Skip to main content

ಬಳಕೆಯ ನಿಯಮಗಳು

Last updated: 15th December 2023

ಈ ಬಳಕೆಯ ನಿಯಮಗಳು ("ನಿಯಮಗಳು") ನಮ್ಮ ಮೊಬೈಲ್ ಅಪ್ಲಿಕೇಶನ್ ಮತ್ತು ಅದರ ಆವೃತ್ತಿಗಳನ್ನು ("ಅಪ್ಲಿಕೇಶನ್") ನಿಮ್ಮ ಬಳಕೆಯನ್ನು ನಿಯಂತ್ರಿಸುತ್ತದೆ, ಇದನ್ನು ಒಟ್ಟಾರೆಯಾಗಿ "ಪ್ಲಾಟ್‌ಫಾರ್ಮ್" ಎಂದು ಉಲ್ಲೇಖಿಸಲಾಗುತ್ತದೆ ಮೊಹಲ್ಲಾ ಟೆಕ್ ಪ್ರೈ. ಲಿಮಿಟೆಡ್. ("MTPL", "ಕಂಪನಿ", "ನಾವು", "ನಮಗೆ" ಮತ್ತು "ನಮ್ಮ"), ತನ್ನ ನೋಂದಾಯಿತ ಕಛೇರಿ ಮೊಹಲ್ಲಾ ಟೆಕ್ ಪ್ರೈವೆಟ್ ಲಿಮಿಟೆಡ್, ನಾರ್ತ್ ಟವರ್ ಸ್ಮಾರ್ಟ್‌ವರ್ಕ್ಸ್, ವೈಷ್ಣವಿ ಟೆಕ್ ಪಾರ್ಕ್, ಸರ್ವೆ ನಂ. 16/1 & ನಂ. 17/2 ಅಂಬಲಿಪುರ ಗ್ರಾಮ, ವರ್ತೂರು ಹೋಬಳಿ, ಬೆಂಗಳೂರು ನಗರ, ಕರ್ನಾಟಕ - 560103.

ಭಾರತೀಯ ದಂಡ ಸಂಹಿತೆ 1860 ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆ 2000 ಹಾಗೂ ಅದಕ್ಕೆ ಮಾಡಿದ ಎಲ್ಲ ತಿದ್ದುಪಡಿಗಳು ಮತ್ತು ಅದರ ಅಡಿಯಲ್ಲಿ ರೂಪಿಸಿದ ನಿಯಮಗಳಿಗೆ ಅನುಗುಣವಾಗಿ ನಮ್ಮ ಸೇವೆಗಳು (ವಿವರವಾಗಿ ನಾವು ಈ ಕೆಳಗೆ ವಿವರಿಸಿದಂತೆ) ಮತ್ತು ಈ ನಿಯಮಗಳು ಇರುತ್ತವೆ. ನಮ್ಮ ಪ್ಲಾಟ್‌ಫಾರಂ ಅನ್ನು ನೀವು ಬಳಸುವಾಗ, ಈ ನಿಯಮಗಳನ್ನು ನೀವು ಒಪ್ಪುತ್ತಿರಿ ಮತ್ತು ಸಮ್ಮತಿಸುತ್ತೀರಿ. ಆದಾಗ್ಯೂ, ಭಾರತವನ್ನು ಹೊರತುಪಡಿಸಿ ಯಾವುದೇ ದೇಶದ ಕಾನೂನಿಗೆ ಬದ್ಧವಾಗಿರುತ್ತೇವೆ ಎಂದು ನಾವು ಪ್ರತಿನಿಧಿಸುವುದಿಲ್ಲ ಎಂದು ದಯವಿಟ್ಟು ಗಮನಿಸಿ. ನಮ್ಮ ಸೇವೆಗಳನ್ನು ಬಳಸಲು ಬಯಸಿದರೆ, ನಿಮ್ಮ ನ್ಯಾಯವ್ಯಾಪ್ತಿಯಲ್ಲಿ ಬಳಕೆಗೆ ಅನುಮತಿ ಹೊಂದಿದ್ದೀರಿ ಎಂಬುದನ್ನು ದಯವಿಟ್ಟು ಖಚಿತಪಡಿಸಿಕೊಳ್ಳಿ.

ನಮ್ಮ ಪ್ಲಾಟ್‌ಫಾರಂ ಅನ್ನು ನೀವು ಬಳಸುವಾಗ ನೀವು ಮತ್ತು ನಾವು ಕೆಲವು ನಿಯಮಗಳನ್ನು ಅನುಸರಿಸಬೇಕು. ಈ ದಾಖಲೆಯಲ್ಲಿ ಈ ನಿಯಮಗಳನ್ನು ನಾವು ಪಟ್ಟಿ ಮಾಡಿದ್ದೇವೆ. ಇಲ್ಲಿ ನಮೂದಿಸಿದ ಎಲ್ಲ ನಿಯಮಗಳು ಮತ್ತು ಎಲ್ಲ ಇತರ ಹೈಪರ್‌ಲಿಂಕ್‌ಗಳನ್ನು ದಯವಿಟ್ಟು ಗಮನವಿಟ್ಟು ಓದಿ. ನಮ್ಮ ಪ್ಲಾಟ್‌ಫಾರಂ ಬಳಸುವ ಮೂಲಕ ಈ ನಿಯಮಗಳಿಗೆ ನೀವು ಸಮ್ಮತಿಸುತ್ತೀರಿ. ಹಾಗೆಯೇ, ಭಾರತದ ಹೊರಗೆ ಈ ಸೇವೆಗಳನ್ನು ನೀವು ಬಳಸುತ್ತಿದ್ದರೆ, ನಮ್ಮ ಸ್ಥಳೀಯ ನಿಯಮಗಳಿಗೆ ದಯವಿಟ್ಟು ಬದ್ಧರಾಗಿ.

ನಿಯಮಗಳು ಮತ್ತು ಸೇವೆಗಳಿಗೆ ಬದಲಾವಣೆಗಳು#

ನಮ್ಮ ಪ್ಲಾಟ್‌ಫಾರಂ ಡೈನಾಮಿಕ್ ಆಗಿದೆ ಮತ್ತು ತ್ವರಿತವಾಗಿ ಬದಲಾಗಬಹುದು. ಹೀಗಾಗಿ, ನಾವು ಒದಗಿಸುವ ಸೇವೆಯನ್ನು ನಮ್ಮ ವಿವೇಚನೆಗೆ ಒಳಪಟ್ಟು ಬದಲಿಸಬಹುದು. ನಾವು ತಾತ್ಕಾಲಿಕವಾಗಿ ಅಥವಾ ಶಾಶ್ವತವಾಗಿ, ಸೇವೆಗಳನ್ನು ಅಥವಾ ಯಾವುದೇ ವೈಶಿಷ್ಟ್ಯಗಳನ್ನು ಸಾಮಾನ್ಯವಾಗಿ ನಿಮಗೆ ಒದಗಿಸುವುದನ್ನು ನಿಲ್ಲಿಸಬಹುದು.

ಯಾವುದೇ ಸೂಚನೆ ನೀಡದೇ ನಮ್ಮ ಪ್ಲಾಟ್‌ಫಾರಂ ಮತ್ತು ಸೇವೆಗಳಿಗೆ ಸೌಲಭ್ಯಗಳನ್ನು ನಾವು ತೆಗೆದುಹಾಕಬಹುದು ಅಥವಾ ಸೇರಿಸಬಹುದು. ಆದಾಗ್ಯೂ, ನಿಮ್ಮ ಸಮ್ಮತಿ ಅಗತ್ಯವಿರುವ ನಾವು ಬದಲಾವಣೆ ಮಾಡಬೇಕಾದರೆಲ್ಲಿ, ಇದರ ಬಗ್ಗೆ ನಾವು ನಿಮ್ಮನ್ನು ಕೇಳುತ್ತೇವೆ. ನಮ್ಮ ಇತ್ತೀಚಿನ ಬದಲಾವಣೆಗಳು ಮತ್ತು ಬೆಳವಣಿಗೆಗಳ ಬಗ್ಗೆ ಅಪ್‌ಡೇಟ್ ಆಗಿರಲು ಕಾಲಕಾಲಕ್ಕೆ ಈ ಪುಟಕ್ಕೆ ಭೇಟಿ ನೀಡುತ್ತಿರಿ.

ನಾವು ಮಾಡಬಹುದಾದ ಬದಲಾವಣೆಗಳು ಮತ್ತು ಕಾಲಕಾಲಕ್ಕೆ ನಾವು ಸೇರಿಸಬಹುದಾದ ಅಥವಾ ತಿದ್ದುಪಡಿ ಮಾಡಬಹುದಾದ ಸೇವೆಗಳನ್ನು ನೋಡಲು ಈ ಪುಟಕ್ಕೆ ಭೇಟಿ ನೀಡಿ.

ನಮ್ಮ ಸೇವೆಗಳು#

ನಮ್ಮ ಸೇವೆಗಳನ್ನು ಒದಗಿಸಲು ನಾವು ಸಮ್ಮತಿಸುತ್ತೇವೆ. ನಾವು ನಿಮಗೆ ಒದಗಿಸುವ ಎಲ್ಲ ಪ್ಲಾಟ್‌ಫಾರ್ಮ್ ಉತ್ಪನ್ನಗಳು, ವೈಶಿಷ್ಟ್ಯಗಳು, ಅಪ್ಲಿಕೇಶನ್‌ಗಳು, ಸೇವೆಗಳು, ತಂತ್ರಜ್ಞಾನಗಳು ಮತ್ತು ಸಾಫ್ಟ್‌ವೇರ್‌ ಅನ್ನು ಸೇವೆಗಳು ಒಳಗೊಂಡಿರುತ್ತವೆ. ಸೇವೆಗಳು ಈ ಮುಂದಿನ ಅಂಶಗಳನ್ನು ಒಳಗೊಂಡಿರುತ್ತವೆ (ಸೇವೆಗಳು):

ನಿಮ್ಮ ವೈಯಕ್ತಿಕ ಸಂಗೀತ ಲೈಬ್ರರಿ ಮತ್ತು ಸುತ್ತಲಿನ ಶಬ್ದಗಳಿಂದ ಸ್ಥಳೀಯವಾಗಿ ಸಂಗ್ರಹಿಸಿದ ಧ್ವನಿ ರೆಕಾರ್ಡಿಂಗ್‌ಗಳನ್ನು ಅಳವಡಿಸಿದ ವೀಡಿಯೋಗಳೂ ಸೇರಿದಂತೆ ಯಾವುದೇ ಫೋಟೋಗ್ರಾಫ್‌ಗಳು, ಬಳಕೆದಾರರ ವೀಡಿಯೋಗಳು, ಧ್ವನಿ ರೆಕಾರ್ಡಿಂಗ್‌ಗಳು ಮತ್ತು ಅದಕ್ಕೆ ಅಳವಡಿಸಲಾದ ಸಂಗೀತದ ಕೆಲಸಗಳು ಸೇರಿದಂತೆ, ಇದಕ್ಕೆ ಮಿತಿಗೊಳ್ಳದಂತೆ ಪ್ಲಾಟ್‌ಫಾರಂ ಮೂಲಕ ಅಪ್‌ಲೋಡ್‌ ಮಾಡಲು ಅಥವಾ ಪೋಸ್ಟ್ ಮಾಡಲು ಅಥವಾ ಕಂಟೆಂಟ್ ಅನ್ನು ಲಭ್ಯವಾಗಿಸಲು ("ಬಳಕೆದಾರರ ಕಂಟೆಂಟ್‌") ಬಳಕೆದಾರರಿಗೆ ನಮ್ಮ ಪ್ಲಾಟ್‌ಫಾರಂ ಅನುವು ಮಾಡುತ್ತದೆ.

ಯಾವುದೇ ಬಳಕೆದಾರರ ಕಂಟೆಂಟ್ ಅನ್ನು ಪ್ಲಾಟ್‌ಫಾರಂನಲ್ಲಿ ನೀವು ಪ್ರಕಟಿಸಿದಾಗ, ಆ ಕಂಟೆಂಟ್‌ನಲ್ಲಿ ನೀವು ಹೊಂದಿರುವ ಯಾವುದೇ ಮಾಲೀಕತ್ವ ಹಕ್ಕುಗಳನ್ನು ನೀವು ಉಳಿಸಿಕೊಂಡಿರುತ್ತೀರಿ. ಆದಾಗ್ಯೂ, ಆ ಕಂಟೆಂಟ್ ಅನ್ನು ಬಳಸಲು ನಮಗೆ ನೀವು ಲೈಸೆನ್ಸ್‌ ಮಂಜೂರು ಮಾಡುತ್ತೀರಿ.

ಸೀಮಿತ ಖಾಸಗಿ ಅಥವಾ ವಾಣಿಜ್ಯೇತರ ಬಳಕೆಗೆ ಮಾತ್ರ ಅಂತಹ ಬಳಕೆದಾರರ ಕಂಟೆಂಟ್ ಅನ್ನು ಹಂಚಿಕೊಳ್ಳಲು/ಸಂವಹನ ನಡೆಸಲು ಇತರ ಬಳಕೆದಾರರಿಗೆ ಹಕ್ಕನ್ನೂ ನೀವು ಮಂಜೂರು ಮಾಡುತ್ತೀರಿ.

ಯಾವುದೇ ಬಳಕೆದಾರರ ಕಂಟೆಂಟ್ ಅನ್ನು ಗೌಪ್ಯವಲ್ಲದ್ದು ಎಂದು ಪರಿಗಣಿಸಲಾಗುತ್ತದೆ. ಗೌಪ್ಯ ಅಥವಾ ತೃತೀಯ ಪಕ್ಷಗಳಿಗೆ ಸಂಬಂಧಿಸಿದ ಅಥವಾ ಅನ್ವಯಿಕ ಕಾನೂನುಗಳನ್ನು ಉಲ್ಲಂಘಿಸಿದೆ ಎಂದು ನೀವು ಪರಿಗಣಿಸಿದ ಯಾವುದೇ ಬಳಕೆದಾರರ ಕಂಟೆಂಟ್ ಅನ್ನು ಸೇವೆಗಳ ಮೂಲಕ ಅಥವಾ ಸೇವೆಗಳಲ್ಲಿ ಪೋಸ್ಟ್ ಮಾಡಬಾರದು ಅಥವಾ ವರ್ಗಾವಣೆ ಮಾಡಬಾರದು. ಸೇವೆಗಳ ಮೂಲಕ ಬಳಕೆದಾರರ ಕಂಟೆಂಟ್ ಅನ್ನು ನೀವು ಸಲ್ಲಿಸಿದರೆ, ಆ ಬಳಕೆದಾರರ ಕಂಟೆಂಟ್ ಮಾಲೀಕರಾಗಿದ್ದೀರಿ ಅಥವಾ ಇತರ ತೃತೀಯ ಪಕ್ಷಗಳ ಪ್ಲಾಟ್‌ಫಾರಂಗಳಿಗೆ ಸೇವೆಗಳಿಂದ ವರ್ಗಾವಣೆ ಮಾಡಲು, ಸೇವೆಗಳಿಗೆ ಸಲ್ಲಿಸಲು ಮತ್ತು/ಅಥವಾ ಯಾವುದೇ ತೃತೀಯ ಪಕ್ಷದ ಕಂಟೆಂಟ್ ಅಳವಡಿಸಿಕೊಳ್ಳಲು ಕಂಟೆಂಟ್‌ನ ಯಾವುದೇ ಭಾಗದ ಮಾಲೀಕರಿಂದ ಎಲ್ಲ ಅಗತ್ಯ ಅನುಮತಿಗಳು, ಅನುಮೋದನೆಗಳನ್ನು ಪಡೆದಿದ್ದೀರಿ ಅಥವಾ ಅಧಿಕಾರ ಹೊಂದಿದ್ದೀರಿ ಎಂದು ನೀವು ಸಮ್ಮತಿಸುತ್ತಿರಿ ಮತ್ತು ಪ್ರತಿನಿಧಿಸುತ್ತೀರಿ. ನೀವು ಕೇವಲ ಧ್ವನಿ ರೆಕಾರ್ಡಿಂಗ್‌ಗೆ ಹಕ್ಕುಗಳನ್ನು ಹೊಂದಿದ್ದು, ಅಂತಹ ಧ್ವನಿ ರೆಕಾರ್ಡಿಂಗ್‌ನಲ್ಲಿ ಒಳಗೊಂಡ ಸಂಗೀತದ ಕೆಲಸಗಳಿಗೆ ಹಕ್ಕು ಹೊಂದಿಲ್ಲದಿದ್ದರೆ, ಸೇವೆಗಳಿಗೆ ಸಲ್ಲಿಸುವ ಕಂಟೆಂಟ್‌ನ ಯಾವುದೇ ಭಾಗದ ಮಾಲೀಕರಿಂದ ಎಲ್ಲ ಅನುಮತಿಗಳು, ಅನುಮೋದನೆಗಳು ಅಥವಾ ಅಧಿಕಾರವನ್ನು ಹೊಂದದ ಹೊರತು ಸೇವೆಗಳಿಗೆ ಅಂತಹ ಧ್ವನಿ ರೆಕಾರ್ಡಿಂಗ್‌ಗಳನ್ನು ನೀವು ಪೋಸ್ಟ್‌ ಮಾಡುವಂತಿಲ್ಲ. ಯಾವುದೇ ಬಳಕೆದಾರರ ಕಂಟೆಂಟ್‌ ಅನ್ನು ಹೋಸ್ಟ್‌, ಸಂಗ್ರಹ, ಬಳಕೆ, ಪ್ರದರ್ಶನ, ಮರು ಉತ್ಪಾದನೆ, ತಿದ್ದುಪಡಿ, ಅಳವಡಿಕೆ, ಸಂಪಾದನೆ ಮತ್ತು ವಿತರನೆಗೆ ವಿಶ್ವಾದ್ಯಂತ, ರಾಯಲ್ಟಿ ಮುಕ್ತ, ಉಪ ಲೈಸೆನ್ಸ್ ಮಾಡಬಹುದಾದ ಮತ್ತು ವರ್ಗಾವಣೆ ಮಾಡಬಹುದಾದ ಲೈಸೆನ್ಸ್‌ ಅನ್ನು ನೀವು ನಮಗೆ ಮಂಜೂರು ಮಾಡುತ್ತೀರಿ. ಸೇವೆಗಳ ಕಾರ್ಯಾಚರಣೆ, ಅಭಿವೃದ್ಧಿ, ಒದಗಿಸುವಿಕೆ, ಪ್ರಚಾರ ಮತ್ತು ಸುಧಾರಣೆ ಮತ್ತು ಸಂಶೋಧನೆ ಮತ್ತು ಹೊಸದನ್ನು ಅಭಿವೃದ್ಧಿಪಡಿಸುವ ಸೀಮಿತ ಉದ್ದೇಶಕ್ಕೆ ಈ ಲೈಸೆನ್ಸ್‌ ಇರುತ್ತದೆ. ಯಾವುದೇ ರೂಪದಲ್ಲಿ ಮತ್ತು ಯಾವುದೇ/ಎಲ್ಲ ಮಾಧ್ಯಮ ಅಥವಾ ವಿತರಣೆ ವಿಧಾನಗಳಲ್ಲಿ (ಪ್ರಸ್ತುತ ತಿಳಿದಿರುವ ಅಥವಾ ನಂತರ ಅಭಿವೃದ್ಧಿಪಡಿಸಿದ) ಬಳಕೆದಾರರ ಕಂಟೆಂಟ್ ಅನ್ನು ಪ್ರಚಾರ, ಪ್ರದರ್ಶನ, ಪ್ರಸಾರ, ಸಿಂಡಿಕೇಟ್, ಸಾರ್ವಜನಿಕ ಪ್ರದರ್ಶನ ಮತ್ತು ಸಾರ್ವಜನಿವಾಗಿ ಡಿಸ್‌ಪ್ಲೇ ಮಾಡುವುದರಿಂದ ಡಿರೈವೇಟಿವ್ ಕೆಲಸವನ್ನು ರಚಿಸಲು ಲೈಸೆನ್ಸ್ ಅನ್ನು ನೀವು ನಮಗೆ ನೀಡುತ್ತೀರಿ.

