ್ಸಲ್ ಮಾಡುವ ಹಕ್ಕನ್ನು MTPL ಹೊಂದಿದೆ.

ಆಡಳಿತ ಕಾನೂನು:#

ಈ ಪ್ರೋಗ್ರಾಮ್ ಭಾರತದ ಕಾನೂನಿನ ಅನ್ವಯ ಕಾರ್ಯನಿರ್ವಹಿಸುತ್ತದೆ.