Skip to main content

ರೆಫರಲ್ ಪ್ರೋಗ್ರಾಮ್‌ ನಿಯಮ ಮತ್ತು ಷರತ್ತುಗಳು

Last updated: 12th March 2021

ಮೋಜ್‌ಗೆ ("ಪ್ಲಾಟ್‌ಫಾರಂ") ಸೇರಲು ನಿಮ್ಮ ಸ್ನೇಹಿತರು, ಸಹೋದ್ಯೋಗಿಗಳು ಮತ್ತು ಕುಟುಂಬಕ್ಕೆ ("ರೆಫರ್ ಮಾಡಲ್ಪಟ್ಟವರು", "ಭಾಗಿದಾರರು") ರೆಫರ್ ಮಾಡುವುದು ಅಥವಾ ಶಿಫಾರಸು ಮಾಡುವುದಕ್ಕೆ ನಿಮಗೆ ("ನೀವು", "ರೆಫರ್ ಮಾಡಿದವರು") ಪುರಸ್ಕರಿಸುವ ಉದ್ದೇಶಕ್ಕೆ, ಮೊಹಲ್ಲಾ ಟೆಕ್ ಪ್ರೈವೇಟ್ ಲಿಮಿಟೆಡ್‌ ("ನಾವು", "ಎಂಟಿಪಿಎಲ್‌", "ನಮ್ಮ") ನಿಂದ ಮೋಜ್‌ ರೆಫರಲ್ ಪ್ರೋಗ್ರಾಮ್ ("ಪ್ರೋಗ್ರಾಮ್") ಅನ್ನು ರಚಿಸಲಾಗಿದೆ.

ಈ ಪ್ರೋಗ್ರಾಮ್ ನಿಯಮ ಮತ್ತು ಷರತ್ತುಗಳು ("ನಿಯಮಗಳು") ನಿಮ್ಮ ಮತ್ತು ಎಂಟಿಪಿಎಲ್ ಮಧ್ಯದ ಕರಾರು ಆಗಿದೆ ಮತ್ತು ಪ್ರೋಗ್ರಾಮ್‌ ಒದಗಿಸುವ ಯಾವುದೇ ಮತ್ತು ಎಲ್ಲದರಲ್ಲಿ ನಿಮ್ಮ ಭಾಗವಹಿಸುವಿಕೆಯನ್ನು ನಿರೂಪಿಸುತ್ತದೆ. ಪ್ರೋಗ್ರಾಮ್‌ನಲ್ಲಿ ಭಾಗವಹಿಸುವ ಮೂಲಕ, ಪ್ಲಾಟ್‌ಫಾರಂ ನಿಯಮ ಮತ್ತು ಷರತ್ತುಗಳು ಹಾಗೂ ಗೌಪ್ಯತೆ ನೀತಿಗೆ ಸಮ್ಮತಿಸುತ್ತೀರಿ. ಈ ಪ್ರೋಗ್ರಾಮ್ ನಿಯಮ ಮತ್ತು ಷರತ್ತುಗಳಿಗೆ ಸಂಪೂರ್ಣವಾಗಿ ಸಮ್ಮತಿಸದಿದ್ದರೆ, ಪ್ರೋಗ್ರಾಮ್‌ನಲ್ಲಿ ಭಾಗವಹಿಸಲು ನಿಮಗೆ ಅಧಿಕಾರ ಇರುವುದಿಲ್ಲ. ನೋಟಿಸ್ ಇಲ್ಲದೇ ಪ್ರೋಗ್ರಾಮ್‌ನ ಯಾವುದೇ ಅಂಶ ಅಥವಾ ಇಡೀ ಪ್ರೋಗ್ರಾಮ್‌ ಅನ್ನು ಸ್ವಂತ ವಿವೇಚನೆಗೆ ಒಳಪಟ್ಟು ಬದಲಾವಣೆ, ರದ್ದು, ಅಮಾನತು ಅಥವಾ ತಿದ್ದುಪಡಿ ಮಾಡುವ ಹಕ್ಕನ್ನು ಎಂಟಿಪಿಎಲ್ ಕಾಯ್ದಿರಿಸಿದೆ. ಪ್ರೋಗ್ರಾಮ್‌ನಲ್ಲಿ ಭಾಗವಹಿಸುವುದರಿಂದ ಯಾವುದೇ ಸಮಯದಲ್ಲಿ ಯಾವುದೇ ಬಳಕೆದಾರರು ಅಥವಾ ಸಂಭಾವ್ಯ ಬಳಕೆದಾರರನ್ನು ಅನರ್ಹಗೊಳಿಸುವ ಹಕ್ಕನ್ನು ಎಂಟಿಪಿಎಲ್ ಕಾಯ್ದಿರಿಸಿದೆ.