ಅಗತ್ಯವಿರುವ ಮಟ್ಟಕ್ಕೆ, ಬಳಕೆದಾರರ ಕಂಟೆಂಟ್‌ ರಚನೆ, ಅಪ್‌ಲೋಡ್‌, ಪೋಸ್ಟ್ ಅಥವಾ ಕಳುಹಿಸುವಿಕೆಯಲ್ಲಿ ನೀವು ಕಾಣಿಸಿಕೊಂಡರೆ, ನೀವು ನಮಗೆ ಅನಿರ್ಬಂಧಿತ, ವಿಶ್ವಾದ್ಯಂತದ, ಶಾಶ್ವತ ಹಕ್ಕನ್ನು ಮಂಜೂರು ಮಾಡುತ್ತೀರಿ ಮತ್ತು ನಿಮ್ಮ ಹೆಸರು, ಇಷ್ಟ ಮತ್ತು ಧ್ವನಿಯನ್ನು ವಾಣಿಜ್ಯ ಅಥವಾ ಪ್ರಾಯೋಜಿತ ಕಂಟೆಂಟ್‌ ಜೊತೆಗೆ ಸಂಪರ್ಕವೂ ಸೇರಿದಂತೆ ಬಳಕೆ ಲೈಸೆನ್ಸ್ ಅನ್ನು ನೀವು ನೀಡುತ್ತೀರಿ. ಅಂದರೆ, ಇತರ ಸಂಗತಿಗಳ ಜೊತೆಗೆ, ನಮ್ಮ ಸೇವೆಗಳ ಮಾರ್ಕೆಟಿಂಗ್‌, ಜಾಹೀರಾತು ಅಥವಾ ಸುಧಾರಣೆಗಾಗಿ ನಾವು ನಿಮ್ಮ ಡೇಟಾವನ್ನು ಬಳಸಿದರೆ ಯಾವುದೇ ಪರಿಹಾರಕ್ಕೆ ನೀವು ಅರ್ಹವಾಗಿರುವುದಿಲ್ಲ.

ಯಾವುದೇ ಸಮಯದಲ್ಲಿ ಮತ್ತು ಯಾವುದೇ ಕಾರಣಕ್ಕೆ ನಿಮ್ಮ ಕಂಟೆಂಟ್‌ ಪ್ರವೇಶಾವಕಾಶ, ಪರಿಶೀಲನೆ, ಸ್ಕ್ರೀನ್‌ ಮತ್ತು ಅಳಿಸುವಿಕೆಯನ್ನು ನಮಗೆ ಅಗತ್ಯವಿಲ್ಲದಿದ್ದರೂ ಮಾಡಬಹುದಾಗಿದೆ ಮತ್ತು ಸೇವೆಗಳನ್ನು ಒದಗಿಸುವುದು ಮತ್ತು ಅಭಿವೃದ್ಧಿಪಡಿಸುವುದೂ ಸೇರಿದಂತೆ ಯಾವುದೇ ಕಾರಣಕ್ಕೆ ಅಥವಾ ಈ ನಿಯಮಗಳನ್ನು ನಿಮ್ಮ ಕಂಟೆಂಟ್ ಉಲ್ಲಂಘಿಸುತ್ತದೆ ಎಂದು ನಾವು ಭಾವಿಸಿದರೆ ಹಾಗೂ ಅನ್ವಯಿಕ ಕಾನೂನುಗಳು ಮ್ಯಾಂಡೇಟ್ ಮಾಡಿದ ಉದ್ದೇಶಗಳಿಗೆ ಇದನ್ನು ಮಾಡಬಹುದು. ಸೇವೆಯ ಮೂಲಕ ನೀವು ರಚಿಸುವ, ಅಪ್‌ಲೋಡ್ ಮಾಡುವ, ಪೋಸ್ಟ್ ಮಾಡುವ, ಕಳುಹಿಸುವ ಅಥವಾ ಸಂಗ್ರಹಿಸುವ ಕಂಟೆಂಟ್‌ಗೆ ನೀವು ಮಾತ್ರವೇ ಜವಾಬ್ದಾರರಾಗಿರುತ್ತೀರಿ.

ನಾವು ಆದಾಯವನ್ನು ಉತ್ಪಾದಿಸಬಹುದು, ಉತ್ತಮ ಭಾವವನ್ನು ಹೆಚ್ಚಿಸಿಕೊಳ್ಳಬಹುದು ಅಥವಾ ಉದಾಹರಣೆಯ ಮೂಲಕ ಸೇವೆಗಳನ್ನು ನೀವು ಬಳಸುವುದರಿಂದ ನಮ್ಮ ಮೌಲ್ಯವನ್ನು ಹೆಚ್ಚಿಸಿಕೊಳ್ಳಬಹುದು ಮತ್ತು ಜಾಹೀರಾತುಗಳು, ಪ್ರಾಯೋಜನೆಗಳು, ಪ್ರಚಾರಗಳು, ಡೇಟಾ ಬಳಕೆ ಸೇರಿದಂತೆ ಆದರೆ, ಅದಕ್ಕೆ ಸೀಮಿತಗೊಳ್ಳದಂತೆ ಮತ್ತು ನಮ್ಮೊಂದಿಗೆ ನೀವು ಒಳಗೊಳ್ಳುವ ಈ ನಿಯಮಗಳು ಅಥವಾ ಇನ್ನೊಂದು ಕರಾರಿನಲ್ಲಿ ನಮಗೆ ನಿರ್ದಿಷ್ಟವಾಗಿ ಅನುಮತಿಸಿರುವುದನ್ನು ಹೊರತುಪಡಿಸಿ, ಯಾವುದೇ ಇಂತಹ ಆದಾಯ, ಉತ್ತಮ ಭಾವ ಅಥವಾ ಮೌಲ್ಯದಲ್ಲಿ ಯಾವುದೇ ಹಕ್ಕನ್ನು ನೀವು ಹೊಂದಿರುವುದಿಲ್ಲ ಎಂದು ನೀವು ಸಮ್ಮತಿಸುತ್ತೀರಿ ಮತ್ತು ಒಪ್ಪುತ್ತೀರಿ.

ಈ ನಿಯಮಗಳು ಅಥವಾ ನೀವು ನಮ್ಮೊಂದಿಗೆ ಒಳಗೊಳ್ಳುವ ಯಾವುದೇ ಇನ್ನೊಂದು ಕರಾರಿನ ಅಡಿಯಲ್ಲಿ ನಿರ್ದಿಷ್ಟವಾಗಿ ಅನುಮತಿಸಿರುವುದನ್ನು ಹೊರತುಪಡಿಸಿ, ಪ್ಲಾಟ್‌ಫಾರಂ ನೀವು ಪ್ರಕಟಿಸುವ ಅಥವಾ ನೀವು ರಚಿಸಿದ ಯಾವುದೇ ಬಳಕೆದಾರರ ಕಂಟೆಂಟ್ ಸೇರಿದಂತೆ ಸೇವೆಗಳ ಮೂಲಕ ನಿಮಗೆ ಲಭ್ಯವಾಗಿಸಿದ ನಿಮ್ಮ ಯಾವುದೇ ಸಂಗೀತ ಕೆಲಸಗಳು, ಧ್ವನಿ ರೆಕಾರ್ಡಿಂಗ್‌ಗಳು ಅಥವಾ ಧ್ವನಿ ದೃಶ್ಯ ತುಣುಕುಗಳನ್ನು ನೀವು ಬಳಕೆ ಮಾಡುವ ಯಾವುದೇ ಕಂಟೆಂಟ್‌ನಿಂದ ಯಾವುದೇ ಆದಾಯ ಅಥವಾ ಇತರ ಪರಿಗಣನೆಗಳನ್ನು ಸ್ವೀಕರಿಸಲು ನೀವು ಯಾವುದೇ ಹಕ್ಕು ಹೊಂದಿರುವುದಿಲ್ಲ.

ನೀವು ಕಂಪೋಸರ್ ಆಗಿದ್ದರೆ ಅಥವಾ ಸಂಗೀತ ಕೆಲಸದ ಲೇಖಕರಾಗಿದ್ದರೆ ಮತ್ತು ಪ್ರದರ್ಶನ ಹಕ್ಕುಗಳ ಸಂಘಟನೆಯೊಂದಿಗೆ ಸಂಬಂಧ ಹೊಂದಿದ್ದರೆ, ಆಗ ನಮಗೆ ನಿಮ್ಮ ಬಳಕೆದಾರ ಕಂಟೆಂಟ್‌ನಲ್ಲಿನ ಈ ನಿಯಮಗಳ ಮೂಲಕ ನಮಗೆ ಮಂಜೂರು ಮಾಡುವ ರಾಯಲ್ಟಿ ಮುಕ್ತ ಲೈಸೆನ್ಸ್‌ ಬಗ್ಗೆ ನಿಮ್ಮ ಪ್ರದರ್ಶನ ಹಕ್ಕುಗಳ ಸಂಸ್ಥೆಗೆ ಸೂಚನೆ ನೀಡಬೇಕು. ಸೂಕ್ತ ಪ್ರದರ್ಶನ ಹಕ್ಕುಗಳ ಸಂಸ್ಥೆಯು ಬಾಧ್ಯತೆಗಳನ್ನು ವರದಿ ಮಾಡುವುದರೊಂದಿಗೆ ನಿಮ್ಮ ಬದ್ಧತೆಯನ್ನು ಖಚಿತಪಡಿಸಿಕೊಳ್ಳುವುದು ನಿಮ್ಮ ಜವಾಬ್ದಾರಿಯಾಗಿದೆ. ನಿಮ್ಮ ಹಕ್ಕನ್ನು ನೀವು ಸಂಗೀತ ಪ್ರಕಾಶಕರಿಗೆ ನಿಯೋಜಿಸಿದ್ದರೆ, ನಿಮ್ಮ ಬಳಕೆದಾರರ ಕಂಟೆಂಟ್‌ನಲ್ಲಿ ಈ ನಿಯಮಗಳಲ್ಲಿ ನಿಗದಿಸಿದ ರಾಯಲ್ಟಿ ಮುಕ್ತ ಲೈಸೆನ್ಸ್‌(ಗಳನ್ನು) ಮಂಜೂರು ಮಾಡಲು ಅಂತಹ ಸಂಗೀತ ಪ್ರಕಾಶಕರಿಂದ ಸಮ್ಮತಿಯನ್ನು ನೀವು ಪಡೆಯಬೇಕು ಅಥವಾ ನಮ್ಮೊಂದಿಗೆ ಈ ನಿಯಮಗಳಿಗೆ ಅಂತಹ ಸಂಗೀತ ಪ್ರಕಾಶಕರು ಒಪ್ಪಂದಕ್ಕೆ ಒಳಗಾಗಬೇಕು.

ಸಂಗೀತ ಕೆಲಸವನ್ನು (ಉದಾ., ಹಾಡು ಬರೆಯುವುದು) ನಿಮಗೆ ಈ ನಿಯಮಗಳಲ್ಲಿ ಲೈಸೆನ್ಸ್‌ಗಳನ್ನು ನಮಗೆ ಮಂಜೂರು ಮಾಡುವ ಹಕ್ಕನ್ನು ನೀಡದೇ ಇರಬಹುದು. ರೆಕಾರ್ಡ್ ಲೇಬಲ್‌ ಜೊತೆಗೆ ಒಪ್ಪಂದಕ್ಕೆ ಒಳಪಟ್ಟ ರೆಕಾರ್ಡಿಂಗ್ ಆರ್ಟಿಸ್ಟ್ ನೀವಾಗಿದ್ದರೆ, ಸೇವೆಗಳ ಮೂಲಕ ನೀವು ರಚಿಸುವ ಯಾವುದೇ ಹೊಸ ರೆಕಾರ್ಡಿಂಗ್‌ಗಳನ್ನು ನಿಮ್ಮ ಲೇಬಲ್‌ ಕ್ಲೇಮ್ ಮಾಡಬಹುದಾದವುಗಳೂ ಸೇರಿದಂತೆ, ನಿಮ್ಮ ರೆಕಾರ್ಡ್ ಲೇಬಲ್‌ ಜೊತೆಗೆ ನೀವು ಹೊಂದಿರಬಹುದಾದ ಯಾವುದೇ ಒಪ್ಪಂದದ ಬಾಧ್ಯತೆಗಳಿಗೆ ಅನುಗುಣವಾಗಿ ನಮ್ಮ ಸೇವೆಗಳ ಬಳಕೆ ಇರುತ್ತದೆ ಎಂಬುದನ್ನು ಖಚಿತಪಡಿಸಿಕೊಳ್ಳುವುದು ನಿಮ್ಮ ಸಂಪೂರ್ಣ ಜವಾಬ್ದಾರಿಯಾಗಿರುತ್ತದೆ.

ನಮ್ಮ ಸೇವೆಯನ್ನು ಅಧ್ಯಯನ ಮಾಡಲು ನಮ್ಮ ಬಳಿ ಇರುವ ಮಾಹಿತಿಯನ್ನು ನಾವು ಬಳಸುತ್ತೇವೆ ಮತ್ತು ನಮ್ಮ ಸೇವೆಯನ್ನು ಉತ್ತಮವಾಗಿಸಲು ಮತ್ತು ನಮ್ಮ ಸಮಾಜದ ಯೋಗಕ್ಷೇಮಕ್ಕೆ ಕೊಡುಗೆ ನೀಡಲು ಸಂಶೋಧನೆ ಉದ್ದೇಶಗಳಿಗಾಗಿ ತೃತೀಯ ಪಕ್ಷಗಳೊಂದಿಗೆ ನಾವು ಸಹಭಾಗಿತ್ವ ಸಾಧಿಸುತ್ತೇವೆ.

ನಮ್ಮ ಸೇವೆಗಳನ್ನು ಯಾರು ಬಳಸಬಹುದು#

ನಿಮ್ಮ ಸ್ನೇಹಿತರು ಮತ್ತು ಕುಟುಂಬದ ಜೊತೆಗೆ ಸಂಪರ್ಕದಲ್ಲಿರಲು ನಮ್ಮ ಪ್ಲಾಟ್‌ಫಾರಂ ಸಹಾಯ ಮಾಡುತ್ತದೆ ಮತ್ತು ವೀಡಿಯೋಗಳು ಮತ್ತು ಸಂಗೀತವನ್ನು ಹಂಚಿಕೊಳ್ಳಲು ನಿಮಗೆ ಅನುವು ಮಾಡುತ್ತದೆ. ನಿಮ್ಮ ಆದ್ಯತೆಯ ಕಂಟೆಂಟ್ ಅನ್ನು ನಾವು ಅರ್ಥ ಮಾಡಿಕೊಳ್ಳುತ್ತೇವೆ ಮತ್ತು ನಮ್ಮ ಯಾವುದೇ ವ್ಯಕ್ತಿ ("ಸೇವೆ/ಸೇವೆಗಳು") ತೊಡಗಿಸಿಕೊಳ್ಳದಂತೆ ಸ್ವಯಂಚಾಲಿತ ರೀತಿಯಲ್ಲಿ ನಮ್ಮ ಪ್ಲಾಟ್‌ಫಾರಂನಲ್ಲಿ ಲಭ್ಯ ಕಂಟೆಂಟ್ ಅನ್ನು ಸಲಹೆ ನೀಡುತ್ತೇವೆ.

ನಮ್ಮೊಂದಿಗೆ ಬದ್ಧತೆ ಕರಾರಿಗೆ ನೀವು ಒಳಪಡಲು ಅರ್ಹವಾಗಿದ್ದರೆ ಮತ್ತು ನಮ್ಮ ಸೇವೆಗಳನ್ನು ಬಳಸಲು ಕಾನೂನಾತ್ಮಕವಾಗಿ ಅನುಮತಿ ಹೊಂದಿದ್ದರೆ ಮಾತ್ರ ನೀವು ನಮ್ಮ ಸೇವೆಗಳನ್ನು ಬಳಸಬಹುದು. ಕಂಪನಿ ಅಥವಾ ಯಾವುದೇ ಕಾನೂನಾತ್ಮಕ ವ್ಯಕ್ತಿಗಳ ಪರವಾಗಿ ಈ ನಿಯಮಗಳನ್ನು ನೀವು ಸಮ್ಮತಿಸುತ್ತಿದ್ದರೆ, ಈ ನಿಯಮಗಳಿಗೆ ಅಂತಹ ಸಂಸ್ಥೆಯು ಬದ್ಧವಾಗಲು ಅಧಿಕಾರ ಹೊಂದಿದ್ದೀರಿ ಎಂದು ನೀವು ಪ್ರತಿನಿಧಿಸುತ್ತೀರಿ ಮತ್ತು ವಾರಂಟಿ ನೀಡುತ್ತೀರಿ ಮತ್ತು ಪರಿಣಾಮಕಾರಿಯಾಗಿ "ನೀವು" ಮತ್ತು "ನಿಮ್ಮ" ಎಂಬುದು ಕಂಪನಿಯನ್ನು ಉಲ್ಲೇಖಿಸುತ್ತದೆ.

ಅನ್ವಯಿಕ ಕಾನೂನು ಅಡಿಯಲ್ಲಿ ನಮ್ಮ ಸೇವೆಗಳನ್ನು ಬಳಸಲು ನೀವು ಅಧಿಕಾರ ಹೊಂದಿದ್ದೀರಿ ಎಂದು ದಯವಿಟ್ಟು ಖಚಿತಪಡಿಸಿ..

ನಮ್ಮ ಸೇವೆಗಳನ್ನು ಬಳಸುವುದು ಹೇಗೆ#

ನಮ್ಮ ಸೇವೆಯನ್ನು ಬಳಸಲು, ನಿಮ್ಮ ಮೊಬೈಲ್‌ ಫೋನ್‌ನಲ್ಲಿ ಮೊಬೈಲ್ ಅಪ್ಲಿಕೇಶನ್ ಅನ್ನು ನೀವು ರನ್ ಮಾಡಬೇಕು ಮತ್ತು ಸೇವೆಗಳನ್ನು ರನ್ ಮಾಡಲು ನೀವು ಬಯಸಿದ ಪ್ರಾದೇಶಿಕ ಭಾಷೆಯನ್ನು ಆಯ್ಕೆ ಮಾಡಬೇಕು. ನಮ್ಮ ಪ್ಲಾಟ್‌ಫಾರಂನಲ್ಲಿ ಲಭ್ಯವಿರುವ ಕಂಟೆಂಟ್ ಡೌನ್‌ಲೋಡ್ ಮಾಡಲು ನಾವೂ ನಿಮಗೆ ಅನುಮತಿಸುತ್ತೇವೆ ಮತ್ತು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರಂಗಳಾದ್ಯಂತ ನಿಮ್ಮ ಅನುಭವವನ್ನು ಹಂಚಿಕೊಳ್ಳುತ್ತೇವೆ.

