Skip to main content

ಎಫ್‌ಎಕ್ಯೂ

Last updated: 12th March 2021

ಮೋಜ್ ರೆಫರಲ್ ಪ್ರೋಗ್ರಾಮ್ ಎಂದರೇನು?

ಮೋಜ್ ರೆಫರಲ್ ಪ್ರೋಗ್ರಾಮ್‌ ಎಂಬುದು ಬಳಕೆದಾರರನ್ನು ಆಹ್ವಾನಿಸುವ ಪ್ರೋಗ್ರಾಮ್ ಆಗಿದ್ದು, ಇದನ್ನು ಬಳಸಿ ಮೋಜ್ ಬಳಕೆದಾರರು ಮೋಜ್ ಆಪ್‌ಗೆ ತನ್ನ ಸ್ನೇಹಿತರು ಮತ್ತು ಕುಟುಂಬವನ್ನು ಆಹ್ವಾನಿಸಿ ಹಣ ಗಳಿಸಬಹುದು.

ಮೋಜ್ ರೆಫರಲ್ ಪ್ರೋಗ್ರಾಮ್ ಬಳಸಿ ಹಣ ಗಳಿಸುವುದು ಹೇಗೆ?

ರಿವಾರ್ಡ್‌ಗಳನ್ನು 2 ಹಂತಗಳಲ್ಲಿ ನೀಡಲಾಗುತ್ತದೆ. ಹಂತ 1 - ಆಹ್ವಾನಿತರು ರೆಫರಲ್ ಲಿಂಕ್‌ ಬಳಸಿ ಇನ್‌ಸ್ಟಾಲ್‌ ಮಾಡಿ, ಖಾತೆ ರಚಿಸುತ್ತಾರೆ. ಹಂತ 2 - ಮೋಜ್ ಆಪ್‌ನಲ್ಲಿ ಆಹ್ವಾನಿತರು 30 ನಿಮಿಷಗಳ ವೀಕ್ಷಣೆ ಸಮಯವನ್ನು ಪೂರ್ಣಗೊಳಿಸುವುದು.

ಹಂತ 1 ರಿವಾರ್ಡ್‌ಗಳನ್ನು ನಾನು ಪಡೆಯುವುದು ಹೇಗೆ?

ಹಂತ 1 ರಲ್ಲಿ, ಮಾನ್ಯ ಆಹ್ವಾನಿತರು ತಮ್ಮ ಖಾತೆಯನ್ನು ಪರಿಶೀಲಿಸಿದರೆ, ರೆಫರ್ ಮಾಡಿದವರು ಮತ್ತು ಆಹ್ವಾನಿತರು ರಿವಾರ್ಡ್‌ ಪಡೆಯುತ್ತಾರೆ.

ಹಂತ 2 ರಿವಾರ್ಡ್‌ಗಳನ್ನು ನಾನು ಪಡೆಯುವುದು ಹೇಗೆ?

ಹಂತ 2 ರಲ್ಲಿ, ಹಂತ 1 ರಲ್ಲಿ ರಿವಾರ್ಡ್‌ ಪಡೆದ ಊರ್ಜಿತ ಆಹ್ವಾನಿತರು, ಆಪ್‌ ಇನ್‌ಸ್ಟಾಲ್ ಮಾಡಿದ 7 ದಿನಗಳೊಳಗೆ 30 ನಿಮಿಷಗಳ ವೀಕ್ಷಣೆ ಸಮಯವನ್ನು ಪೂರ್ಣಗೊಳಿಸಿದಾಗ ರೆಫರ್ ಮಾಡಿದವರು ಮತ್ತು ಆಹ್ವಾನಿತರು ರಿವಾರ್ಡ್‌ ಪಡೆಯುತ್ತಾರೆ.

ನಾನು ಗಳಿಸಿದ ರಿವಾರ್ಡ್‌ಗಳನ್ನು ನಾನು ರಿಡೀಮ್ ಮಾಡುವುದು ಹೇಗೆ?

ಗಳಿಸಿದ ರಿವಾರ್ಡ್‌ಗಳನ್ನು ರಿಡೀಮ್ ಮಾಡಲು ಬ್ಯಾಂಕ್‌ ಖಾತೆ ವಿವರಗಳನ್ನು ನೀವು ಸೇರಿಸಬೇಕು. ಭವಿಷ್ಯದಲ್ಲಿ ರಿಡೆಂಪ್ಷನ್‌ನ ಇನ್ನಷ್ಟು ವಿಧಾನಗಳನ್ನು ನಾವು ಸೇರಿಸುತ್ತೇವೆ.

ನನ್ನ ಸ್ನೇಹಿತರಿಗೆ ಅವರ ಫೋನ್‌ಗಳಲ್ಲಿ ರಿವಾರ್ಡ್‌ ಪ್ರೋಗ್ರಾಮ್ ಕಾಣಿಸುತ್ತಿಲ್ಲ. ಏಕೆ?