ಅರ್ಹತೆ:#

  • ಪ್ರೋಗ್ರಾಮ್‌ನಲ್ಲಿ ಭಾಗವಹಿಸಲು ಅರ್ಹತೆ ಹೊಂದಿರಲು, ರೆಫರ್ ಮಾಡುವವರು ಮತ್ತು ರೆಫರ್ ಮಾಡಲ್ಪಡುವವರು ಪ್ಲಾಟ್‌ಫಾರಂನಲ್ಲಿ ನೋಂದಾಯಿತ ಬಳಕೆದಾರರಾಗಿರಬೇಕು.
  • ಪ್ಲಾಟ್‌ಫಾರಂನ ಆಪ್‌ ಒಳಗಿನ ಬ್ಯಾನರ್‌ನಲ್ಲಿ ಸಂವಹನ ಸ್ವೀಕರಿಸುವ ಪ್ಲಾಟ್‌ಫಾರಂನ ನೋಂದಾಯಿತ ಬಳಕೆದಾರರು ಮಾತ್ರ ಪ್ರೋಗ್ರಾಮ್‌ನಲ್ಲಿ ಭಾಗವಹಿಸಬಹುದು.

ಅರ್ಹ ರೆಫರಲ್:#

"ಅರ್ಹ ರೆಫರಲ್" ಎಂದರೆ ಈ ಮುಂದಿನ ಎಲ್ಲ ಷರತ್ತುಗಳನ್ನು ಪೂರೈಸುವುದು:

  • ರೆಫರ್ ಮಾಡಿದವರು ಕಳುಹಿಸಿದ ರೆಫರಲ್ ಲಿಂಕ್ ಬಳಸಿ ರೆಫರ್ ಪಡೆದವರು ಪ್ಲಾಟ್‌ಫಾರಂಗೆ ಸೇರುತ್ತಾರೆ.
  • ರೆಫರ್ ಮಾಡಿದವರು ಯಾವುದೇ ಇತರ ವಿಧಾನವನ್ನು ಬಳಸಿ ಪ್ಲಾಟ್‌ಫಾರಂಗೆ ಸೇರಿದರೆ, ನೋಂದಣಿಯು ಅರ್ಹ ರೆಫರಲ್‌ ಎಂದು ಪರಿಗಣಿಸಲಾಗುವುದಿಲ್ಲ ಮತ್ತು ರೆಫರ್ ಮಾಡಿದವರು ಯಾವುದೇ ರಿವಾರ್ಡ್‌ಗೆ ಅರ್ಹರಾಗಿರುವುದಿಲ್ಲ;
  • ರೆಫರ್ ಪಡೆದವರು ಈ ಹಿಂದೆ ಪ್ಲಾಟ್‌ಫಾರಂನ ನೋಂದಾಯಿತ ಬಳಕೆದಾರರಾಗಿರಬಾರದು;
  • ರೆಫರ್‌ ಪಡೆದ ಪ್ರತಿಯೊಬ್ಬರು ಕೇವಲ ಒಂದು ಅರ್ಹ ರೆಫರಲ್ ಅನ್ನು, ಪ್ರತಿ ರೆಫರ್ ಮಾಡುವವರಿಗೆ ಗರಿಷ್ಠ 10 ಅರ್ಹ ರೆಫರಲ್‌ಗಳವರೆಗೆ ಗಳಿಸಬಹುದು. ಯಾವುದೇ ಹೆಚ್ಚುವರಿ ಅಥವಾ ನಂತರ ರೆಫರ್‌ ಪಡೆದವರನ್ನು ಅರ್ಹ ರೆಫರಲ್ ಎಂದು ಪರಿಗಣಿಸಲಾಗದು ಮತ್ತು ಇದೇ ರೀತಿ ಅವರು ರಿವಾರ್ಡ್‌ಗಳಿಗೆ ಅರ್ಹವಾಗಿರುವುದಿಲ್ಲ.