ನಿಮಗೆ ಸೇವೆಗಳನ್ನು ಒದಗಿಸುವ ನಿಟ್ಟಿನಲ್ಲಿ, ನಿಮ್ಮ ಮೊಬೈಲ್ ಸಾಧನದ ಕೆಲವು ವೈಶಿಷ್ಟ್ಯಗಳ ಪ್ರವೇಶಾವಕಾಶವನ್ನು ನಾವು ಪಡೆಯಬೇಕಾಗಿರುತ್ತದೆ.

ಮೊಜ್ ಸೆಲೆಕ್ಟ್#

ಪ್ಲಾಟ್‌ಫಾರ್ಮ್‌ನಲ್ಲಿರುವ ಎಲ್ಲಾ ‘ಮೊಜ್ ಸೆಲೆಕ್ಟ್ ಕ್ರಿಯೇಟರ್ಸ್’, ಅಂದರೆ ನಮ್ಮ ಪಾಲುದಾರ ರಚನೆಕಾರರು ಕಪ್ಪು ಬಾರ್ಡರ್ ನೊಂದಿಗೆ ಗುರುತಿಸಬಹುದಾಗಿದೆ (ಅವರ ಪ್ರೊಫೈಲ್ ಚಿತ್ರದಲ್ಲಿ ಪ್ರಮಾಣಿತ ಬಿಳಿ ಬಾರ್ಡರ್ ಬದಲಿಗೆ). ನಾವು ವಿಷಯ ಪರವಾನಗಿ ಅಥವಾ ಅಂತಹ MoJ ಆಯ್ದ ರಚನೆಕಾರರೊಂದಿಗೆ ಮಾರ್ಕೆಟಿಂಗ್ ವ್ಯವಸ್ಥೆಗಳಿಗೆ ಪ್ರವೇಶಿಸಬಹುದು.

ಅನುಸರಣೆ ಅವಶ್ಯಕತೆಗಳು#

ಸಂಬಂಧಿತ ಸುದ್ದಿ ಮತ್ತು ಪ್ರಸ್ತುತ ವ್ಯವಹಾರಗಳ ಪ್ರಕಾಶಕರು ಅನ್ವಯವಾಗುವ ನಿಯಮಗಳ ಪ್ರಕಾರ ಮಾಹಿತಿ ಮತ್ತು ಪ್ರಸಾರ ಸಚಿವಾಲಯಕ್ಕೆ ಪ್ಲಾಟ್‌ಫಾರ್ಮ್‌ನಲ್ಲಿ ತಮ್ಮ ಬಳಕೆದಾರರ ಖಾತೆಗಳ ವಿವರಗಳನ್ನು ಒದಗಿಸಬೇಕಾಗುತ್ತದೆ

ಸುರಕ್ಷತೆ#

ಧನಾತ್ಮಕ ಮತ್ತು ಸಮಗ್ರ ಸಮುದಾಯವನ್ನು ಪ್ರೋತ್ಸಾಹಿಸುವುದು ಮತ್ತು ಎಲ್ಲ ಬಳಕೆದಾರರಿಗೆ ಅದ್ಭುತ ಸಾಮಾಜಿಕ ಅನುಭವಗಳನ್ನು ಒದಗಿಸುವುದು ನಮ್ಮ ಗುರಿಯಾಗಿದೆ. ಇದಕ್ಕಾಗಿ, ನೀವು ಇದಕ್ಕೆ ಸಮ್ಮತಿಸಬೇಕು ಎಂದು ನಾವು ಬಯಸುತ್ತೇವೆ:

  • ಈ ನಿಯಮಗಳಲ್ಲಿ ಮೋಸದ, ತಪ್ಪುದಾರಿಗೆಳೆಯುವ, ಅಕ್ರಮ ಅಥವಾ ನಿಷೇಧಿತವಾದ ಯಾವುದೇ ಉದ್ದೇಶಕ್ಕೆ ಸೇವೆಗಳನ್ನು ನೀವು ಬಳಸುವುದಿಲ್ಲ.
  • ಸೇವೆಗಳನ್ನು ಪ್ರವೇಶಿಸಲು ಅಥವಾ ಇತರ ಬಳಕೆದಾರರ ಮಾಹಿತಿಯನ್ನು ಹೊರತೆಗೆಯಲು ಯಾವುದೇ ರೋಬೋಟ್, ಸ್ಪೈಡರ್, ಕ್ರಾವ್ಲರ್, ಸ್ಕ್ರಾಪರ್ ಅಥವಾ ಇತರ ಅಟೊಮೇಟೆಡ್ ವಿಧಾನವನ್ನು ನೀವು ಬಳಸುವುದಿಲ್ಲ.
  • ಸೇವೆಗಳೊಂದಿಗೆ ಅಥವಾ ಇತರ ಬಳಕೆದಾರರ ಕಂಟೆಂಟ್ ಅಥವಾ ಮಾಹಿತಿಯೊಂದಿಗೆ ನಮ್ಮ ಲಿಖಿತ ಸಮ್ಮತಿ ಇಲ್ಲದೇ ಸಂವಹನ ನಡೆಸುವ ಯಾವುದೇ ತೃತೀಯ ಪಕ್ಷದ ಅಪ್ಲಿಕೇಶನ್‌ಗಳನ್ನು ನೀವು ಬಳಸುವುದಿಲ್ಲ ಅಥವಾ ಅಭಿವೃದ್ಧಿಪಡಿಸುವುದಿಲ್ಲ.
  • ಸೇವೆಗಳ ಕಾರ್ಯನಿರ್ವಹಣೆಯನ್ನು ಹಾನಿ ಮಾಡಬಹುದಾದ, ನಿಷ್ಕ್ರಿಯಗೊಳಿಸಬಹುದಾದ, ಹೊರೆ ಮಾಡಬಹುದಾದ ಅಥವಾ ಘಾಸಿ ಮಾಡಬಹುದಾದ ಅಥವಾ ಇತರ ಬಳಕೆದಾರರು ಸೇವೆಗಳನ್ನು ಸಂಪೂರ್ಣವಾಗಿ ಬಳಸಲು ಅಡ್ಡಿಪಡಿಸುವ, ಋಣಾತ್ಮಕವಾಗಿ ಬಾಧಿಸುವ ಅಥವಾ ತಡೆ ಉಂಟು ಮಾಡಬಹುದಾದ ರೀತಿಯಲ್ಇ ನೀವು ಸೇವೆಗಳನ್ನು ಬಳಸುವುದಿಲ್ಲ.
  • ಯಾವುದೇ ತೃತೀಯ ಪಕ್ಷದ ಯಾವುದೇ ಬೌದ್ಧಿಕ ಸ್ವತ್ತು ಹಕ್ಕುಗಳನ್ನು ಉಲ್ಲಂಘಿಸಬಹುದಾದ ರೀತಿಯಲ್ಲಿ ಕಂಟೆಂಟ್ ಅನ್ನು ನೀವು ಪೋಸ್ಟ್ ಮಾಡುವುದಿಲ್ಲ.
  • ನಮ್ಮ ಸೇವೆಗಳನ್ನು ಬಳಸಲು ಇನ್ನೊಬ್ಬ ವ್ಯಕ್ತಿಯನ್ನಾಗಿ ಅಥವಾ ಇನ್ನೊಬ್ಬ ವ್ಯಕ್ತಿಯ ಪ್ರತಿನಿಧಿಯನ್ನಾಗಿ ನೀವು ತಪ್ಪು ಪ್ರತಿನಿಧಿತ್ವ ಮಾಡುವುದಿಲ್ಲ.
  • ಇನ್ನೊಬ್ಬ ಬಳಕೆದಾರರ ಖಾತೆ, ಬಳಕೆದಾರರ ಹೆಸರು ಅಥವಾ ಪಾಸ್‌ವರ್ಡ್‌ ಅನ್ನು ಅವರ ಅನುಮತಿ ಇಲ್ಲದೇ ನೀವು ಬಳಸುವುದಿಲ್ಲ ಅಥವಾ ಬಳಸಲು ಪ್ರಯತ್ನಿಸುವುದಿಲ್ಲ.
  • ಇನ್ನೊಬ್ಬ ಬಳಕೆದಾರರಿಂದ ಲಾಗಿನ್ ವಿವರಗಳನ್ನು ನೀವು ಆಗ್ರಹಿಸುವುದಿಲ್ಲ.
  • ಅಪ್ರಾಪ್ತರಿಗೆ ಅಪಾಯಕರ ಎಂದು ಪರಿಗಣಿಸಬಹುದಾದ ಕಂಟೆಂಟ್ ಅನ್ನು ನೀವು ಪೋಸ್ಟ್ ಮಾಡುವಂತಿಲ್ಲ. ಇದಕ್ಕೆ ಸಂಬಂಧಿಸಿದಂತೆ ದಯವಿಟ್ಟು ಕಂಟೆಂಟ್ ಮತ್ತು ಸಮುದಾಯ ಮಾರ್ಗಸೂಚಿಗಳನ್ನು ನೋಡಿ.
  • ಪೋರ್ನೋಗ್ರಫಿ, ಗ್ರಾಫಿಕ್ ಹಿಂಸೆ, ಬೆದರಿಕೆಗಳು, ದ್ವೇಷ ಭಾಷಣ ಅಥವಾ ಹಿಂಸೆಗೆ ಪ್ರಚೋದನೆಗೆ ಲಿಂಕ್‌ಗಳು ಅಥವಾ ಇದನ್ನು ಒಳಗೊಂಡಿರುವ ಕಂಟೆಂಟ್ ಅನ್ನು ನೀವು ಪೋಸ್ಟ್ ಮಾಡುವುದಿಲ್ಲ.
  • ನೀವು ವೈರಸ್‌ಗಳು ಅಥವಾ ಇತರ ಅಪಾಯಕಾರಿ ಕೋಡ್ ಅನ್ನು ಅಪ್‌ಲೋಡ್ ಮಾಡಬಾರದು ಅಥವಾ ಸೇವೆಗಳ ಭದ್ರತೆಯೊಂದಿಗೆ ರಾಜಿ ಮಾಡಿಕೊಳ್ಳಬಾರದು.
  • ನಾವು ಅಳವಡಿಸಿಕೊಳ್ಳುವ ಯಾವುದೇ ಕಂಟೆಂಟ್ ಫಿಲ್ಟರಿಂಗ್ ತಂತ್ರಗಳನ್ನು ವಂಚಿಸುವಂತಿಲ್ಲ ಅಥವಾ ನಿಮಗೆ ಪ್ರವೇಶಾವಕಾಶವಿಲ್ಲದ ಸೇವೆಗಳ ಪ್ರದೇಶಗಳು ಅಥವಾ ವೈಶಿಷ್ಟ್ಯಗಳನ್ನು ಪ್ರವೇಶಿಸಲು ಪ್ರಯತ್ನಿಸುವಂತಿಲ್ಲ.
  • ನಮ್ಮ ಸೇವೆಗಳು ಅಥವಾ ಯಾವುದೇ ಸಿಸ್ಟಮ್ ಅಥವಾ ನೆಟ್‌ವರ್ಕ್‌ ಅನ್ನು ನೀವು ತನಿಖೆ ನಡೆಸುವುದಿಲ್ಲ, ಸ್ಕ್ಯಾನ್ ಮಾಡುವುದಿಲ್ಲ ಅಥವಾ ಪರೀಕ್ಷಿಸುವುದಿಲ್ಲ.
  • ಯಾವುದೇ ರೀತಿಯಲ್ಲಿ ಅಥವಾ ಭಾರತದ ಸಮಗ್ರತೆ, ಒಗ್ಗಟ್ಟು, ರಕ್ಷಣೆ, ಭದ್ರತೆ ಅಥವಾ ಸ್ವಾಯತ್ತತೆ, ವಿದೇಶಗಳೊಂದಿಗೆ ಸ್ನೇಹಪರ ಸಂಬಂಧಗಳು ಅಥವಾ ಸಾರ್ವಜನಿಕ ಆಜ್ಞೆ ಅಥವಾ ಯಾವುದೇ ಗಮನಾರ್ಹ ಅಪರಾಧಕ್ಕೆ ಕಾರಣವಾಗುವ ಉದ್ರೇಕಗೊಳಿಸುವುದು ಅಥವಾ ಯಾವುದೇ ಅಪರಾಧದ ತನಿಖೆಯನ್ನು ಅಡ್ಡಿಪಡಿಸುವುದು ಅಥವಾ ಯಾವುದೇ ಇತರ ದೇಶವನ್ನು ಅವಮಾನ ಮಾಡುವ ರೀತಿ ಅಥವಾ ವಿಧಾನದಲ್ಲಿ ಕಂಟೆಂಟ್ ಅನ್ನು ಪೋಸ್ಟ್ ಮಾಡುವುದಿಲ್ಲ.
  • ಈ ನಿಯಮಗಳನ್ನು ಉಲ್ಲಂಘಿಸುವ ಯಾವುದೇ ಚಟುವಟಿಕೆಗಳನ್ನು ನೀವು ಪ್ರೋತ್ಸಾಹಿಸುವುದಿಲ್ಲ ಅಥವಾ ಪ್ರಚುರಪಡಿಸುವುದಿಲ್ಲ.
  • ನಾವು ಅನುಷ್ಠಾನಗೊಳಿಸಿದ/ ಜಾರಿಗೊಳಿಸಿದ ಯಾವುವೇ ವೈಶಿಷ್ಟ್ಯ, ಕ್ರಮ, ಅಳತೆ ಅಥವಾ ನೀತಿಯನ್ನು ನೀವು ವಂಚಿಸುವುದಿಲ್ಲ. ಉದಾಹರಣೆಗೆ, ಸೇವೆಗಳನ್ನು ಬಳಸುವುದರಿಂದ ನಿಷೇಧಿಸಿದ ಸಂದರ್ಭದಲ್ಲಿ, ಯಾವುದೇ ಖಾತೆ ಅಮಾನತು ಅಥವಾ ನಿಮ್ಮ ವಿರುದ್ಧ ನಾವು ತೆಗದುಕೊಳ್ಳಬಹುದಾದ ಇದೇ ರೀತಿಯ ಕ್ರಮಗಳನ್ನು ವಂಚಿಸಲು ನೀವು ಪ್ರಯತ್ನಿಸುವುದಿಲ್ಲ.

ಗೌಪ್ಯತೆ ನೀತಿ#

ಮಾಹಿತಿಯನ್ನು ಹೇಗೆ ಸಂಗ್ರಹ, ಬಳಕೆ, ಪ್ರಕ್ರಿಯೆಗೊಳಿಸುವಿಕೆ, ಹಂಚಿಕೆ ಮತ್ತು ಸಂಗ್ರಹಿಸಿದ ಮಾಹಿತಿಯನ್ನು ನಾವು ಹೇಗೆ ಶೇಖರಿಸುತ್ತೇವೆ ಎಂಬುದನ್ನು ಗೌಪ್ಯತೆ ನೀತಿಯು ವಿವರಿಸುತ್ತದೆ. ಗೌಪ್ಯತೆ ನೀತಿಯು ಕಾನೂನು ಅಡಿಯಲ್ಲಿ ನಿಮ್ಮ ಹಕ್ಕುಗಳನ್ನು ಮತ್ತು ನೀವು ನಮಗೆ ಒದಗಿಸುವ ಡೇಟಾವನ್ನು ನೀವು ಹೇಗೆ ನಿಯಂತ್ರಿಸಬಹುದು ಎಂಬ ವಿವರಗಳನ್ನು ನೀಡುತ್ತದೆ.

ಈ ಮಾಹಿತಿಯನ್ನು ನಾವು ಹೇಗೆ ಶೇಖರಣೆ ಮತ್ತು ಬಳಕೆಯನ್ನು ಮಾಡುತ್ತೇವೆ ಎಂಬುದನ್ನು ಗೌಪ್ಯತೆ ನೀತಿ ವಿವರಿಸುತ್ತದೆ.

ಗೌಪ್ಯತೆ ನೀತಿಗೆ ಒಳಪಟ್ಟು ನಾವು ಪ್ಲಾಟ್‌ಫಾರ್ಮ್‌ನಲ್ಲಿ ಥರ್ಡ್-ಪಾರ್ಟಿಯ ಎಂಬೆಡಿಂಗ್‌ಗಳು ಮತ್ತು ಸೇವೆಗಳನ್ನು ಸಹ ಬಳಸಬಹುದು. ಅಂತಹ API ಸೇವೆಗಳು ಮತ್ತು ಎಂಬೆಡೆಡ್ ಬಳಕೆಯು ಅಂತಹ ಥರ್ಡ್-ಪಾರ್ಟಿಯ ಸೇವೆಗಳ ನೀತಿಗಳಿಂದ ಆವರಿಸಲ್ಪಟ್ಟಿದೆ. ಅಂತಹ ಎಂಬೆಡೆಡ್ ಅಥವಾ API ಸೇವೆಗಳನ್ನು ಬಳಸುವ ಮೂಲಕ, ಇಲ್ಲಿ ಒದಗಿಸಲಾದ ಮೂರನೇ ವ್ಯಕ್ತಿಯ ಸೇವಾ ನಿಯಮಗಳಿಗೆ ಬದ್ಧರಾಗಿರಲು ನೀವು ಸಮ್ಮತಿಸುತ್ತೀರಿ.

ನಿಮ್ಮ ಬದ್ಧತೆಗಳು#

ವೈವಿಧ್ಯಮಯ ಸಮುದಾಯಕ್ಕೆ ಸುರಕ್ಷಿತ ಮತ್ತು ಸುಭದ್ರ ಸೇವೆಯನ್ನು ಒದಗಿಸಲು ನಾವೆಲ್ಲರೂ ನಮ್ಮ ಕರ್ತವ್ಯವನ್ನು ನಿಭಾಯಿಸಬೇಕಾಗುತ್ತದೆ. ನಮ್ಮ ಸೇವೆಗಳನ್ನು ಒದಗಿಸಲು ನಮ್ಮ ಬದ್ಧಗೆ ಪ್ರತಿಯಾಗಿ, ನಮಗೆ ಕೆಲವು ಬದ್ಧತೆಯನ್ನು ನೀವು ಒದಗಿಸಬೇಕೆಂದು ನಾವು ಬಯಸುತ್ತೇವೆ. ಈ ಕೆಳಗೆ ನೀವು ನೀಡುವ ಬದ್ಧತೆಯೊಂದಿಗೆ ಪ್ಲಾಟ್‌ಫಾರಂನಲ್ಲಿ ನೀವು ತೆಗೆದುಕೊಂಡ ಯಾವುದೇ ಕ್ರಮಗಳ ವೆಚ್ಚ ಮತ್ತು ಪರಿಣಾಮಗಳಿಗೆ ನೀವು ಜವಾಬ್ದಾರರಾಗಿರುತ್ತೀರಿ ಎಂಬುದನ್ನು ದಯವಿಟ್ಟು ಗಮನಿಸಿ. ನಮ್ಮ ಸೇವೆಗಳನ್ನು ಬಳಸುವ ಮೂಲಕ, ನೀವು ಈ ಮುಂದಿನದನ್ನು ಸಮ್ಮತಿಸುತ್ತೀರಿ ಮತ್ತು ಒಪ್ಪಿಕೊಳ್ಳುತ್ತೀರಿ:

ಎ. ಯಾವುದೇ ಸುಳ್ಳು ಮಾಹಿತಿಯನ್ನು ಒದಗಿಸುವುದಿಲ್ಲ#

ನಮ್ಮ ಸೇವೆಗಳನ್ನು ಬಳಸಲು ಇನ್ನೊಬ್ಬ ವ್ಯಕ್ತಿಯನ್ನಾಗಿ ಅಥವಾ ಇನ್ನೊಬ್ಬ ವ್ಯಕ್ತಿಯ ಪ್ರತಿನಿಧಿಯನ್ನಾಗಿ ನೀವು ತಪ್ಪು ಪ್ರತಿನಿಧಿತ್ವ ಮಾಡುವುದಿಲ್ಲ.

ಬಿ. ಸಾಧನದ ಭದ್ರತೆ#

ನಮ್ಮ ಪ್ಲಾಟ್‌ಫಾರಂ ಸುರಕ್ಷಿತವಾಗಿರುವುದನ್ನು ಖಚಿತಪಡಿಸಲು ನಾವು ಕ್ರಮಗಳನ್ನು ಅನುಷ್ಠಾನಗೊಳಿಸಿದ್ದೇವೆ. ಆದಾಗ್ಯೂ, ಹ್ಯಾಕಿಂಗ್ ಮತ್ತು ವೈರಲ್ ದಾಳಿಗಳಿಗೆ ನಮ್ಮ ಪ್ಲಾಟ್‌ಫಾರಂ ಪ್ರತಿರೋಧ ಹೊಂದಿದೆ ಎಂಬ ಗ್ಯಾರಂಟಿಯನ್ನು ಇದು ನೀಡುವುದಿಲ್ಲ. ನಿಮ್ ಮೊಬೈಲ್ ಸಾಧನ ಮತ್ತು ಕಂಪ್ಯೂಟರ್‌ನಲ್ಲಿ ಅದರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಆಂಟಿ ಮಾಲ್‌ವೇರ್ ಮತ್ತು ಆಂಟಿವೈರಸ್ ಸಾಫ್ಟ್‌ವೇರ್ ಅನ್ನು ನೀವು ಹೊಂದಿದ್ದೀರಿ ಎಂದು ನೀವು ಖಚಿತಪಡಿಸುತ್ತೀರಿ.

ನಮ್ಮ ಸೇವೆಗಳ ನಿಮ್ಮ ಬಳಕೆಯನ್ನು ಸುರಕ್ಷಿತಗೊಳಿಸುವ ಎಲ್ಲವನ್ನೂ ನಾವು ಮಾಡುತ್ತಿದ್ದರೂ, ನಮ್ಮ ಪ್ಲಾಟ್‌ಫಾರಂನಲ್ಲಿ ಎಲ್ಲ ರೂಪದ ದಾಳಿಯನ್ನು ನಾವು ತಡೆಯಲಾಗದು ಎಂಬುದನ್ನು ದಯವಿಟ್ಟು ಗಮನದಲ್ಲಿಟ್ಟುಕೊಳ್ಳಿ. ಅಭ್ಯಾಸದ ಭಾಗವಾಗಿ ನೀವು ನಿಮ್ಮ ಮೊಬೈಲ್ ಸಾಧನ ಮತ್ತು ಕಂಪ್ಯೂಟರ್‌ ಯಾವುದೇ ರೀತಿಯಲ್ಲಿ ತಪ್ಪಾಗಿ ಬಳಸಲ್ಪಟ್ಟಿಲ್ಲ ಅಥವಾ ತಿದ್ದಲ್ಪಟ್ಟಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಿ.

ಸಿ. ಕಂಟೆಂಟ್ ತೆಗೆಯುವುದು ಮತ್ತು ವಜಾಗೊಳಿಸುವುದು#

ನಮ್ಮ ಪ್ಲಾಟ್‌ಫಾರ್ಮ್‌ನ ನಿಮ್ಮ ಬಳಕೆಯು ನಮ್ಮ ವಿಷಯ ಮತ್ತು ಸಮುದಾಯ ಮಾರ್ಗಸೂಚಿಗಳಿಂದ ನಿಯಂತ್ರಿಸಲ್ಪಡುತ್ತದೆ. ನಮ್ಮ ಯಾವುದೇ ಬಳಕೆದಾರರು ಈ ವಿಷಯ ಸಮುದಾಯ ಮಾರ್ಗಸೂಚಿಗಳನ್ನು ಉಲ್ಲಂಘಿಸುವ ನಿಮ್ಮ ವಿಷಯವನ್ನು ವರದಿ ಮಾಡಿದರೆ, ನಾವು ಅಂತಹ ವಿಷಯವನ್ನು ನಮ್ಮ ಪ್ಲಾಟ್‌ಫಾರ್ಮ್‌ನಿಂದ ತೆಗೆದುಹಾಕಬಹುದು. ಕಂಟೆಂಟ್ ಮತ್ತು ಸಮುದಾಯ ಮಾರ್ಗಸೂಚಿಗಳಿಗೆ ಸಂಬಂಧಿಸಿದಂತೆ ಹಲವು ವರದಿಗಳನ್ನು ಮಾಡಿದಲ್ಲಿ, ನಮ್ಮೊಂದಿಗೆ ನಿಮ್ಮ ಖಾತೆಯನ್ನು ನಾವು ವಜಾಗೊಳಿಸಬಹುದು ಮತ್ತು ನಮ್ಮೊಂದಿಗೆ ನೋಂದಣಿ ಮಾಡುವುದರಿಂದ ನಿಮ್ಮನ್ನು ನಿರ್ಬಂಧಿಸಬಹುದು. ಇಂತಹ ಯಾವುದೇ ತೆಗೆದುಹಾಕುವಿಕೆಗೆ ನೀವು ಮೇಲ್ಮನವಿ ಸಲ್ಲಿಸಲು ಬಯಸಿದರೆ, ನೀವು grievance@sharechat.co ಗೆ ಬರೆಯಬಹುದು.

ಕಂಟೆಂಟ್ ಒಂದು ಕಂಟೆಂಟ್ ಮತ್ತು ಸಮುದಾಯ ಮಾರ್ಗಸೂಚಿಗಳ ಅಡಿಯಲ್ಲಿ ನಿರ್ಬಂಧಿಸಲ್ಪಟ್ಟಿದ್ದರೆ ನಮ್ಮ ಪ್ಲಾಟ್‌ಫಾರಂನಲ್ಲಿ ಹಂಚಿಕೊಂಡಿರುವ ಯಾವುದೇ ಕಂಟೆಂಟ್ ಅನ್ನು ನಾವು ತೆಗೆದುಹಾಕಬಹುದು.

ಡಿ. ಯಾವುದೇ ಅಕ್ರಮ ಅಥವಾ ಕಾನೂನಾತ್ಮಕವಲ್ಲದ್ದಕ್ಕೆ ಪ್ಲಾಟ್‌ಫಾರಂ ಬಳಸುವಂತಿಲ್ಲ#

ವೈವಿಧ್ಯಮಯ ಭಾಷೆಗಳು ಮತ್ತು ಸಂಸ್ಕೃತಿ ಹಾಗೂ ವೈವಿಧ್ಯಮಯ ಕಂಟೆಂಟ್ ಅನ್ನು ಒದಗಿಸುವುದಕ್ಕಾಗಿ ನಮ್ಮ ಪ್ಲಾಟ್‌ಫಾರಂ ವಿನ್ಯಾಸ ಮಾಡಲಾಗಿದೆ. ಇದಕ್ಕಾಗಿ, ಕಂಟೆಂಟ್‌ನ ವಿಧವನ್ನು ವರ್ಗೀಕರಿಸಲು ನಾವು ವಿವಿಧ ಟ್ಯಾಗ್‌ಗಳನ್ನು ಅಭಿವೃದ್ಧಿಪಡಿಸಿದ್ದೇವೆ. ಹೀಗಾಗಿ ನೀವು ಹಂಚಿಕೊಂಡ ಕಂಟೆಂಟ್ನ ರೀತಿಯನ್ನು ಸರಿಯಾಗಿ ಗುರುತಿಸಬೇಕು ಮತ್ತು ಸೂಕ್ತವಾಗಿ ಟ್ಯಾಗ್ ಮಾಡಬೇಕು.

ಹೀಗಾಗಿ ನಮ್ಮ ಪ್ಲಾಟ್‌ಫಾರಂ ಅನ್ನು ಅಶ್ಲೀಲ, ಪೋರ್ನೋಗ್ರಾಫಿಕ್, ಅಪ್ರಾಪ್ತರಿಗೆ ಅಪಾಯಕಾರಿ, ತಾರತಮ್ಯದ, ದ್ವೇಷ ಭಾಷಣ ಎಂದು ಪರಿಗಣಿಸಬಹುದಾದ್ದನ್ನು ಹರಡುವುದು, ಯಾವುದೇ ರೀತಿಯ ಹಿಂಸೆಯನ್ನು ಅಥವಾ ದ್ವೇಷವನ್ನು ಯಾವುದೇ ವ್ಯಕ್ತಿಗಳ ವಿರುದ್ಧ ಉತ್ತೇಜಿಸುವ ಅಥವಾ ಭಾರತದ ಯಾವುದೇ ಕಾನೂನುಗಳನ್ನು ಉಲ್ಲಂಘಿಸುವ ಅಥವಾ ಭಾರತದ ಯಾವುದೇ ಕಾನೂನುಗಳು ಹಂಚಿಕೊಳ್ಳಲು ನಿರ್ಬಂಧಿಸಿರುವ ಯಾವುದೇ ಕಂಟೆಂಟ್ ಹಂಚಿಕೊಳ್ಳಲು ಬಳಸಬಾರದು. ಇಂತಹ ಕಂಟೆಂಟ್ ಅನ್ನು ತೆಗದುಹಾಕುವ ಹಕ್ಕನ್ನು ನಾವು ಕಾಯ್ದಿರಿಸಿಕೊಂಡಿದ್ದೇವೆ. ಹೆಚ್ಚಿನ ವಿವರಗಳಿಗೆ ಕಂಟೆಂಟ್ ಮತ್ತು ಸಮುದಾಯ ಮಾರ್ಗಸೂಚಿಗಳನ್ನು ದಯವಿಟ್ಟು ಓದಿ.

ಈ ಮೇಲಿನದರ ಜೊತೆಗೆ, ಯಾವುದೇ ಕಾನೂನು ಬಾಧ್ಯತೆ ಅಥವಾ ಯಾವುದೇ ಸರ್ಕಾರಿ ವಿನಂತಿಗೆ ಬದ್ಧವಾಗಲು ನಿಮ್ಮ ವೈಯಕ್ತಿಕ ಡೇಟಾ ಅಥವಾ ಮಾಹಿತಿಯನ್ನು ಹಂಚಿಕೊಳ್ಳಲು ಸಕಾರಣವಾಗಿ ಅಗತ್ಯ ಎಂದು ನಾವು ಉತ್ತಮ ನಂಬಿಕೆಯನ್ನು ಹೊಂದಿದ್ದರೆ; ಅಥವಾ ಸ್ವತ್ತು, ನಮ್ಮ ಗ್ರಾಹರಕು ಅಥವಾ ಸಾರ್ವಜನಿಕರ ಸುರಕ್ಷತೆಗೆ ಅಪಾಯವನ್ನು ತಡೆಯಲು ಅಥವಾ ಹಕ್ಕುಗಳನ್ನು ರಕ್ಷಿಸಲು; ಸಾರ್ವಜನಿಕ ಸುರಕ್ಷತೆ, ಮೋಸ, ಭದ್ರತೆ ಅಥವಾ ತಾಂತ್ರಿಕ ಸಮಸ್ಯೆಗಳನ್ನು ಗುರುತಿಸಲು ಅಥವಾ ಇತರ ರೀತಿಯಲ್ಲಿ ಪರಿಹರಿಸಲು ಸರ್ಕಾರಿ ಸಂಸ್ಥೆಗಳು ಅಥವಾ ಕಾನೂನು ಜಾರಿ ಅಧಿಕಾರಿಗಳೊಂದಿಗೆ ನಿಮ್ಮ ಮಾಹಿತಿಯನ್ನು ನಾವು ಹಂಚಿಕೊಳ್ಳಬಹುದು ಎಂಬುದನ್ನು ದಯವಿಟ್ಟು ಗಮನದಲ್ಲಿಟ್ಟುಕೊಳ್ಳಿ. ನಮ್ಮ ಪ್ಲಾಟ್‌ಫಾರಂ ಬಳಸುವ ಮೂಲಕ ನೀವು ಮಾಡಿದ ಅಥವಾ ತೃತೀಯ ಪಕ್ಷಗಳು ಅಥವಾ ಬಳಕೆದಾರರು ನಿಮಗೆ ಮಾಡಿದ ಯಾವುದೇ ಕ್ರಮಗಳಿಗೆ ನಾವು ಜವಾಬ್ದಾರರಾಗಿರುವುದಿಲ್ಲ ಎಂದು ನಾವು ಅರ್ಥ ಮಾಡಿಕೊಂಡಿದ್ದೇವೆ.

ಅದ್ಭುತ ಸಾಮಾಜಿಕ ಅನುಭವದಲ್ಲಿ ತೊಡಗಿಸಿಕೊಳ್ಳಲು ಜನರಿಗೆ ಅನುವು ಮಾಡುವ ಪ್ಲಾಟ್‌ಫಾರಂ ಅನ್ನು ನಾವು ಅಭಿವೃದ್ದಿಪಡಿಸಿದ್ದೇವೆ; ಸಮಾಜ ಅಥವಾ ಸಮುದಾಯದ ಸದಸ್ಯರ ಯೋಗಕ್ಷೇಮಕ್ಕೆ ಅಪಾಯ ಉಂಟು ಮಾಡುವ ಅಥವಾ ಅಕ್ರಮದ ಕಂಟೆಂಟ್ ಅನ್ನು ದಯವಿಟ್ಟು ಹಂಚಿಕೊಳ್ಳಬೇಡಿ.

ಇ. ಕಂಟೆಂಟ್ ಹಕ್ಕುಗಳು ಮತ್ತು ಬಾಧ್ಯತೆಗಳು#

ನಾವು ಅಭಿವ್ಯಕ್ತಿ ಸ್ವಾತಂತ್ರ್ಯದಲ್ಲಿ ನಂಬಿಕೆ ಇರಿಸಿದ್ದೇವೆ ಮತ್ತು ನಮ್ಮ ಪ್ಲಾಟ್‌ಫಾರಂನಲ್ಲಿ ವೀಡಿಯೋಗಳನ್ನು ಹಂಚಿಕೊಳ್ಳಲು ಅನುವು ಮಾಡುತ್ತೇವೆ. ನೀವು ಹಂಚಿಕೊಂಡ ಯಾವುದೇ ಕಂಟೆಂಟ್‌ ಮೇಲೆ ನಾವು ಯಾವುದೇ ಮಾಲೀಕತ್ವವನ್ನು ಹೊಂದಿರುವುದಿಲ್ಲ ಮತ್ತು ಕಂಟೆಂಟ್‌ ಹಕ್ಕುಗಳು ನಿಮ್ಮಲ್ಲಿಯೇ ಇರುತ್ತದೆ. ನಮ್ಮ ಅಥವಾ ಯಾವುದೇ ತೃತೀಯ ಪಕ್ಷದ ಬೌದ್ಧಿಕ ಸ್ವತ್ತು ಹಕ್ಕುಗಳನ್ನು ಉಲ್ಲಂಘಿಸಲು ಅಥವಾ ಮೀರಲು ನಮ್ಮ ಪ್ಲಾಟ್‌ಫಾರಂ ಅನ್ನು ನೀವು ಬಳಸುವುದಿಲ್ಲ. ಇಂತಹ ಕಂಟೆಂಟ್‌, ಕಂಟೆಂಟ್ ಮತ್ತು ಸಮುದಾಯ ಮಾರ್ಗಸೂಚಿಗಳಿಗೆ ವಿರುದ್ಧವಾಗಿದೆ ಮತ್ತು ಪ್ಲಾಟ್‌ಫಾರಂನಿಂದ ತೆಗೆದುಹಾಕಬಹುದಾಗಿದೆ. ಮುಂದುವರಿದು, ನಾವು ಅಭಿವೃದ್ಧಿಪಡಿಸಿದ ಯಾವುದೇ ಕಂಟೆಂಟ್ ಅನ್ನು ನೀವು ಬಳಸಿದರೆ, ಇಂತಹ ಕಂಟೆಂಟ್‌ನಲ್ಲಿ ಇರಬಹುದಾದ ಬೌದ್ಧಿಕ ಸ್ವತ್ತು ಹಕ್ಕುಗಳನ್ನು ಹೊಂಡುವುದನ್ನು ನಾವು ಮುಂದುವರಿಸುತ್ತೇವೆ.