ರಿವಾರ್ಡ್‌ಗಳು:#

  • ರೆಫರಲ್ ಲಿಂಕ್ ಬಳಸಿ ರೆಫರ್ ಮಾಡಲ್ಪಟ್ಟವರು ಪ್ಲಾಟ್‌ಫಾರಂಗೆ ಸೇರಿದಾಗ ಪ್ರತಿ ಅರ್ಹ ರೆಫರಲ್‌ಗೆ ರೂ. __ (ಭಾರತೀಯ ರೂಪಾಯಿ __) ವರೆಗೆ ರಿವಾರ್ಡ್‌ಗೆ ರೆಫರ್ ಮಾಡಿದವರು ಅರ್ಹರಾಗುತ್ತಾರೆ. ನಿಯಮಗಳಿಗೆ ಒಳಪಟ್ಟ ಮತ್ತು ಅದಕ್ಕೆ ಅನುಗುಣವಾಗಿ ರಿವಾರ್ಡ್ ಅನ್ನು ರೆಫರ್ ಮಾಡಿದವರಿಗೆ ಒದಗಿಸಲಾಗುತ್ತದೆ. ರೆಫರ್ ಮಾಡಿದವರು ಪ್ಲಾಟ್‌ಫಾರಂನಲ್ಲಿ ಹಂಚಿಕೊಂಡ ರೆಫರ್ ಮಾಡಿದವರ ಖಾತೆಗೆ ರಿವಾರ್ಡ್ ಅನ್ನು ಕ್ರೆಡಿಟ್ ಮಾಡಲಾಗುತ್ತದೆ.
  • ರಿವಾರ್ಡ್‌ಗಳು ಪರಿಶೀಲನೆಗೆ ಒಳಪಟ್ಟಿರುತ್ತವೆ. ತನಿಖೆಯ ಉದ್ದೇಶಕ್ಕೆ ರಿವಾರ್ಡ್ ಅನ್ನು ಎಂಟಿಪಿಎಲ್‌ ವಿಳಂಬ ಮಾಡಬಹುದು. ಮೋಸ, ಅನುಮಾನಾಸ್ಪದ, ಈ ನಿಯಮಗಳ ಉಲ್ಲಂಘನೆ ಎಂದು ಅಥವಾ ಎಂಟಿಪಿಎಲ್‌, ಅದರ ಅಂಗಸಂಸ್ಥೆಗಳು, ಸಹ ಸಂಸ್ಥೆಗಳು ಅಥವಾ ಯಾವುದೇ ತನ್ನ ಸಂಬಂಧಿಸಿದ ಅಧಿಕಾರಿಗಳು, ನಿರ್ದೇಶಕರು, ಉದ್ಯೋಗಿಗಳು, ಪ್ರತಿನಿಧಿಗಳು ಮತ್ತು ಏಜೆಂಟರ ಸಂಭಾವ್ಯ ಬಾಧ್ಯತೆಯನ್ನು ಹೊಂದಿದೆ ಎಂದು ಭಾವಿಸಿದರೆ ತನ್ನ ಸ್ವಂತ ವಿವೇಚನೆಗೆ ಒಳಪಟ್ಟು ಭಾವಿಸಿದರೆ ಯಾವುದೇ ವಹಿವಾಟನ್ನು ಪರಿಶೀಲಿಸಲು ಮತ್ತು ಪ್ರಕ್ರಿಯೆಗೊಳಿಸಲು ಎಂಟಿಪಿಎಲ್ ನಿರಾಕರಿಸಬಹುದು. ಅರ್ಹ ರೆಫರಲ್ ಅಥವಾ ರಿವಾರ್ಡ್‌ ಎಂಬುದನ್ನು ಪರಿಶೀಲಿಸುವ ನಿರ್ಧಾರವೂ ಸೇರಿದಂತೆ ಎಲ್ಲವೂ ಎಂಟಿಪಿಎಲ್‌ದ್ದೇ ಅಂತಿಮ ನಿರ್ಧಾರವಾಗಿರುತ್ತದೆ.