ನಮ್ಮ ಸೇವೆಗಳನ್ನು ಬಳಸಿ ಕಂಟೆಂಟ್ ಹಂಚಿಕೊಳ್ಳುವುದು/ಪೋಸ್ಟ್ ಮಾಡುವುದು/ಅಪ್‌ಲೋಡ್ ಮಾಡುವ ಮೂಲಕ, ನಿಮ್ಮ ವಿಷಯದ ವ್ಯುತ್ಪನ್ನ ಕೃತಿಗಳನ್ನು ಹೋಸ್ಟ್ ಮಾಡಲು, ಬಳಸಲು, ವಿತರಿಸಲು, ಚಲಾಯಿಸಲು, ನಕಲು ಮಾಡಲು, ಪ್ರದರ್ಶಿಸಲು, ಅನುವಾದಿಸಲು ಅಥವಾ ರಚಿಸಲು ನೀವು ನಮಗೆ (ಮತ್ತು ನಮ್ಮ ಗುಂಪು ಮತ್ತು ಅಂಗಸಂಸ್ಥೆಗಳು) ವಿಶೇಷವಲ್ಲದ, ರಾಯಧನ-ಮುಕ್ತ, ವರ್ಗಾವಣೆ ಮಾಡಬಹುದಾದ, ಉಪ-ಪರವಾನಗಿ, ವಿಶ್ವಾದ್ಯಂತ ಪರವಾನಗಿಯನ್ನು ನೀಡುತ್ತೀರಿ ( ನಿಮ್ಮ ಗೌಪ್ಯತೆ ಮತ್ತು ಅಪ್ಲಿಕೇಶನ್ ಸೆಟ್ಟಿಂಗ್‌ಗಳಿಗೆ ಅನುಗುಣವಾಗಿ) ಸೇವೆಗಳನ್ನು ಒದಗಿಸುವುದು, ಅಪ್‌ಗ್ರೇಡ್ ಮಾಡುವುದು ಅಥವಾ ಸುಧಾರಿಸುವುದು, ಮಾರ್ಕೆಟಿಂಗ್, ನಿಮ್ಮನ್ನು/ಸೇವೆಗಳನ್ನು ಪ್ರಚಾರ ಮಾಡುವುದು ಅಥವಾ ನಾವು ಅಥವಾ ಗುಂಪಿನಿಂದ ಲಭ್ಯವಿರುವ ಯಾವುದೇ ಸೇವೆಯಲ್ಲಿ ನಿಮ್ಮ ವಿಷಯವನ್ನು ಪ್ರದರ್ಶಿಸುವ ಉದ್ದೇಶಗಳಿಗಾಗಿ. ಯಾವುದೇ ಸಮಯದಲ್ಲಿ ನಿಮ್ಮ ಕಂಟೆಂಟ್ ಮತ್ತು/ಅಥವಾ ಖಾತೆಯನ್ನು ನೀವು ಅಳಿಸಬಹುದು. ಇದು ಇಂತಹ ಇತರ ವೈವಿಧ್ಯಗಳಿಂದ ನಿಮ್ಮ ಬಳಕೆದಾರರ ಕಂಟೆಂಟ್ ಅಳಿಸುವುದಕ್ಕೂ ಕಾರಣವಾಗುತ್ತದೆ. ಆದಾಗ್ಯೂ, ನಿಮ್ಮ ಕಂಟೆಂಟ್‌ ಅನ್ನು ಇತರರೊಂದಿಗೆ ಹಂಚಿಕೊಂಡಿದ್ದರೆ ಪ್ಲಾಟ್‌ಫಾರಂನಲ್ಲಿ ಕಾಣಿಸಿಕೊಳ್ಳುವುದು ಮುಂದುವರಿಯಬಹುದು. ಆದಾಗ್ಯೂ, ಸೀಮಿತ ಅವಧಿಗೆ ನಿಮ್ಮ ಬಳಕೆದಾರರ ಕಂಟೆಂಟ್ ಮತ್ತು ಇತರ ಡೇಟಾವನ್ನು ನೀವು ಉಳಿಸಿಕೊಳ್ಳಬಹುದು. ಹೀಗಾಗಿ, ನಿಮ್ಮ ಖಾತೆಯನ್ನು ಮರುಸ್ಥಾಪಿಸಲು ನೀವು ನಿಮ್ಮ ಖಾತೆಯನ್ನು ಮರುಜಾರಿಯನ್ನು ಆಯ್ಕೆ ಮಾಡಿಕೊಳ್ಳಬೇಕು. ನಾವು ಮಾಹಿತಿಯನ್ನು ಹೇಗೆ ಬಳಸುತ್ತೇವೆ ಮತ್ತು ನಿಮ್ಮ ಕಂಟೆಂಟ್ ಅನ್ನು ಹೇಗೆ ನಿಯಂತ್ರಿಸಬೇಕು ಅಥವಾ ಅಳಿಸಬೇಕು ಎಂಬ ಬಗ್ಗೆ ಹೆಚ್ಚು ತಿಳಿಯಲು ಶೇರ್‌ಚಾಟ್ ಗೌಪ್ಯತೆ ನೀತಿಯನ್ನು ದಯವಿಟ್ಟು ಓದಿ.

ನಮ್ಮ ಪ್ಲಾಟ್‌ಫಾರಂನಲ್ಲಿ ನೀವು ಪೋಸ್ಟ್ ಮಾಡುವ ಕಂಟೆಂಟ್‌ಗೆ ನೀವು ಮಾತ್ರ ಜವಾಬ್ದಾರರಾಗಿರುತ್ತೀರಿ. ನಮ್ಮ ಪ್ಲಾಟ್‌ಫಾರಂನಲ್ಲಿ ಅಥವಾ ಮೂಲಕ ಹಂಚಿಕೊಂಡ ಯಾವುದೇ ಕಂಟೆಂಟ್‌ ಅನ್ನು ನಾವು ಶಿಫಾರಸು ಮಾಡುವುದಿಲ್ಲ ಮತ್ತು ಇಂತಹ ಹಂಚಿಕೆ ಅಥವಾ ಪೋಸ್ಟಿಂಗ್‌ನಿಂದ ಉಂಟಾದ ಯಾವುದೇ ಪರಿಣಾಮಕ್ಕೆ ಜವಾಬ್ದಾರರಾಗಿರುವುದಿಲ್ಲ. ಯಾವುದೇ ಕಂಟೆಂಟ್‌ನಲ್ಲಿ ನಮ್ಮ ಲೋಗೋ ಅಥವಾ ಯಾವುದೇ ಟ್ರೇಡ್‌ಮಾರ್ಕ್‌ನ ಅಸ್ತಿತ್ವದ ಅರ್ಥವು ನಿಮ್ಮ ಕಂಟೆಂಟ್ ಅನ್ನು ನಾವು ಶಿಫಾರಸು ಮಾಡಿದ್ದೇವೆ ಅಥವಾ ಪ್ರಾಯೋಜಿಸಿದ್ದೇವೆ ಎಂಬುದಲ್ಲ. ಮುಂದುವರಿದು, ಪ್ಲಾಟ್‌ಫಾರಂನ ಇತರ ಬಳಕೆದಾರರು ಅಥವಾ ಪ್ಲಾಟ್‌ಫಾರಂನಲ್ಲಿನ ಜಾಹೀರಾತುದಾರರೊಂದಿಗೆ ನೀವು ಮಾಡಿದ ಅಥವಾ ಒಳಗಾದ ಯಾವುದೇ ವಹಿವಾಟುಗಳ ಪರಿಣಾಮಗಳಿಗೆ ನಾವು ಜವಾಬ್ದಾರರಲ್ಲ ಅಥವಾ ಹೊಣೆಗಾರರಲ್ಲ.

ನೀವು ಹಂಚಿಕೊಂಡ ಕಂಟೆಂಟ್‌ಗೆ ನೀವು ಎಂದಿಗೂ ಮಾಲೀಕತ್ವ ಮತ್ತು ಜವಾಬ್ದಾರಿಗಳನ್ನು ಹೊಂದಿರುತ್ತೀರಿ. ನಿಮ್ಮ ಕಂಟೆಂಟ್‌ ಮೇಲೆ ಬೌದ್ಧಿಕ ಸ್ವತ್ತು ಹಕ್ಕುಗಳನ್ನು ಹೊಂದಿದ್ದೇವೆ ಎಂದು ನಾವು ಎಂದಿಗೂ ಕ್ಲೇಮ್ ಮಾಡುವುದಿಲ್ಲ. ಆದರೆ, ನಮ್ಮ ಪ್ಲಾಟ್‌ಫಾರಂನಲ್ಲಿ ನೀವು ಹಂಚಿಕೊಂಡ ಮತ್ತು ಪೋಸ್ಟ್ ಮಾಡಿರುವುದನ್ನು ಬಳಸಲು ಶೂನ್ಯ ವೆಚ್ಚದ, ಶಾಶ್ವತ ಲೈಸೆನ್ಸ್ ಅನ್ನು ನಾವು ಹೊಂದಿರುತ್ತೇವೆ.

ಎಫ್‌. ಮಧ್ಯಂತರ ಸ್ಥಿತಿ ಮತ್ತು ಬಾಧ್ಯತೆ ಇಲ್ಲದಿರುವಿಕೆ#

ಮಾಹಿತಿ ತಂತ್ರಜ್ಞಾನ ಕಾಯ್ದೆ 2000 ಮತ್ತು ಮಾಹಿತಿ ತಂತ್ರಜ್ಞಾನ (ಮಧ್ಯವರ್ತಿ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮೀಡಿಯಾ ನೈತಿಕತೆ ಸಂಹಿತೆ) ನಿಯಮಗಳು 2021 ಅಡಿಯಲ್ಲಿ ನಮ್ಮನ್ನು ಮಧ್ಯವರ್ತಿ ಎಂದು ವ್ಯಾಖ್ಯಾನಿಸಲಾಗಿದೆ. ಮಾಹಿತಿ ತಂತ್ರಜ್ಞಾನ (ಮಧ್ಯವರ್ತಿ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮೀಡಿಯಾ ನೈತಿಕತೆ ಸಂಹಿತೆ) ನಿಯಮಗಳು 2021 ಕಾಯ್ದೆ 3(1) ಅನುಬಂಧಗಳೊಂದಿಗೆ ಈ ನಿಯಮಗಳನ್ನು ಪ್ರಕಟಿಸಲಾಗಿದ್ದು, ಇದರ ಅಡಿಯಲ್ಲಿ ನಿಯಮ ಮತ್ತು ನಿಯಮಾವಳಿಗಳು, ಗೌಪ್ಯತೆ ನೀತಿ ಮತ್ತು ಬಳಕೆ ನೀತಿಯನ್ನು ನಮ್ಮ ಪ್ಲಾಟ್‌ಫಾರಂ ಪ್ರವೇಶಾವಕಾಶ ಮತ್ತು ಬಳಕೆಗೆ ಪ್ರಕಟಿಸಬೇಕಾಗುತ್ತದೆ. ನೀವು ಮತ್ತು ಇತರ ಬಳಕೆದಾರರು ರಚಿಸಿದ ಅಥವಾ ಹಂಚಿಕೊಂಡ, ಅಪ್‌ಲೋಡ್‌, ಹಂಚಿಕೆ ಮತ್ತು ಡಿಸ್‌ಪ್ಲೇ ಮಾಡಿದ ಕಂಟೆಂಟ್‌ಗೆ ಪ್ಲಾಟ್‌ಫಾರಂ ಒದಗಿಸುವುದಕ್ಕೆ ನಮ್ಮ ಜವಾಬ್ದಾರಿ ಸೀಮಿತವಾಗಿದೆ.

ಪ್ಲಾಟ್‌ಫಾರಂನಲ್ಲಿ ನೀವು ಅಥವಾ ಇತರ ವ್ಯಕ್ತಿಗಳು ಮಾಡಬಹುದಾದ ಅಥವಾ ಮಾಡಬಾರದ್ದನ್ನು ನಾವು ನಿಯಂತ್ರಿಸುವುದಿಲ್ಲ ಮತ್ತು ಇಂತಹ ಕ್ರಮಗಳ ಪರಿಣಾಮಕ್ಕೆ ನಾವು ಜವಾಬ್ದಾರರಲ್ಲ (ಆನ್‌ಲೈನ್ ಆಗಿರಲಿ ಅಥವಾ ಆಫ್‌ಲೈನ್ ಆಗಿರಲಿ). ನಮ್ಮ ಸೇವೆಗಳ ಮೂಲಕ ಸೇವೆಗಲು ಮತ್ತು ವೈಶಿಷ್ಟ್ಯಗಳನ್ನು ಪ್ರವೇಶಿಸಿದ್ದರೂ, ಅವುಗಳಿಗೆ ನಾವು ಜವಾಬ್ದಾರರಲ್ಲ. ನಮ್ಮ ಪ್ಲಾಟ್‌ಫಾರಂನಲ್ಲಿ ನಡೆಯುವ ಎಲ್ಲವುಗಳ ಜವಾಬ್ದಾರಿಯು ಭಾರತೀಯ ಕಾನೂನಿಂದ ಆಡಳಿತಕ್ಕೊಳಪಟ್ಟಿದೆ ಮತ್ತು ಆ ಮಟ್ಟಕ್ಕೆ ಸೀಮಿತವಾಗಿದೆ. ಈ ನಿಯಮಗಳಿಗೆ ಸಂಬಂಧಿಸಿದಂತೆ ನಿಮಗೆ ಅಥವಾ ಯಾವುದೇ ಇತರ ವ್ಯಕ್ತಿಗೆ ಉಂಟಾಗಬಹುದಾದದ, ಉಂಟಾಗುವ ಸಾಧ್ಯತೆ ಇದೆ ಎಂದು ನಮಗೆ ತಿಳಿದಿದ್ದರೂ, ಲಾಭ, ಆದಾಯ, ಮಾಹಿತಿ ಅಥವಾ ಡೇಟಾ ನಷ್ಟ, ಪರಿಣಾಮಾತ್ಮಕ, ವಿಶೇಷ, ಪರೋಕ್ಷ, ಸೋದಾಹರಣೆ, ಶಿಕ್ಷಾರ್ಹ ಅಥವಾ ಸನ್ನಿವೇಶಾತ್ಮಕ ಹಾನಿಗಳಿಗೆ ನಾವು ಜವಾಬ್ದಾರರಾಗಿರುವುದಿಲ್ಲ ಎಂದು ನೀವು ಸಮ್ಮತಿಸುತ್ತೀರಿ. ನಿಮ್ಮ ಕಂಟೆಂಟ್, ಮಾಹಿತಿ ಅಥವಾ ಖಾತೆಯನ್ನು ನಾವು ಅಳಿಸುವಾಗಿನದ್ದೂ ಒಳಗೊಂಡಿರುತ್ತದೆ.

ಭಾರತೀಯ ಕಾನೂನು ಅಡಿಯಲ್ಲಿ ನಾವು ಮಧ್ಯವರ್ತಿಗಳಾಗಿರುತ್ತೇವೆ. ನಮ್ಮ ಪ್ಲಾಟ್‌ಫಾರಂನಲ್ಲಿ ಜನರು ಪೋಸ್ಟ್ ಮಾಡುವುದನ್ನು ನಾವು ನಿಯಂತ್ರಿಸುವುದಿಲ್ಲ. ಆದರೆ, ಎಲ್ಲರೂ ಕಂಟೆಂಟ್ ಮತ್ತು ಸಮುದಾಯ ಮಾರ್ಗಸೂಚಿಗಳಿಗೆ ಬದ್ಧವಾಗಿರುತ್ತಾರೆ ಎಂದು ನಾವು ನಿರೀಕ್ಷಿಸಿದ್ದೇವೆ.

ಜಿ. ಅಪ್ಲಿಕೇಶನ್ ಸೇವೆಗಳನ್ನು ವ್ಯತ್ಯಯಗೊಳಿಸುವ ಅಥವಾ ಅಪಾಯಕ್ಕೆ ಸಿಲುಕಿಸುವ ಪ್ರಯತ್ನವನ್ನು ನೀವು ಮಾಡುವುದಿಲ್ಲ#

ನಾವು ಸಮುದಾಯ ಆಧರಿತ ಪ್ಲಾಟ್‌ಫಾರಂ ಅನ್ನು ಅಭಿವೃದ್ಧಿಪಡಿಸಿದ್ದೇವೆ. ಹೀಗಾಗಿ, ನಮ್ಮ ಪ್ಲಾಟ್‌ಫಾರಂ, ಸೇವೆಗಳು ಮತ್ತು ನಮ್ಮ ತಾಂತ್ರಿಕ ಡೆಲಿವರಿ ವ್ಯವಸ್ಥೆಯೊಂದಿಗೆ ಮಧ್ಯಪ್ರವೇಶಿಸುವುದು ಅಥವಾ ಸಾರ್ವಜನಿಕವಲ್ಲದ ಪ್ರದೇಶವನ್ನು ಬಳಸದಿರುವುದಕ್ಕೆ ನೀವು ಸಮ್ಮತಿಸುತ್ತೀರಿ. ನೀವು ಯಾವುದೇ ಟ್ರೋಜನ್‌ಗಳು, ವೈರಸ್‌ಗಳು, ಯಾವುದೇ ಇತರ ದುರುದ್ದೇಶಪೂರ್ವಕ ಸಾಫ್ಟ್‌ವೇರ್, ಯಾವುದೇ ಬೋಟ್‌ಗಳು ಅಥವಾ ಸ್ಕ್ರೇಪ್ ಅನ್ನು ಯಾವುದೇ ಬಳಕೆದಾರರ ಮಾಹಿತಿಗಾಗಿ ನಮ್ಮ ಪ್ಲಾಟ್‌ಫಾರಂ ಅನ್ನು ನೀವು ಪರಿಚಯಿಸುವಂತಿಲ್ಲ. ಇದರ ಜೊತೆಗೆ, ನಾವು ಅಳವಡಿಸಿದ ಯಾವುದೇ ಸಿಸ್ಟಂ, ಭದ್ರತೆ ಅಥವಾ ದೃಢೀಕರಣ ಕ್ರಮಗಳ ಬೇಧ್ಯತೆಯನ್ನು ನೀವು ತನಿಖೆ ನಡೆಸುವುದಿಲ್ಲ, ಸ್ಕ್ಯಾನ್ ಮಾಡುವುದಿಲ್ಲ ಅಥವಾ ಪರೀಕ್ಷಿಸುವುದಿಲ್ಲ. ನಮ್ಮ ತಾಂತ್ರಿಕ ವಿನ್ಯಾಸ ಮತ್ತು ವಾಸ್ತುಶಿಲ್ಪವನ್ನು ಬದಲಿಸಿದರೆ ಅಥವಾ ಬದಲಿಸಲು ಪ್ರಯತ್ನಿಸಿದರೆ, ನಿಮ್ಮ ಬಳಕೆದಾರರ ಪ್ರೊಫೈಲ್ ಅನ್ನು ನಾವು ವಜಾಗೊಳಿಸುತ್ತೇವೆ ಮತ್ತು ನಮ್ಮ ಸೇವೆಗಳನ್ನು ಬಳಸುವುದರಿಂದ ನಿಮ್ಮನ್ನು ನಿಷೇಧಿಸುತ್ತೇವೆ. ಸೂಕ್ತ ಕಾನೂನು ಜಾರಿ ಪ್ರಾಧಿಕಾರಗಳಿಗೆ ಇಂತಹ ಕ್ರಮಗಳನ್ನು ವರದಿ ಮಾಡಬಹುದು ಮತ್ತು ನಿಮಗೆ ಕಾನೂನು ಕ್ರಮಗಳನ್ನು ನಡೆಸಲು ಮುಂದುವರಿಯಬಹುದು.

ನಮ್ಮ ಪ್ಲಾಟ್‌ಫಾರಂಗೆ ನೀವು ಯಾವುದೇ ರೀತಿಯ ದುರುದ್ದೇಶಕಾರಕ ಸಾಫ್ಟ್‌ವೇರ್‌ ಅನ್ನು ಪರಿಚಯಿಸುವುದಿಲ್ಲ ಅಥವಾ ಹ್ಯಾಕ್ ಮಾಡುವುದಿಲ್ಲ. ಇಂತಹ ಕ್ರಮಗಳನ್ನು ನೀವು ಮಾಡಿದಲ್ಲಿ, ನಾವು ನಿಮ್ಮನ್ನು ಪ್ಲಾಟ್‌ಫಾರಂನಿಂದ ತೆಗೆದುಹಾಕಬಹುದು ಮತ್ತು ಪೊಲೀಸರಿಗೆ ಮತ್ತು/ಅಥವಾ ಸೂಕ್ತ ಕಾನೂನು ಅಧಿಕಾರಿಗಳಿಗೆ ನಿಮ್ಮ ಕ್ರಮಗಳನ್ನು ವರದಿ ಮಾಡಬಹುದು.

ನೀವು ನಮಗೆ ನೀಡಿದ ಅನುಮತಿಗಳು#

ನೀವು ಈ ನಿಯಮಗಳನ್ನು ಸಮ್ಮತಿಸುತ್ತೀರಿ ಮತ್ತು ಕೆಲವು ಅನುಮತಿಗಳನ್ನು ನೀಡುತ್ತೀರಿ. ಇದರಿಂದ ನಿಮಗೆ ನಾವು ಉತ್ತಮ ಸೇವೆ ಸಲ್ಲಿಸಬಹುದು. ನೀವು ನಮಗೆ ಮಂಜೂರು ಮಾಡುವ ಅನುಮತಿಗಳೆಂದರೆ:

ಎ. ತೃತೀಯ ಪಕ್ಷಗಳೊಂದಿಗೆ ನಿಮ್ಮ ಪ್ರೊಫೈಲ್ ಮಾಹಿತಿಯನ್ನು ಹಂಚಿಕೊಳ್ಳಲು ಅನುಮತಿ#

ನಮ್ಮ ಪ್ಲಾಟ್‌ಫಾರಂ ಅನ್ನು ಮುಕ್ತವಾಗಿ ಪ್ರವೇಶಿಸಬಹುದಾದ ಮತ್ತು ಬಳಸಬಹುದಾದ ಪ್ಲಾಟ್‌ಫಾರಂ ಆಗಿದ್ದು, ನಾವು ಆದಾಯವನ್ನು ಜನರೇಟ್ ಮಾಡಬೇಕಾಗಿರುತ್ತದೆ. ಇದಕ್ಕಾಗಿ, ನಮ್ಮ ಸೇವೆಗಳನ್ನು ನಿಮಗೆ ನಾವು ಉಚಿತವಾಗಿ ಒದಗಿಸಬಹುದು. ಇದಕ್ಕೆ ಸಂಬಂಧಿಸಿದಂತೆ, ನಿಮಗೆ ಪ್ರಾಯೋಜಿತ ಕಂಟೆಂಟ್ ಅಥವಾ ಜಾಹೀರಾತುಗಳನ್ನು ತೋರಿಸಲು ನಮ್ಮ ಪ್ಲಾಟ್‌ಫಾರಂನಲ್ಲಿ ನಾವು ಸಂಗ್ರಹಿಸಿದ ನಿಮ್ಮ ಬಳಕೆದಾರರ ಹೆಸರು, ಪ್ರೊಫೈಲ್ ಚಿತ್ರಗಳು, ನಿಮ್ಮ ಬಳಕೆ ಮತ್ತು ತೊಡಗಿಸಿಕೊಳ್ಳುವಿಕೆ ಹವ್ಯಾಸಗಳು ಮತ್ತು ವಿಧಾನಗಳು ಸೇರಿದಂತೆ, ಅದರೆ ಇದಕ್ಕೆ ಸೀಮಿತಗೊಳ್ಳದಂತೆ ಯಾವುದೇ ಡೇಟಾವನ್ನು ನಾವು ಹಂಚಿಕೊಳ್ಳಬಹುದು. ಆದಾಗ್ಯೂ, ನಿಮಗೆ ಜಾಹೀರಾತು ನೀಡಿದ ಯಾವುದೇ ಉತ್ಪನ್ನಗಳನ್ನು ನೀವು ಖರೀದಿಸಿದರೆ ಯಾವುದೇ ಆದಾಯ ಹಂಚಿಕೆಯನ್ನು ಪಾವತಿ ಮಾಡಲು ನಾವು ಬಾಧ್ಯವಾಗಿರುವುದಿಲ್ಲ. ನಾವು ಯಾವುದೇ ಉತ್ಪನ್ನಗಳನ್ನು ಶಿಫಾರಸು ಮಾಡುವುದಿಲ್ಲ ಅಥವಾ ಉತ್ಪನ್ನಗಳ ಪ್ರಾಮಾಣಿಕತೆಯನ್ನು ಪ್ರಚುರಪಡಿಸುವುದಿಲ್ಲ. ನಮ್ಮ ಪ್ಲಾಟ್‌ಫಾರಂನಲ್ಲಿ ಬಳಕೆದಾರರು ಉತ್ಪನ್ನಗಳ ಜಾಹೀರಾತು ನೀಡುವುದರಿಂದ, ಇದಕ್ಕೆ ನಮ್ಮ ಶಿಫಾರಸು ಇದೆ ಎಂದು ಪರಿಗಣಿಸಲಾಗುವುದಿಲ್ಲ.

ನಾವು ಯಾವುದೇ ಸೂಕ್ಷ್ಮ ವೈಯಕ್ತಿಕ ಮಾಹಿತಿಯನ್ನು ಹಂಚಿಕೊಂಡರೆ (ಅನ್ವಯಿಕ ಕಾನೂನುಗಳ ಅಡಿಯಲ್ಲಿ ವ್ಯಾಖ್ಯಾನಿಸಿದಂತೆ), ಅದನ್ನು ಹಂಚಿಕೊಳ್ಳುವುದಕ್ಕೂ ಮೊದಲು ನಿಮ್ಮ ಸಮ್ಮತಿಯನ್ನು ನಾವು ಕೇಳುತ್ತೇವೆ.

ಬಿ. ಸ್ವಯಂಚಾಲಿತ ಡೌನ್‌ಲೋಡ್‌ಗಳು ಮತ್ತು ಅಪ್‌ಡೇಟ್‌ಗಳು#

ನಮ್ಮ ಪ್ಲಾಟ್‌ಫಾರಂ ಮತ್ತು ಒದಗಿಸಿದ ಸೇವೆಗಳನ್ನು ನಾವು ನಿರಂತರವಾಗಿ ಅಪ್‌ಡೇಟ್ ಮಾಡುತ್ತಿರುತ್ತೇವೆ. ನಮ್ಮ ಪ್ಲಾಟ್‌ಫಾರಂ ಬಳಸಲು, ನಿಮ್ಮ ಮೊಬೈಲ್ ಸಾಧನಕ್ಕೆ ನೀವು ಮೊಬೈಲ್ ಅಪ್ಲಿಕೇಶನ್ ಅನ್ನು ನೀವು ಡೌನ್‌ಲೋಡ್ ಮಾಡಬೇಕಾಗಬಹುದು ಮತ್ತು ಕಾಲಕಾಲಕ್ಕೆ ಇದನ್ನು ಅಪ್‌ಡೇಟ್ ಮಾಡಬೇಕಾಗಬಹುದು.

ನಿಮ್ಮ ಬಳಕೆಗೆ ಅಪ್ಲಿಕೇಶನ್‌ಗಳು ಮತ್ತು ಸಾಫ್ಟ್‌ವೇರ್‌ ಅನ್ನು ನಿರಂತರವಾಗಿ ಅಪ್‌ಡೇಟ್ ಮಾಡಲಾಗುತ್ತದೆ ಮತ್ತು ಇಂತಹ ಅಪ್‌ಡೇಟ್ ಪ್ರತಿ ಬಾರಿ ಜನರೇಟ್ ಆದಾಗಲೂ ನಿಮ್ಮ ಮೊಬೈಲ್‌ ಸಾಧನಕ್ಕೆ ಮೊಬೈಲ್‌ ಅಪ್ಲಿಕೇಶನ್‌ನ ಇತ್ತೀಚಿನ ಆವೃತ್ತಿಯನ್ನು ನೀವು ಇನ್‌ಸ್ಟಾಲ್ ಮಾಡಬೇಕಾಗುತ್ತದೆ.

ಸಿ. ಕುಕೀಗಳನ್ನು ಬಳಸಲು ಅನುಮತಿಗಳು#

ಸೇವೆಗಳು ಮತ್ತು ತೃತೀಯ ಪಕ್ಷದ ವೆಬ್‌ಸೈಟ್‌ಗಳ ನಿಮ್ಮ ಬಳಕೆಗೆ ಸಂಬಂಧಿಸಿದಂತೆ ಮಾಹಿತಿಯನ್ನು ಸಂಗ್ರಹಿಸಲು ಮತ್ತು ಶೇಖರಿಸಲು ಕುಕೀಗಳು, ಪಿಕ್ಸೆಲ್ ಟ್ಯಾಗ್‌ಗಳು, ವೆಬ್ ಬೀಕಾನ್‌ಗಳು, ಮೊಬೈಲ್ ಸಾಧನ ಐಡಿಗಳು, ಫ್ಲಾಶ್ ಕುಕೀಗಳು ಮತ್ತು ಇದೇ ರೀತಿಯ ಫೈಲ್‌ಗಳು ಅಥವಾ ತಂತ್ರಜ್ಞಾನಗಳನ್ನು ಬಳಸಬಹುದು.

. ಡೇಟಾ ಹಿಡಿದಿಟ್ಟುಕೊಳ್ಳುವಿಕೆ#

ಪ್ಲಾಟ್‌ಫಾರಂ ಅನ್ನು ನೀವು ಬಳಸುವುದಕ್ಕೆ ಸಂಬಂಧಿಸಿದಂತೆ ಕೆಲವು ಮಾಹಿತಿಯನ್ನು ಹಿಡಿದಿಟ್ಟುಕೊಳ್ಳುವ ಹಕ್ಕನ್ನು ನಾವು ಹೊಂದಿದ್ದೇವೆ. ನಾವು ನಿಮ್ಮ ಮಾಹಿತಿಯ ಸಂಗ್ರಹ, ಪ್ರಕ್ರಿಯೆಗೊಳಿಸುವಿಕೆ, ಶೇಖರಣೆ ಮತ್ತು ಬಳಕೆಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಗಾಗಿ ಗೌಪ್ಯತೆ ನೀತಿಯನ್ನು ದಯವಿಟ್ಟು ನೋಡಿ.

ನಿಮಗೆ ಸಂಬಂಧಿಸಿದ ಮತ್ತು ನೀವು ಒದಗಿಸಿದ ಮಾಹಿತಿಯ ಸಂಗ್ರಹ, ಪ್ರಕ್ರಿಯೆಗೊಳಿಸುವಿಕೆ ಮತ್ತು ಹಿಡಿದಿಟ್ಟುಕೊಳ್ಳುವಿಕೆಯನ್ನು ನೀವು ನಮಗೆ ಮಂಜೂರು ಮಾಡುತ್ತೀರಿ. ಹೆಚ್ಚಿನ ಮಾಹಿತಿಗಾಗಿ ಗೌಪ್ಯತೆ ನೀತಿಯನ್ನು ದಯವಿಟ್ಟು ನೋಡಿ.

ಮೋಜ್ ಲೈವ್#

ಪ್ರವೇಶಾವಕಾಶ ಮತ್ತು ಬಳಕೆ:#

"ಪ್ಲಾಟ್‌ಫಾರಂ" ಭಾಗವಾಗಿ ನಾವು, ಪ್ಲಾಟ್‌ಫಾರಂನಲ್ಲಿ ನಿಮ್ಮ ನೈಜ ಸಮಯದ ವೀಡಿಯೋ("ಲೈವ್‌ಸ್ಟ್ರೀಮ್‌") ಗಳನ್ನು ಪ್ರಸಾರ ಮಾಡಲು ಅನುವು ಮಾಡುವ ವೈಶಿಷ್ಟ್ಯವನ್ನು ನಾವು ಈಗ ಒದಗಿಸುತ್ತಿದ್ದೇವೆ. ಲೈವ್‌ಸ್ಟ್ರೀಮ್‌ ಅನ್ನು ಬಳಸಿ ನೀವು ಅಪ್‌ಲೋಡ್ ಮಾಡಿದ ಎಲ್ಲ ಕಂಟೆಂಟ್‌ ಬಳಕೆಯ ನಿಯಮಗಳಿಗೆ ಬದ್ಧವಾಗಿರಬೇಕು ಮತ್ತು ಕಂಟೆಂಟ್ ಮತ್ತು ಸಮುದಾಯ ಮಾರ್ಗಸೂಚಿಗಳಿಗೆ ("ಸಮುದಾಯ ಮಾರ್ಗಸೂಚಿಗಳು") ಒಳಪಟ್ಟಿರಬೇಕು. ಇದರ ಜೊತೆ ಯಾವುದೇ ಲೈವ್‌ಸ್ಟ್ರೀಮ್‌ ತಕ್ಷಣ ತೆಗೆದುಹಾಕಲು ಅಥವಾ ಅಮಾತು ಮಾಡಲು ಮತ್ತು/ಅಥವಾ ಸೂಕ್ತವಾಗಿರುವ ಕ್ರಮಗಳನ್ನು ತೆಗೆದುಕೊಳ್ಳುವ ಹಕ್ಕನ್ನು ನಾವು ಹೊಂದಿರುತ್ತೇವೆ.

ಯಾವುದೇ ಇಂತಹ ತೆಗೆದುಹಾಕುವಿಕೆ/ವಜಾಗೊಳಿಸುವಿಕೆ/ಅಮಾನತು ಕ್ರಮವನ್ನು ನಿಮ್ಮ ವಿರುದ್ಧ ತೆಗೆದುಕೊಂಡಿದ್ದರೆ, ‘ಉಲ್ಲಂಘನೆಗಳು’ ಪುಟದ (ಪ್ಲಾಟ್‌ಫಾರಂನಲ್ಲಿನ ಸಹಾಯ ಮತ್ತು ಬೆಂಬಲ ಟ್ಯಾಬ್‌ನಲ್ಲಿ) ಅಡಿಯಲ್ಲಿ ಆಪ್ ಒಳಗಿನ ಮೇಲ್ಮನವಿ ತಾಂತ್ರಿಕತೆಯ ಮೂಲಕ ಈ ಕ್ರಮದ ವಿರುದ್ಧ ನೀವು ಮೇಲ್ಮನವಿಯನ್ನು ಸಲ್ಲಿಸಬಹುದು ಅಥವಾ support@sharechat.co ಇಮೇಲ್ ವಿಳಾಸಕ್ಕೆ ನಮಗೆ ಬರೆಯಬಹುದು.

ಹೆಚ್ಚಿನ ಉಲ್ಲೇಖಕ್ಕಾಗಿ ಪಾಲಿಸಿ ನಲ್ಲಿ ಲಭ್ಯವಿರುವ ಸಮುದಾಯ ಮಾರ್ಗಸೂಚಿಗಳು ಮತ್ತು ಇತರ ನೀತಿಗಳನ್ನು ದಯವಿಟ್ಟು ಓದಿ.

ನೀವು ಪ್ರಸಾರ ಮಾಡುವ ಲೈವ್‌ಸ್ಟ್ರೀಮ್‌ನಲ್ಲಿ ನಿಮ್ಮ ಹಿಂಬಾಲಕರು ಮತ್ತು ಇತರ ಬಳಕೆದಾರರು ನಿಮ್ಮೊಂದಿಗೆ ಸಂವಹನ ನಡೆಸಬಹುದು ಮತ್ತು ಕಾಮೆಂಟ್ ಮಾಡಬಹುದು. ಕಾಲಕಾಲಕ್ಕೆ ನಾವು ಲೈವ್‌ಸ್ಟ್ರೀಮ್‌ ವೈಶಿಷ್ಟ್ಯದ ಗುಣಲಕ್ಷಣಗಳನ್ನು ಸೇರಿಸಬಹುದು, ತೆಗೆದುಹಾಕಬಹುದು ಅಥವಾ ತಿದ್ದುಪಡಿ ಮಾಡಬಹುದು. ನಮ್ಮ ಪ್ಲಾಟ್‌ಫಾರಂನಲ್ಲಿ ಲೈವ್‌ಸ್ಟ್ರೀಮ್ ಎಂಬುದು ಬೆಳೆಯುತ್ತಿರುವ ವೈಶಿಷ್ಟ್ಯವಾಗಿದೆ ಮತ್ತು ಕಾಲಕಾಲಕ್ಕೆ ಲೈವ್‌ಸ್ಟ್ರೀಮ್‌ನ ಪ್ರಸ್ತುತ ಗುಣಲಕ್ಷಣಗಳನ್ನು ಸೇರಿಸಬಹುದು/ತೆಗೆದುಹಾಕಬಹುದು ಅಥವಾ ತಿದ್ದುಪಡಿ ಮಾಡಬಹುದು. ಮತ್ತು ನಾವು ಈ ಕೆಳಗಿನ ಯಾವುದೇ ಭರವಸೆಗಳನ್ನು ನೀಡುವುದಿಲ್ಲ:

a. ಲೈವ್‌ಸ್ಟ್ರೀಮ್ ವೈಶಿಷ್ಟ್ಯವು ದೋಷಮುಕ್ತವಾಗಿರುತ್ತದೆ ಅಥವಾ ಬಳಕೆಗೆ ಎಂದಿಗೂ ಲಭ್ಯವಿರುತ್ತದೆ, b. ಲೈವ್‌ಸ್ಟ್ರೀಮ್ ವೈಶಿಷ್ಟ್ಯದ ಎಲ್ಲ ಕಾರ್ಯಗಳು ಎಲ್ಲ ಸಮಯದಲ್ಲೂ ಲಭ್ಯವಿರುತ್ತದೆ c. ಲೈವ್‌ಸ್ಟ್ರೀಮ್ ವೈಶಿಷ್ಟ್ಯ ಬಳಸಿ ಇತರ ಬಳಕೆದಾರರು ಪೋಸ್ಟ್‌ ಮಾಡಿದ ಯಾವುದೇ ಕಂಟೆಂಟ್‌ ನಿಖರವಾಗಿರುತ್ತದೆ.

ಕಂಟೆಂಟ್ ಮತ್ತು ಸಮುದಾಯ ಮಾರ್ಗಸೂಚಿಗಳ ಅಡಿಯಲ್ಲಿ ನಿಷೇಧಿಸಿದ ಕಂಟೆಂಟ್ ಅಪ್‌ಲೋಡ್ ಮಾಡಲು ವೈಶಿಷ್ಟ್ಯವನ್ನು ನೀವು ದುರ್ಬಳಕೆ ಮಾಡಿಕೊಳ್ಳುವಂತಿಲ್ಲ. ಅಗತ್ಯ ಹಕ್ಕುಗಳನ್ನು ಹೊಂದಿರುವ ಮತ್ತು ತೃತೀಯ ಪಕ್ಷಗಳ ಹಕ್ಕುಸ್ವಾಮ್ಯ ಅಥವಾ ಯಾವುದೇ ಇತರ ಬೌದ್ಧಿಕ ಸ್ವತ್ತು ಹಕ್ಕುಗಳನ್ನು ಉಲ್ಲಂಘಿಸದ ಕಂಟೆಂಟ್ ಅನ್ನು ಮಾತ್ರ ಲೈವ್‌ಸ್ಟ್ರೀಮ್‌ನಲ್ಲಿ ಹಂಚಿಕೊಳ್ಳುವಂತೆಯೂ ನಾವು ನಿಮ್ಮನ್ನು ಪ್ರೋತ್ಸಾಹಿಸುತ್ತೇವೆ. ತೃತೀಯ ಪಕ್ಷದ ಬೌದ್ಧಿಕ ಸ್ವತ್ತು ಹಕ್ಕುಗಳನ್ನು ಉಲ್ಲಂಘಿಸಬಹುದಾದ ಹಕ್ಕುಸ್ವಾಮ್ಯ ಹೊಂದಿರುವ ಸಂಗೀತವನ್ನು ಒಳಗೊಂಡಿರುವ ಕಂಟೆಂಟ್ ಲೈವ್‌ಸ್ಟ್ರೀಮ್ ಮಾಡುವುದು ಅಥವಾ ಅಪ್‌ಲೋಡ್ ಮಾಡುವುದು ನಮ್ಮ ಕಂಟೆಂಟ್ ಮತ್ತು ಸಮುದಾಯ ಮಾರ್ಗಸೂಚಿಗಳ ಪ್ರಕಾರ ಉಲ್ಲಂಘನೆಯಾಗಿದೆ.