ಡೇಟಾ ಗೌಪ್ಯತೆ:#

  • ಪ್ರೋಗ್ರಾಮ್ ಅಳವಡಿಸುವಿಕೆ ಮತ್ತು ರೆಫರ್ ಮಾಡಿದವರ ಗುರುತು ಪರಿಶೀಲನೆಗೆ ಮತ್ತು ರೆಫರ್ ಮಾಡಿದವರಿಗೆ ರಿವಾರ್ಡ್‌ಗಳನ್ನು ಕ್ರೆಡಿಟ್ ಮಾಡುವುದಕ್ಕೆ ಸೇರಿದಂತೆ, ಹೆಸರು, ಅಂಚೆ ವಿಳಾಸ, ಬ್ಯಾಂಕ್‌ ಖಾತೆ ಮತ್ತು/ಅಥವಾ ಡೆಬಿಟ್‌/ಕ್ರೆಡಿಟ್‌ ಕಾರ್ಡ್‌ ಮತ್ತು/ಅಥವಾ ಪೇಟಿಎಮ್ ವಿವರಗಳು, ಫೋನ್ ಸಂಖ್ಯೆ ಮತ್ತು ಇಮೇಲ್‌ ವಿಳಾಸ (ಲಭ್ಯವಿದ್ದರೆ)(ಒಟ್ಟಾರೆಯಾಗಿ "ಬಳಕೆದಾರರ ಡೇಟಾ") ಸೇರಿದಂತೆ, ಆದರೆ ಇದಕ್ಕೆ ಸೀಮಿತವಾಗಿಲ್ಲದಂತೆ ಪ್ರೋಗ್ರಾಮ್‌ ವೇಳೆ ಒದಗಿಸಿದ ಮಾಹಿತಿಯನ್ನು ಎಂಟಿಪಿಎಲ್‌ ಸಂಗ್ರಹಿಸಬಹುದು, ಶೇಖರಿಸಬಹುದು, ಹಂಚಿಕೊಳ್ಳಬಹುದು ಮತ್ತು ಇತರ ಬಳಕೆಯನ್ನು ಮಾಡಬಹುದು ಎಂದು ರೆಫರ್ ಮಾಡಿದವರು ಸಮ್ಮತಿಸುತ್ತಾರೆ.
  • ರೆಫರ್ ಮಾಡಿದವರಿಗೆ ರಿವಾರ್ಡ್ ವರ್ಗಾವಣೆ ಮಾಡಲು ತನ್ನ ಬ್ಯಾಂಕಿಂಗ್ ಪಾರ್ಟ್ನರ್‌ ಜೊತೆಗೆ ಬಳಕೆದಾರರ ಡೇಟಾವನ್ನು ಎಂಟಿಪಿಎಲ್‌ ಹಂಚಿಕೊಳ್ಳಬಹುದು. ಇಲ್ಲಿ ವಿವರಿಸಿರುವುದನ್ನು ಹೊರತುಪಡಿಸಿ, ಬಳಕೆದಾರರ ಡೇಟಾವನ್ನು ಎಂಟಿಪಿಎಲ್‌ ಬಳಕೆ ಮಾಡುವಿಕೆಯು ಗೌಪ್ಯತೆ ನೀತಿಗೆ ಅನುಗುಣವಾಗಿರುತ್ತದೆ. .