ಪ್ಲಾಟ್‌ಫಾರಂನಲ್ಲಿ ಸುರಕ್ಷತೆ ಮತ್ತು ಭದ್ರತೆಯನ್ನು ಖಚಿತಪಡಿಸಲು ಅಪ್ರಾಪ್ತ ವಯಸ್ಕ ಬಳಕೆದಾರರು ಹೋಸ್ಟ್ ಮಾಡಿದ ಲೈವ್‌ಸ್ಟ್ರೀಮ್‌ಗೆ ಕಾಮೆಂಟ್‌ಗಳನ್ನು ನಾವು ನಿಷ್ಕ್ರಿಯಗೊಳಿಸಬಹುದು.

ಪ್ರಾಯೋಜಿತ/ಪ್ರಚಾರದ ಕಂಟೆಂಟ್:#

ನಮ್ಮ ಸಮುದಾಯ ಮಾರ್ಗಸೂಚಿಗಳು ಮತ್ತು ಇತರ ಅನ್ವಯಿಕ ಕಾನೂನುಗಳ ಜೊತೆಗೆ, ಲೈವ್‌ಸ್ಟ್ರೀಮ್‌ನಲ್ಲಿ ನೀವು ಯಾವುದೇ ಕಂಟೆಂಟ್ ಅನ್ನು ಪ್ರಚಾರ ಮಾಡುತ್ತಿದ್ದರೆ ಅಥವಾ ಪ್ರಾಯೋಜನೆ ಮಾಡುತ್ತಿದ್ದರೆ, ಈ ಕೆಳಗಿನ ಮಾಹಿತಿಯನ್ನು ಅನುಸರಿಸುವುದನ್ನು ದಯವಿಟ್ಟು ಖಚಿತಪಡಿಸಿ:

a. ಅಪ್ಲಿಕೇಶನ್ ಮೂಲಕ ಯಾವುದೇ ಪ್ರಾಯೋಜಿತ/ಪ್ರಚಾರದ ಕಂಟೆಂಟ್‌ ಬಗ್ಗೆ ಬಳಕೆದಾರರಿಗೆ ಸೂಚನೆ ನೀಡುತ್ತೀರಿ. (ಲೈವ್‌ಸ್ಟ್ರೀಮ್‌ನಲ್ಲಿ ಲಭ್ಯವಿರುವ ‘ಪಾವತಿ ಸಹಿತ ಪ್ರಚಾರ’ ಆಯ್ಕೆಯನ್ನು ಆರಿಸಿಕೊಳ್ಳುವ ಮೂಲಕ) b. ಲೈವ್‌ಸ್ಟ್ರೀಮ್‌ನಲ್ಲಿ ಕಂಟೆಂಟ್‌ಗೆ ಸಂಬಂಧಿಸಿದಂತೆ ಯಾವುದೇ ಸುಳ್ಳು/ತಪ್ಪುದಾರಿಗೆಳೆಯುವ/ತಪ್ಪು ಹೇಳಿಕೆಗಳನ್ನು ನೀವು ನೀಡಬಾರದು. c. ಯಾವುದೇ ಅಪಾಯಕರ/ಅಕ್ರಮ ಸರಕುಗಳು ಮತ್ತು/ಅಥವಾ ಸೇವೆಗಳನ್ನು ನೀವು ಪ್ರಚಾರ ಮಾಡಬಾರದು.

ಡಿಜಿಟಲ್ ಮೀಡಿಯಾದಲ್ಲಿ ಇನ್‌ಫ್ಲೂಯೆನ್ಸರ್‌ ಜಾಹೀರಾತಿಗಾಗಿ ASCI ಮಾರ್ಗಸೂಚಿಗಳನ್ನು ನೋಡಿ ಮತ್ತು ಯಾವುದೇ ಪ್ರಾಯೋಜಿತ ಕಂಟೆಂಟ್‌ಗೆ ನಿಮ್ಮ ಕಾನೂನು ಬಾಧ್ಯತೆಗಳನ್ನು ಅರ್ಥ ಮಾಡಿಕೊಳ್ಳಲು ನಿಮ್ಮ ಜಾಹೀರಾತುದಾರರನ್ನು ಸಂಪರ್ಕಿಸಿ.

ವರದಿ ಮಾಡುವ ಕ್ರಮಗಳು:#

ಜವಾಬ್ದಾರಿಯುತ ಬಳಕೆದಾರರಾಗಿ, ನಿಮ್ಮ ಗಮನಕ್ಕೆ ಬಂದ ಮತ್ತು ಅನ್ವಯಿಕ ಕಾನೂನುಗಳು, ಸಮುದಾಯ ಮಾರ್ಗಸೂಚಿಗಳು ಅಥವಾ ಬಳಕೆದಾರರ ನಿಯಮಗಳನ್ನು ಉಲ್ಲಂಘಿಸಿರಬಹುದಾದ ಯಾವುದೇ ಲೈವ್‌ಸ್ಟ್ರೀಮ್ ಅಥವಾ ಲೈವ್‌ಸ್ಟ್ರೀಮ್‌ನಲ್ಲಿನ ಕಾಮೆಂಟ್‌ ಅನ್ನು ದಯವಿಟ್ಟು ಫ್ಲ್ಯಾಗ್‌/ವರದಿ ಮಾಡಿ. ಈ ಕ್ರಮಗಳನ್ನು ತೆಗೆದುಕೊಳ್ಳುವುದರಿಂದ ಪ್ಲಾಟ್‌ಫಾರಂನಲ್ಲಿ ಎಲ್ಲರಿಗೂ ಸುರಕ್ಷಿತ ಮತ್ತು ಉತ್ತಮ ಅನುಭವ ಒದಗಿಸುವುದನ್ನು ಖಚಿತಪಡಿಸುತ್ತದೆ. ನಿಂದನೀಯ ಅಥವಾ ಅವಹೇಳನಕಾರಿ ಲೈವ್‌ಸ್ಟ್ರೀಮ್‌ ಕಾಮೆಂಟ್ ಮತ್ತು/ಅಥವಾ ಲೈವ್‌ಸ್ಟ್ರೀಮ್ ಅನ್ನೇ ವರದಿ ಮಾಡಲು ಆಪ್ ಒಳಗಿನ ವರದಿ ಮಾಡುವಿಕೆ ತಾಂತ್ರಿಕತೆಯನ್ನು ನೀವು ಬಳಸಬಹುದು. ಇಂತಹ ಉಲ್ಲಂಘನೆಗಳನ್ನು ನೀವು support@sharechat.co ಗೆ ಇಮೇಲ್ ಕಳುಹಿಸುವ ಮೂಲಕವೂ ವರದಿ ಮಾಡಬಹುದು.

ಅನ್ವಯಿಕ ಕಾನೂನುಗಳು ಮತ್ತು ನಿಯಮಾವಳಿಗಳಿಗೆ ಬದ್ಧವಾಗಿರುವುದಕ್ಕಾಗಿ ಹಾಗೂ ಘಟನೆ ತನಿಖೆಗಾಗಿ ನಿಮ್ಮ ಲೈವ್‌ಸ್ಟ್ರೀಮ್ ಅನ್ನು ರೆಕಾರ್ಡ್‌ ಮಾಡುತ್ತೇವೆ ಮತ್ತು ಇಪ್ಪತ್ತೊಂದು (21) ದಿನಗಳವರೆಗೆ ಶೇಖರಿಸಿರುತ್ತೇವೆ ಎಂಬುದನ್ನು ದಯವಿಟ್ಟು ಗಮನಿಸಿ. ಲೈವ್‌ಸ್ಟ್ರೀಮ್‌ ಬಗ್ಗೆ ಯಾವುದೇ ವರದಿಗಳು ಇಲ್ಲದಿದ್ದಲ್ಲಿ ಇಪ್ಪತ್ತೊಂದು (21) ದಿನಗಳ ಅವಧಿ ಪೂರ್ಣಗೊಂಡ ನಂತರ ಈ ರೆಕಾರ್ಡಿಂಗ್‌ಗಳನ್ನು ನಾವು ಅಳಿಸಬಹುದು. ಆದಾಗ್ಯೂ, ಕಾನೂನು ಪ್ರಾಧಿಕಾರಗಳು ಮತ್ತು ಕಾನೂನು ಜಾರಿ ತಾಂತ್ರಿಕತೆಗಳೊಂದಿಗೆ ಸಹಕಾರಕ್ಕಾಗಿ ದೀರ್ಘ ಕಾಲದವರೆಗೆ ಇದನ್ನು ನಾವು ಶೇಖರಿಸಿಡಬಹುದು.

ನಮ್ಮ ಕರಾರು ಮತ್ತು ನೀವು ಅಸಮ್ಮತಿ ವ್ಯಕ್ತಪಡಿಸಿದರೆ ಏನಾಗುತ್ತದೆ#

ಎ. ಈ ನಿಯಮಗಳ ಅಡಿಯಲ್ಲಿ ಯಾರು ಹಕ್ಕು ಹೊಂದಿದ್ದಾರೆ#

ಈ ನಿಯಮಗಳ ಅಡಿಯಲ್ಲಿ ಹಕ್ಕುಗಳನ್ನು ನಿಮಗೆ ಮಾತ್ರ ಮಂಜೂರು ಮಾಡಲಾಗಿದೆ ಮತ್ತು ನಮ್ಮ ಸಮ್ಮತಿ ಇಲ್ಲದೇ ಯಾವುದೇ ತೃತೀಯ ಪಕ್ಷಕ್ಕೆ ನಿಯೋಜಿಸುವಂತಿಲ್ಲ. ಆದಾಗ್ಯೂ, ಈ ನಿಯಮಗಳ ಅಡಿಯಲ್ಲಿ ಇತರರಿಗೆ ನಮ್ಮ ಹಕ್ಕುಗಳು ಮತ್ತು ಬಾಧ್ಯತೆಗಳನ್ನು ನಿಯೋಜಿಸಲು ನಮಗೆ ಅನುಮತಿ ಇದೆ. ಉದಾಹರಣೆಗೆ, ಇನ್ನೊಂದು ಕಂಪನಿಯೊಂದಿಗೆ ವಿಲೀನಕ್ಕೆ ನಾವು ಒಳಪಟ್ಟರೆ ಮತ್ತು ಹೊಸ ಕಂಪನಿ ರಚಿಸಿದರೆ ಇದು ಉಂಟಾಗಬಹುದು.

ಬಿ. ವಿವಾದಗಳನ್ನು ನಾವು ಹೇಗೆ ನಿರ್ವಹಿಸುತ್ತೇವೆ#

ಎಲ್ಲ ಪ್ರಕರಣಗಳಲ್ಲಿ, ವಿವಾದಗಳು ಭಾರತೀಯ ಕಾನೂನಿಗೆ ಒಳಪಟ್ಟಿದೆ ಮತ್ತು ಎಲ್ಲ ಇಂತಹ ವಿವಾದಗಳಿಗೆ ಬೆಂಗಳೂರಿನ ನ್ಯಾಯಾಲಯಗಳು ವಿಶೇಷ ನ್ಯಾಯವ್ಯಾಪ್ತಿಯನ್ನು ಹೊಂದಿರುತ್ತವೆ ಎಂಬುದಕ್ಕೆ ನೀವು ಸಮ್ಮತಿಸುತ್ತೀರಿ.

ದೂರು ಪರಿಹಾರ ವ್ಯವಸ್ಥೆ#

ನಮ್ಮ ಬಳಕೆದಾರರ ಗೌಪ್ಯತೆ ಮತ್ತು ಸುರಕ್ಷತೆಗಾಗಿ ಸಂಪೂರ್ಣ ರಕ್ಷಣೆಯನ್ನು ಒದಗಿಸಲು ನಾವು ಬದ್ಧತೆಯಿಂದ ಕೆಲಸ ಮಾಡುತ್ತೇವೆ. ಇದರ ಭಾಗವಾಗಿ ನಾವು ನಮ್ಮ ಬಳಕೆದಾರರನ್ನು ಸುರಕ್ಷಿತವಾಗಿರಿಸಲು ಸರ್ಕಾರಿ ಅಧಿಕಾರಿಗಳೊಂದಿಗೆ ನಿರಂತರವಾಗಿ ಕೆಲಸ ಮಾಡುತ್ತಿದ್ದೇವೆ. ನಾವು ಕುಂದುಕೊರತೆ ಅಧಿಕಾರಿಯನ್ನು ನೇಮಿಸಿದ್ದೇವೆ, ಬಳಕೆದಾರರಿಗೆ ಪ್ಲಾಟ್‌ಫಾರ್ಮ್‌ನಲ್ಲಿ ಅವರ ಅನುಭವದ ಬಗ್ಗೆ ಕಾಳಜಿ ಇದ್ದರೆ ನೇರವಾಗಿ ಸಂಪರ್ಕಿಸಬಹುದು. ಪ್ಲಾಟ್‌ಫಾರ್ಮ್‌ಗೆ ಸಂಬಂಧಿಸಿದಂತೆ ನೀವು ಎತ್ತಿರುವ ಯಾವುದೇ ಕಾಳಜಿಗಳು ಅಥವಾ ದೂರುಗಳನ್ನು ಪರಿಹರಿಸಲು ಸಹಾಯ ಮಾಡಲು ನಾವು ದೃಢವಾದ ಕುಂದುಕೊರತೆ ಪರಿಹಾರ ಕಾರ್ಯವಿಧಾನವನ್ನು ಒಟ್ಟುಗೂಡಿಸಿದ್ದೇವೆ.

ಕುಂದುಕೊರತೆ ಪರಿಹಾರ ಕಾರ್ಯವಿಧಾನಗಳು ಈ ಕೆಳಗಿನಂತಿವೆ:#

  1. ನೀವು ಯೂಸರ್ ಪ್ರೊಫೈಲ್‌ಗಳನ್ನು ವರದಿ ಮಾಡಬಹುದು ಮತ್ತು ನಮ್ಮ ಕಮ್ಯುನಿಟಿ ಮಾರ್ಗಸೂಚಿಗಳನ್ನು ಉಲ್ಲಂಘಿಸುವ ವಿಷಯದ ಕುರಿತು ದೂರುಗಳನ್ನು ನೀಡಬಹುದು. ದೂರನ್ನು ಸಲ್ಲಿಸಬೇಕಾದ ಯೂಸರ್ ಪ್ರೊಫೈಲ್‌ನ ಮುಂದೆ ಲಭ್ಯವಿರುವ ಮೂರು ಚುಕ್ಕೆಗಳ ಮೇಲೆ ಕ್ಲಿಕ್ ಮಾಡುವ ಮೂಲಕ ದೂರು ಸಲ್ಲಿಸಬಹುದು. ನೀವು ಸರಿಯಾದ ಕಾರಣವನ್ನು ಆಯ್ಕೆ ಮಾಡಿದ ನಂತರ ವರದಿ ಆಯ್ಕೆಯನ್ನು ಕ್ಲಿಕ್ ಮಾಡಬಹುದು. ಬಾಣದ ಐಕಾನ್ ಅನ್ನು ಕ್ಲಿಕ್ ಮಾಡುವ ಮೂಲಕ ನೀವು ವೀಡಿಯೋವನ್ನು ವರದಿ ಮಾಡಬಹುದು (ವೀಡಿಯೋದ ಬಲಭಾಗದಲ್ಲಿದೆ). ಕಾಮೆಂಟ್‌ಗಳ ಕುರಿತು ವರದಿ ಮಾಡಲು ಕಾಮೆಂಟ್ ಅನ್ನು ಒತ್ತಿ ಹಿಡಿದುಕೊಳ್ಳಿ. ಪ್ರತಿ ದೂರಿನ ಸ್ಟೇಟಸ್ ಅನ್ನು ಪ್ರೊಫೈಲ್ ಸೆಟ್ಟಿಂಗ್‌ಗಳ ಟ್ಯಾಬ್ ಅಡಿಯಲ್ಲಿ ಲಭ್ಯವಿರುವ ವರದಿಗಳ ಪುಟದಲ್ಲಿ ಪರಿಶೀಲಿಸಬಹುದು. ಪ್ರೊಫೈಲ್ ಸೆಟ್ಟಿಂಗ್‌ಗಳ ಟ್ಯಾಬ್‌ನ ಅಡಿಯಲ್ಲಿ ಲಭ್ಯವಿರುವ ಸಹಾಯ ಮತ್ತು ಬೆಂಬಲ ಆಯ್ಕೆಯ ಮೂಲಕವೂ ನೀವು ಪ್ರಶ್ನೆಯನ್ನು ಕೇಳಬಹುದು.

  2. ನಿಮ್ಮ ವಿರುದ್ಧ ಅಥವಾ ನೀವು ಅಪ್‌ಲೋಡ್ ಮಾಡಿದ ಯಾವುದೇ ಕಂಟೆಂಟ್ ನ ವಿರುದ್ಧ ದೂರು ಇದ್ದರೆ, ಪ್ರೊಫೈಲ್ ಸೆಟ್ಟಿಂಗ್‌ಗಳ ಟ್ಯಾಬ್ ಅಡಿಯಲ್ಲಿ ಲಭ್ಯವಿರುವ ಉಲ್ಲಂಘನೆಗಳ ಪುಟದಲ್ಲಿ ವಿವರಗಳನ್ನು ನೀವು ನೋಡಬಹುದು. ನೀವು ಮೇಲ್ಮನವಿಯನ್ನು ನೋಂದಾಯಿಸಬಹುದು ಮತ್ತು ಉಲ್ಲಂಘನೆಗಳ ಪುಟದಲ್ಲಿ ನಿಮ್ಮ ಮನವಿಯನ್ನು ಸಮರ್ಥಿಸಲು ಕಾಮೆಂಟ್‌ಗಳನ್ನು ಸೇರಿಸಬಹುದು.

  3. https://support.sharechat.com/ ಲಿಂಕ್ ಅನ್ನು ಕ್ಲಿಕ್ ಮಾಡಿ, ನೀವು ಚಾಟ್‌ಬಾಟ್ ಸಿಸ್ಟಮ್ ಮೂಲಕ ನಿಮ್ಮ ದೂರುಗಳನ್ನು ವರದಿ ಮಾಡಬಹುದು.

  4. ನಿಮ್ಮ ಕಾಳಜಿ ಅಥವಾ ದೂರನ್ನು ನೀವು contact@sharechat.co ಮತ್ತು grievance@sharechat.co ಗೆ ಇಮೇಲ್ ಕಳುಹಿಸಬಹುದು.

  5. ನೀವು ಆಟೋ-ಜನರೇಟೆಡ್ ಟಿಕೆಟ್ ಸಂಖ್ಯೆಯನ್ನು ಸ್ವೀಕರಿಸುತ್ತೀರಿ ಮತ್ತು ದೂರು ಅಥವಾ ಕಳವಳದ ಮೇಲೆ ಕ್ರಮಗಳನ್ನು ಪ್ಲಾಟ್‌ಫಾರ್ಮ್ ನೀತಿಗಳು ಮತ್ತು ಸರ್ಕಾರಿ ನಿಯಮಗಳಿಗೆ ಅನುಗುಣವಾಗಿ ತೆಗೆದುಕೊಳ್ಳಲಾಗುತ್ತದೆ.

  6. ತೆಗೆದುಕೊಂಡ ಕ್ರಮಗಳ ವಿವರಗಳನ್ನು https://help.mojapp.in/transparency-report ನಲ್ಲಿ ನಮ್ಮ ಮಾಸಿಕ ಪಾರದರ್ಶಕತೆ ವರದಿಯಲ್ಲಿ ಒದಗಿಸಲಾಗುವುದು.

ಕೆಳಗೆ ಪಟ್ಟಿ ಮಾಡಲಾದ ಯಾವುದೇ ನೀತಿಗಳು ಅಥವಾ ನೀವು ಹೊಂದಿರುವ ಯಾವುದೇ ಇತರ ಕಾಳಜಿಗಳಿಗೆ ಸಂಬಂಧಿಸಿದಂತೆ ನೀವು ಗ್ರೀವನ್ಸ್ ಅಧಿಕಾರಿಯನ್ನು ಸಹ ಸಂಪರ್ಕಿಸಬಹುದು:

A. ಸೇವಾ ನಿಯಮಗಳು
B. ಗೌಪ್ಯತೆ ನೀತಿ
C. ನಿಮ್ಮ ಅಕೌಂಟ್ ಕುರಿತು ಪ್ರಶ್ನೆಗಳು

ಗ್ರಾಹಕರ ಡೇಟಾ ಸುರಕ್ಷತೆ, ಗೌಪ್ಯತೆ ಮತ್ತು ಪ್ಲಾಟ್‌ಫಾರ್ಮ್ ಬಳಕೆಯ ಸಮಸ್ಯೆಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಲು ನಾವು ಗ್ರೀವನ್ಸ್ ಅಧಿಕಾರಿಯನ್ನು ನೇಮಿಸಿದ್ದೇವೆ. ನೋಂದಣಿಯಾದ 15 (ಹದಿನೈದು) ದಿನಗಳಲ್ಲಿ ನಿಮ್ಮ ಸಮಸ್ಯೆಗಳನ್ನು ನಾವು ಪರಿಹರಿಸುತ್ತೇವೆ. ನೀವು ನಮ್ಮನ್ನು ಸಂಪರ್ಕಿಸಲು ಮತ್ತು ನಿಮ್ಮ ಸಮಸ್ಯೆಗಳನ್ನು ಪರಿಹರಿಸಲು ನಾವು ವ್ಯವಸ್ಥೆಯನ್ನು ಹೊಂದಿಸಿದ್ದೇವೆ.

ನೀವು ಈ ಕೆಳಗಿನ ಯಾವುದಾದರೂ ಗ್ರೀವನ್ಸ್ ಅಧಿಕಾರಿಯನ್ನು ಸಂಪರ್ಕಿಸಬಹುದು:

Ms. ಹರ್ಲೀನ್ ಸೇಥಿ
ವಿಳಾಸ: ಮೊಹಲ್ಲಾ ಟೆಕ್ ಪ್ರೈವೆಟ್ ಲಿಮಿಟೆಡ್,
ನಾರ್ತ್ ಟವರ್ ಸ್ಮಾರ್ಟ್‌ವರ್ಕ್ಸ್, ವೈಷ್ಣವಿ ಟೆಕ್ ಪಾರ್ಕ್,
ಸರ್ವೆ ನಂ. 16/1 & ನಂ. 17/2 ಅಂಬಲಿಪುರ ಗ್ರಾಮ, ವರ್ತೂರು ಹೋಬಳಿ,
ಬೆಂಗಳೂರು ನಗರ, ಕರ್ನಾಟಕ - 560103
ಕಚೇರಿ ಸಮಯ: 10:00 A.M. to 1:00 P.M.
ಇಮೇಲ್: grievance@sharechat.co
ಗಮನಿಸಿ- ತ್ವರಿತ ಪ್ರಕ್ರಿಯೆ ಮತ್ತು ಪರಿಹಾರಕ್ಕಾಗಿ ಎಲ್ಲಾ ಬಳಕೆದಾರ ಸಂಬಂಧಿತ ದೂರುಗಳನ್ನು ಮೇಲೆ ತಿಳಿಸಲಾದ ಇಮೇಲ್ ಐಡಿಗೆ ಕಳುಹಿಸಿ.

ನೋಡಲ್ ಸಂಪರ್ಕ ವ್ಯಕ್ತಿ - Ms. ಹರ್ಲೀನ್ ಸೇಥಿ
ಇಮೇಲ್: nodalofficer@sharechat.co
ಗಮನಿಸಿ - ಈ ಇಮೇಲ್ ಪೊಲೀಸ್ ಮತ್ತು ತನಿಖಾ ಬಳಕೆಗೆ ಮಾತ್ರ. ಬಳಕೆದಾರರ ಸಂಬಂಧಿತ ಸಮಸ್ಯೆಗಳಿಗೆ ಈ ಇಮೇಲ್ ಐಡಿ ಬಳಸಬೇಡಿ. ಎಲ್ಲಾ ಬಳಕೆದಾರ ಸಂಬಂಧಿತ ದೂರುಗಳಿಗಾಗಿ grievance@sharechat.co ನಲ್ಲಿ ನಮ್ಮನ್ನು ಸಂಪರ್ಕಿಸಿ.

ಬಾಧ್ಯತೆಯ ಮಿತಿ#

ಪ್ಲಾಟ್‌ಫಾರಂನ ಯಾವುದೇ ಬಳಕೆದಾರರ ಕ್ರಮಗಳಿಂದಾಗಿ ಯಾವುದೇ ವಾರಂಟಿ ಅಥವಾ ಗ್ಯಾರಂಟಿಯ ಉಲ್ಲಂಘನೆ ಅಥವಾ ಯಾವುದೇ ಮಾಹಿತಿಯ ಯಾವುದೇ ನಿಖರತೆ ಇಲ್ಲದಿರುವಿಕೆ ಅಥವಾ ಅಪೂರ್ಣತೆಯಿಂದಾಗಿ ನೇರವಾಗಿ ಅಥವಾ ಪರೋಕ್ಷವಾಗಿ ಉಂಟಾಗುವ ಯಾವುದೇ ನಷ್ಟ ಅಥವಾ ಹಾನಿಗೆ ನಾವು ಜವಾಬ್ದಾರಿಯನ್ನು ಭಾವಿಸುವುದಿಲ್ಲ.

ಪ್ಲಾಟ್‌ಫಾರಂ ಮತ್ತು ಸೇವೆಗಳನ್ನು "ಹೇಗಿದೆಯೋ ಹಾಗೆ" ಮತ್ತು "ಲಭ್ಯವಿರುವಂತೆ" ಆಧಾರದಲ್ಲಿ ಒದಗಿಸಲಾಗುತ್ತದೆ ಮತ್ತು ಯಾವುದೇ ಪ್ರತಿನಿಧಿತ್ವ ಅಥವಾ ವಾರಂಟಿಗಳು, ಲಿಖಿತವಾಗಿ ಅಭಿವ್ತಕ್ತಿಪಡಿಸದ ಹೊರತು ಅಭಿವ್ಯಕ್ತಿಪೂರ್ವಕ ಅಥವಾ ಭಾವಿತರಹಿತವಾಗಿ ಒದಗಿಸಲಾಗುತ್ತದೆ. ಸೇವೆಗಳ ಅಥವಾ ಪ್ಲಾಟ್‌ಫಾರಂನ ಗುಣಮಟ್ಟ, ಅಡ್ಡಿಪಡಿಸದ, ಸಕಾಲಿಕ, ಸುರಕ್ಷಿತ ಅಥವಾ ದೋಷರಹಿತ ಅನುಬಂಧ, ಯಾವುದೇ ಸಾಧನದಲ್ಲಿ ನಿರಂತರ ಅನುಕೂಲ ಅಥವಾ ಯಾವುದೇ ದೋಷಗಳ ಸರಿಪಡಿಸುವಿಕೆಯನ್ನು ನಾವು ಖಚಿತಪಡಿಸುವುದಿಲ್ಲ.

ಯಾವುದೇ ಸಂದರ್ಭದಲ್ಲೂ, ನಾವು ಅಥವಾ ನಮ್ಮ ಯಾವುದೇ ಅಫಿಲಿಯೇಟ್‌ಗಳು, ಉತ್ತರಾಧಿಕಾರಿಗಳು ಮತ್ತು ನಿಯೋಜಿತರು ಮತ್ತು ಅವರ ಪ್ರತಿಯೊಬ್ಬ ಹೂಡಿಕೆದಾರರು, ನಿರ್ದೇಶಕರು, ಅಧಿಕಾರಿಗಳು, ಏಜೆಂಟರು, ಸೇವೆ ಪೂರೈಕೆದಾರರು ಮತ್ತು ಪೂರೈಕೆದಾರರು ಯಾವುದೇ ವಿಶೇಷ, ಘಟನಾತ್ಮಕ, ಶಿಕ್ಷಾತ್ಮಕ, ನೇರ, ಪರೋಕ್ಷ ಅಥವಾ ಸನ್ನಿವೇಶಾತ್ಮಕ ಹಾನಿಯನ್ನು ಇನ್ನೊಬ್ಬ ಬಳಕೆದಾರರ ನೀತಿ ಉಲ್ಲಂಘನೆಯ ಪರಿಣಾಮವಾಗಿ ಅಥವಾ ಯಾವುದೇ ಸೇವೆಗಳು ಅಥವಾ ಪ್ಲಾಟ್‌ಫಾರಂ ಬಳಕೆ ಅಥವಾ ಅವಲಂಬನೆಯ ಪರಿಣಾಮವಾಗಿ ಉಂಟಾಗುವಿಕೆಗೆ ಯಾವುದೇ ಸಂದರ್ಭದಲ್ಲೂ ಬದ್ಧವಾಗಿರುವುದಿಲ್ಲ.

ಇದರಲ್ಲಿನ ಯಾವುದೇ ಹೊರಗಿಡುವಿಕೆಯು ಯಾವುದೇ ಕಾರಣಕ್ಕೆ ಅಮಾನ್ಯವಾಗಿರುತ್ತದೆ ಮತ್ತು ನಾವು ಅಥವಾ ನಮ್ಮ ಯಾವುದೇ ಅಫಿಲಿಯೇಟ್ ಸಮಸ್ಥೆಗಳು, ಅಧಿಕಾರಿಗಳು, ನಿರ್ದೇಶಕರು ಅಥವಾ ಉದ್ಯೋಗಿಗಳು ಹಾನಿ ಅಥವಾ ನಷ್ಟಕ್ಕೆ ಹೊಣೆಗಾರರಾಗಿರುವುದಿಲ್ಲ ಹಾಗೂ ಕ್ಲೇಮ್‌ನ ನಂತರದ ದಿನಾಂಕದಿಂದ ತಿಂಗಳಲ್ಲಿ ಪ್ಲಾಟ್‌ಫಾರಂ ಅಥವಾ ಸೇವೆಗಳನ್ನು ನಾವು ಬಳಸುವುದಕ್ಕೆ ಮಾಡಿದ ಶುಲ್ಕಗಳು ಅಥವಾ ಮೊತ್ತವು ಮೀರುವುದಕ್ಕೆ ಯಾವುದೇ ಇಂತಹ ಬಾಧ್ಯತೆಯ ಸೀಮಿತಗೊಂಡಿರುತ್ತದೆ.

ಹಕ್ಕುರಕ್ಷಣೆ#

ನಮ್ಮನ್ನು ಮತ್ತು ನಮ್ಮ ಅಂಗಸಂಸ್ಥೆಗಳು, ಅಫಿಲಿಯೇಟ್‌ಗಳು ಮತ್ತು ಏಜೆಂಟರುಗಳನ್ನು ಮತ್ತು ಅವರ ಸಂಬಂಧಿತ ಅಧಿಕಾರಿಗಳು, ನಿರ್ದೇಶಕರು, ಉದ್ಯೋಗಿಗಳು, ಉತ್ತರಾಧಿಕಾರಿಗಳು ಮತ್ತು ನಿಯೋಜಿತರನ್ನು ಈ ಕೆಳಗಿನವುಗಳಿಮದ ಉಂಟಾಗುವ ಯಾವುದೇ ಕ್ಲೇಮ್‌, ವಿಚಾರಣೆ, ನಷ್ಟ, ಹಾನಿ, ಬಾಧ್ಯತೆ, ವೆಚ್ಚ, ಬೇಡಿಕೆ ಅಥವಾ ವೆಚ್ಚದ ವಿರುದ್ಧ ಹಕ್ಕು ರಕ್ಷಣೆ, ಸಮರ್ಥನೆ ಮತ್ತು ಅಪಾರಹಿತರನ್ನಾಗಿಸಲು ನೀವು ಸಮರ್ಥಿಸುತ್ತೀರಿ:

  1. ಪ್ಲಾಟ್‌ಫಾರಂ ಮತ್ತು ಸೇವೆಗಳಿಗೆ ನಿಮ್ಮ ಪ್ರವೇಶಾವಕಾಶ ಅಥವಾ ಬಳಕೆ;
  2. ಈ ಕರಾರು ಅಡಿಯಲ್ಲಿ ನಿಮ್ಮ ಬಾಧ್ಯತೆಗಳನ್ನು ನೀವು ಉಲ್ಲಂಘಿಸಿರುವುದು;
  3. ಬೌದ್ಧಿಕ ಸ್ವತ್ತಿನ ಯಾವುದೇ ಉಲ್ಲಂಘನೆ ಅಥವಾ ಯಾವುದೇ ಗೌಪ್ಯತೆ ಅಥವಾ ಗ್ರಾಹಕ ರಕ್ಷಣೆ ಹಕ್ಕು ಸೇರಿದಂತೆ ಯಾವುದೇ ತೃತೀಯ ಪಕ್ಷದ ಹಕ್ಕುಗಳನ್ನು ನೀವು ಉಲ್ಲಂಘಿಸುವುದು;
  4. ಯಾವುದೇ ಕಾನೂನು ಅಥವಾ ಕರಾರು ಬಾಧ್ಯತೆ ಉಲ್ಲಂಘಿಸುವುದು ಮತ್ತು ಇಂತಹ ಉಲ್ಲಂಘನೆಗೆ ಸಂಬಂಧಿಸಿದಂತೆ ಯಾವುದೇ ಕ್ಲೇಮ್‌ಗಳು, ಬೇಡಿಕೆಗಳು, ಸೂಚನೆಗಳನ್ನು ಉಲ್ಲಂಘಿಸುವುದು;
  5. ನಿಮ್ಮ ನಿರ್ಲಕ್ಷ್ಯ ಅಥವಾ ಉದ್ದೇಪೂರ್ವಕ ದುರ್ವರ್ತನೆ. ಈ ಬಾಧ್ಯತೆಯು ನಮ್ಮ ನಿಯಮಗಳ ವಜಾಗೊಳಿಸುವಿಕೆಗೆ ಒಳಪಡುತ್ತದೆ

ಅನಪೇಕ್ಷಿತ ಸಾಮಗ್ರಿ#

ನಾವು ಎಂದಿಗೂ ಪ್ರತಿಕ್ರಿಯೆ ಅಥವಾ ಇತರ ಸಲಹೆಗಳನ್ನು ಮೆಚ್ಚುತ್ತೇವೆ. ಅವುಗಳಿಗಾಗಿ ನಿಮಗೆ ಯಾವುದೇ ಪರಿಹಾರ ಒದಗಿಸುವಿಕೆಯ ಬಾಧ್ಯತೆ ಅಥವಾ ಯಾವುದೇ ನಿರ್ಬಂಧಗಳನ್ನು ಹೊರತುಪಡಿಸಿ ಅದನ್ನು ನಾವು ಬಳಸಬಹುದು ಮತ್ತು ಅವುಗಳನ್ನು ಗೌಪ್ಯವಾಗಿಡುವ ಯಾವುದೇ ಬಾಧ್ಯತೆಗೆ ಒಳಪಟ್ಟಿಲ್ಲ.

ಸಾಮಾನ್ಯ#

  1. ಅಪ್ಲಿಕೇಶನ್‌ನ ಯಾವುದೇ ಇತರ ಪೂರೈಕೆದಾರರಿಂದ ಒದಗಿಸಲಾದ ಈ ಅಪ್ಲಿಕೇಶನ್‌ನ ಹಿಂದಿನ ಆವೃತ್ತಿಗಳ ನಿಯಮಗಳು ಮತ್ತು ಷರತ್ತುಗಳ ಅಡಿಯಲ್ಲಿ ಹಕ್ಕುಗಳು ಮತ್ತು ಕಟ್ಟುಪಾಡುಗಳನ್ನು ಮೊಹಲ್ಲಾ ಗ್ರೂಪ್‌ಗೆ ನಿಯೋಜಿಸಲಾಗಿದೆ.ಈ ನಿಯಮಗಳ ಯಾವುದೇ ಅಂಶಗವು ಜಾರಿಗೊಳಿಸಲಾಗದಂತಾದರೆ, ಉಳಿದವು ಜಾರಿಯಲ್ಲಿರುತ್ತದೆ.
  2. ನಮ್ಮ ನಿಯಮಗಳಿಗೆ ಯಾವುದೇ ತಿದ್ದುಪಡಿ ಅಥವಾ ವಿನಾಯಿತಿಯು ಲಿಖಿತವಾಗಿರಬೇಕು ಮತ್ತು ನಾವು ಸಹಿ ಮಾಡಿರಬೇಕು.
  3. ಯಾವುದೇ ಅಕ್ರಮ ಅಥವಾ ಅನುಮತಿಸದ ಕ್ರಮಗಳನ್ನು ಸೂಕ್ತ ಕಾನೂನು ಜಾರಿ ಪ್ರಾಧಿಕಾರಗಳಿಗೆ ವರದಿ ಮಾಡುವುದು ಅಥವಾ ನಿಮ್ಮ ಪ್ರೊಫೈಲ್ ಅನ್ನು ತಡೆಹಿಡಿಯುವುದು ಅಥವಾ ಅಮಾನತು ಮಾಡುವುದು ಸೇರಿದಂತೆ ಈ ನಿಯಮಗಳ ಯಾವುದೇ ಅಂಶವನ್ನು ಜಾರಿಗೊಳಿಸಲು ನಾವು ವಿಫಲವಾದರೆ, ನಮ್ಮ ಹಕ್ಕುಗಳನ್ನು ಜಾರಿಗೊಳಿಸುವಲ್ಲಿನ ಅಂತಹ ವೈಫಲ್ಯವು ನಮ್ಮಿಂದ ಒದಗಿಸಿದ ವಿನಾಯಿತಿಯಾಗಿರುವುದಿಲ್ಲ.
  4. ನಿಮಗೆ ಅಭಿವ್ಯಕ್ತಿಪೂರ್ವಕವಾಗಿ ಮಂಜೂರು ಮಾಡದ ಎಲ್ಲ ಹಕ್ಕುಗಳನ್ನು ನಾವು ಕಾಯ್ದಿರಿಸಿದ್ದೇವೆ.