ಬಾಧ್ಯತೆ:#

ಪ್ರೋಗ್ರಾಮ್‌ನಲ್ಲಿ ಭಾಗವಹಿಸುವ ಮೂಲಕ, ರೆಫರ್ ಮಾಡುವವರು ಸಮ್ಮತಿಸುವುದೇನೆಂದರೆ:

  • ಎಂಟಿಪಿಎಲ್‌ ನಿರ್ಧಾರಗಳು, ಈ ನಿಯಮಗಳು ಮತ್ತು ಎಂಟಿಪಿಎಲ್‌ ಗೌಪ್ಯತೆ ನೀತಿಗೆ ಬದ್ಧವಾಗುವುದು;
  • ಎಂಟಿಪಿಎಲ್‌, ಅದರ ಅಂಗಸಂಸ್ಥೆಗಳನ್ನು ಅವರ ಸಂಬಂಧಿಸಿದ ಉದ್ಯೋಗಿಗಳು, ನಿರ್ದೇಶಕರು, ಅಧಿಕಾರಿಗಳು, ಲೈಸೆನ್ಸ್‌ ಪಡೆದವರು, ಲೈಸೆನ್ಸ್‌ ನೀಡಿದವರು, ಷೇರುದಾರರು, ಅಟಾರ್ನಿಗಳು ಮತ್ತು ಏಜೆಂಟ್‌ಗಳನ್ನು ಪ್ರೋಗ್ರಾಮ್‌ ಉತ್ಪಾದನೆ, ಕಾರ್ಯನಿರ್ವಹಣೆ ಅಥವಾ ಆಡಳಿತಕ್ಕೆ ಸಂಬಂಧಿಸಿದಂತೆ ಅವರಿಗೆ ಸಂಬಂಧಿಸಿದ ಜಾಹೀರಾತು ಮತ್ತು ಪ್ರಚಾರ ಸಂಸ್ಥೆಗಳು ಮತ್ತು ಯಾವುದೇ ವ್ಯಕ್ತಿ ಅಥವಾ ಸಂಸ್ಥೆಯನ್ನು ಸೇರಿದಂತೆ, ಅದರೆ ಅದಕ್ಕೆ ಸೀಮಿತವಾಗದಂತೆ, ಪ್ರೋಗ್ರಾಮ್‌ನಲ್ಲಿ ರೆಫರ್ ಮಾಡಿದವರ ಭಾಗವಹಿಸುವಿಕೆಗೆ ಸಂಬಂಧಿಸಿದಂತೆ ಅಥವಾ ಅದರಿಂದಾಗಿ ಉಂಟಾದ (ಯಾವುದೇ ವ್ಯಕ್ತಿ(ಗಳಿಗೆ) ಉಂಟಾದ ಮತ್ತು/ಅಥವಾ ಒದಗಿಸುವ, ಸ್ವೀಕರಿಸಿದ ಮತ್ತು/ಅಥವಾ ಬಳಕೆ ಅಥವಾ ಪ್ರೋಗ್ರಾಮ್‌ ದುರ್ಬಳಕೆ ಅಥವಾ ಯಾವುದೇ ರಿವಾರ್ಡ್‌ಗೆ ಉಂಟಾದ ಯಾವುದೇ ಸ್ವತ್ತು ನಷ್ಟ, ಹಾನಿ, ವೈಯಕ್ತಿಕ ಗಾಯ ಅಥವಾ ಮರಣ) ಯಾವುದೇ ಮತ್ತು ಎಲ್ಲ ಕ್ಲೇಮ್‌ಗಳು, ಕ್ರಮಗಳು, ಬೇಡಿಕೆಗಳು, ಹಾನಿಗಳು, ನಷ್ಟಗಳು, ಬಾಧ್ಯತೆಗಳು, ವೆಚ್ಚಗಳು ಅಥವಾ ಖರ್ಚುಗಳಿಂದ ಸಮರ್ಥಿಸುತ್ತಾರೆ, ವೆಚ್ಚರಕ್ಷಣೆ ಮಾಡುತ್ತಾರೆ, ಬಿಡುಗಡೆ ಮಾಡುತ್ತಾರೆ ಮತ್ತು ಅಪಾಯದಿಂದ ರಕ್ಷಿಸುತ್ತಾರೆ.
  • ಈ ಕೆಳಗಿನಿಂದ ಉಂಟಾಗುವ ಲಾಭ, ಗೌರವ, ಬಳಕೆ, ಡೇಟಾ ಅಥವಾ ಇತರ ಅಸ್ಪಷ್ಟ ನಷ್ಟಗಳು ಸೇರಿದಂತೆ, ಆದರೆ ಅದಕ್ಕೆ ಸೀಮಿತವಾಗದಂತೆ ನಷ್ಟಕ್ಕೆ ಉಂಟಾದ ಹಾನಿಗಳು, ಯಾವುದೇ ನೇರ, ಪರೋಕ್ಷ, ಘಟನಾತ್ಮಕ, ವಿಶೇಷ, ಸನ್ನಿವೇಶಾತ್ಮಕ ಅಥವಾ ಶಿಕ್ಷಾತ್ಮಕ ಹಾನಿಗಳಿಗೆ ಎಂಟಿಪಿಎಲ್‌ ಬಾಧ್ಯವಲ್ಲ (ಇಂತಹ ಹಾನಿಗಳ ಸಾಧ್ಯತೆಯ ಬಗ್ಗೆ ಎಂಟಿಪಿಎಲ್‌ಗೆ ಸಲಹೆ ನೀಡಿದರೂ): (i) ಪ್ರೋಗ್ರಾಮ್‌ ಬಳಸುವುದು ಅಥವಾ ಬಳಸಲು ಅಸಮರ್ಥವಾಗುವುದು; (ii) ನಿಮ್ಮ ಟ್ರಾನ್ಸ್‌ಮಿಶನ್‌ಗಳು ಅಥವಾ ಡೇಟಾದ ಅನಧಿಕೃತ ಪ್ರವೇಶಾವಕಾಶ ಅಥವಾ ತಿದ್ದುಪಡಿ; (iv) ಯಾವುದೇ ತೃತೀಯ ಪಕ್ಷ ಅಥವಾ ಪ್ರೋಗ್ರಾಮ್ ಮೂಲಕ ಹೇಳಿಕೆ ಅಥವಾ ವರ್ತನೆ; ಅಥವಾ (v) ಪ್ರೋಗ್ರಾಮ್‌ಗೆ ಸಂಬಂಧಿಸಿದ ಯಾವುದೇ ಇತರ ವಿಷಯ.
  • ತಮ್ಮ ಸ್ವಂತ ರಿಸ್ಕ್‌ನಲ್ಲಿ ಪ್ರೋಗ್ರಾಮ್ ಬಳಸುವುದು.

ಮೋಸದ ಮತ್ತು ಅನುಮಾನಾಸ್ಪದ ವರ್ತನೆ:#

  • ಪ್ರೋಗ್ರಾಮ್‌ನ ಪಾರದರ್ಶಕತೆ, ಸಮಗ್ರತೆ ಅಥವಾ ನ್ಯಾಯೋಚಿತ ಕಾರ್ಯನಿರ್ವಹಣೆಯನ್ನು ಮೋಸ, ಗ್ಯಾಕಿಂಗ್, ಸಂಚು, ದುರ್ಬಳಕೆ ಚಟುವಟಿಕೆ ಅಥವಾ ಯಾವುದೇ ಇತರ ನ್ಯಾಯೋಚಿತವಲ್ಲದ ಆಟದ ಅಭ್ಯಾಸಗಳು ಅಥವಾ ಪ್ಲಾಟ್‌ಫಾರಂನ ನಿಯಮ ಮತ್ತು ನೀತಿಗಳಉಲ್ಲಂಘನೆ ಮೂಲಕ ಕೀಳುಗರೆಯಲು ರೆಫರ್ ಮಾಡಿದವರು ಪ್ರಯತ್ನಿಸಿರುವುದು ಕಂಡುಬಂದರೆ ಅಥವಾ ರಿವಾರ್ಡ್‌ಗಳನ್ನು ಒದಗಿಸುವಿಕೆಯು ಎಂಟಿಪಿಎಲ್‌, ಅದರ ಅಂಗಸಂಸ್ಥೆಗಳು, ಸಹ ಸಂಸ್ಥೆಗಳು ಅಥವಾ ಅವರ ಯಾವುದೇ ಸಂಬಂಧಿಸಿದ ಅಧಿಕಾರಿಗಳು, ನಿರ್ದೇಶಕರು, ಉದ್ಯೋಗಿಗಳು, ಪ್ರತಿನಿಧಿಗಳು ಮತ್ತು ಏಜೆಂಟರುಗಳ ಮೇಲೆ ಸಂಭಾವ್ಯ ಬಾಧ್ಯತೆ ವಿಧಿಸಲಾಗುತ್ತದೆ ಎಂದು ಭಾವಿಸಿದರೆ ಎಂಟಿಪಿಎಲ್‌ ಸ್ವಂತ ವಿವೇಚನೆಗೆ ಒಳಪಟ್ಟು, ಪ್ರೋಗ್ರಾಮ್‌ನಲ್ಲಿ ಭಾಗವಹಿಸುವುದರಿಂದ ಅಥವಾ ರಿವಾರ್ಡ್‌ಗಳನ್ನು ಸ್ವೀಕರಿಸುವುದರಿಂದ ರೆಫರ್ ಮಾಡುವವರನ್ನು ಎಂಟಿಪಿಎಲ್‌ ನಿಷೇಧಿಸಬಹುದು.
  • ರೆಫರ್ ಮಾಡಿದವರು ಹಲವು ಅಥವಾ ಮೋಸದ ಇಮೇಲ್ ವಿಳಾಸಗಳು ಅಥವಾ ಖಾತೆಗಳನ್ನು ನಮೂದಿಸಬಾರದು, ಮೋಸದ ಗುರುತುಗಳನ್ನು ಬಳಸಬಾರದು ಅಥವಾ ಯಾವುದೇ ಸಿಸ್ಟಂ, ಬಾಟ್ ಅಥವಾ ಇತರ ಸಾಧನ ಅಥವಾ ಸಲಕರಣೆಯನ್ನು ಬಳಸಿ ಪ್ರೋಗ್ರಾಮ್‌ನಲ್ಲಿ ಭಾಗವಹಿಸಬಾರದು ಅಥವಾ ರಿವಾರ್ಡ್‌ ಸ್ವೀಕರಿಸಬಾರದು.
  • Mಪ್ರವೇಶ ಪ್ರಕ್ರಿಯೆ ಅಥವಾ ಪ್ರೋಗ್ರಾಮ್ ಅಥವಾ ಪ್ಲಾಟ್‌ಫಾರಂ ಕಾರ್ಯನಿರ್ವಹಣೆಯನ್ನು ದುರ್ಬಳಕೆ ಮಾಡುತ್ತಿರುವುದು ಅಥವಾ ಯಾವುದೇ ರೀತಿಯಲ್ಲಿ ಈ ನಿಯಮಗಳನ್ನು ಉಲ್ಲಂಘಿಸುತ್ತಿರುವುದನ್ನು ಎಂಟಿಪಿಎಲ್ ಕಂಡುಕೊಂಡರೆ ಯಾವುದೇ ರೆಫರ್ ಮಾಡಿದವರನ್ನು ಅನರ್ಹಗೊಳಿಸುವ ಮತ್ತು/ಅಥವಾ ಯಾವುದೇ ರಿವಾರ್ಡ್‌ಗಳನ್ನು ರದ್ದು ಮಾಡುವ ಹಕ್ಕನ್ನು ಎಂಟಿಪಿಎಲ್ ಕಾಯ್ದಿರಿಸಿದೆ.

ಆಡಳಿತ ಕಾನೂನು:#

ಭಾರತೀಯ ಕಾನೂನಿನ ಪ್ರಕಾರ ಈ ಪ್ರೋಗ್ರಾಮ್ ಅನ್ನು ನಿರ್ವಹಿಸಬೇಕು.