ಮೋಜ್ ರೆಫರಲ್ ಪ್ರೋಗ್ರಾಮ್ ಅನ್ನು ಕೇವಲ ಅರ್ಹ ಬಳಕೆದಾರರಿಗೆ ತೆರೆಯಲಾಗಿದೆ. ಹಾಗೂ, ಈ ಪ್ರೋಗ್ರಾಮ್ ಅನ್ನು ಕೇವಲ ಮೋಜ್ ಆಂಡ್ರಾಯ್ಡ್ ಆಪ್‌ನಲ್ಲಿ ಲಭ್ಯವಾಗಿಸಲಾಗಿದೆ.

ನಾನು ಸ್ನೇಹಿತರನ್ನು ರೆಫರ್ ಮಾಡಿದ್ದೇನೆ. ಅವರು ಫೇಸ್‌ಬುಕ್ ಬಳಸಿ ತನ್ನ ಖಾತೆಯನ್ನು ಪರಿಶೀಲಿಸಿದ್ದಾರೆ. ಆದರೆ, ನನಗೆ ಇನ್ನೂ ರಿವಾರ್ಡ್ ಬಂದಿಲ್ಲ. ಏಕೆ?

ರಿವಾರ್ಡ್‌ಗಳಿಗೆ ಅರ್ಹರಾಗಲು ಆಹ್ವಾನಿತರು ತಮ್ಮ ಫೋನ್ ನಂಬರ್ ಅಥವಾ ಟ್ರ್ಯೂಕಾಲರ್ ಬಳಸಿ ತಮ್ಮ ಖಾತೆಯನ್ನು ಪರಿಶೀಲಿಸಿಕೊಳ್ಳಬೇಕು.

ನಾನು ಸ್ನೇಹಿತರನ್ನು ರೆಫರ್ ಮಾಡಿದ್ದೇನೆ. ಅವರು ಖಾತೆಯನ್ನು ವೆರಿಫೈ ಮಾಡಿದ್ದಾರೆ. ಆದರೆ, ನನಗೆ ಇನ್ನೂ 2ನೇ ಹಂತದ ರಿವಾರ್ಡ್ ಬಂದಿಲ್ಲ. ಏಕೆ?

2ನೇ ಹಂತದ ರಿವಾರ್ಡ್‌ಗಾಗಿ ಆಪ್‌ ಇನ್‌ಸ್ಟಾಲ್ ಮಾಡಿದ 7 ದಿನಗಳೊಳಗೆ 30 ನಿಮಿಷಗಳ ವೀಡಿಯೋ ವೀಕ್ಷಣೆ ಸಮಯವನ್ನು ಆಹ್ವಾನಿತರು ಪೂರ್ಣಗೊಳಿಸಬೇಕು.

ಪ್ಯಾರಲಲ್‌ ಸ್ಪೇಸ್‌ನಂತಹ ಆಪ್‌ಗಳನ್ನು ನಾನು ಬಳಸಬಹುದೇ?

ಇಲ್ಲ. ಕ್ಲೋನ್‌ ಆಪ್‌ಗಳು, ಎಮ್ಯುಲೇಟರ್‌ಗಳು ಮತ್ತು ರೂಟ್ ಮಾಡಿದ ಸಾಧನಗಳು ರಿವಾರ್ಡ್‌ಗಳ ಪ್ರೋಗ್ರಾಮ್‌ಗೆ ಅರ್ಹವಲ್ಲ. ಇಂತಹ ಆಪ್‌ಗಳನ್ನು ಬಳಸಿದ್ದಕ್ಕೆ ನಿಮ್ಮನ್ನು ಜೀವಿತಾವಧಿಗೆ ನಿರ್ಬಂಧಿಸಬಹುದು.

ಮೋಜ್ ರೆಫರಲ್ ಪ್ರೋಗ್ರಾಮ್ ನಿಯಮಗಳು ಮತ್ತು ಮಾರ್ಗಸೂಚಿಗಳು#

ಮೋಜ್ ರೆಫರಲ್ ಪ್ರೋಗ್ರಾಮ್‌ನಲ್ಲಿ ಭಾಗವಹಿಸುವುದಕ್ಕೂ ಮೊದಲು ಈ ಕೆಳಗಿನ ನಿಯಮಗಳನ್ನು ದಯವಿಟ್ಟು ಓದಿ. ಭಾಗವಹಿಸುವ ಮೂಲಕ, ಈ ಕೆಳಗಿನ ಎಲ್ಲ ನಿಯಮಗಳನ್ನು ನೀವು ಓದಿದ್ದೀರಿ ಮತ್ತು ಸಮ್ಮತಿಸಿದ್ದೀರಿ ಎಂದು ನೀವು ದೃಢೀಕರಿಸುತ್ತೀರಿ.

  1. ಮೋಜ್ ರೆಫರಲ್ ಪ್ರೋಗ್ರಾಮ್‌ ರಿವಾರ್ಡ್‌ಗಳ ಬಳಕೆ ಎರಡು ಹಂತಗಳಲ್ಲಿ:

    • ಹಂತ 1 ರಿವಾರ್ಡ್: ಪ್ರತಿ ಬಾರಿ ರೆಫರ್ ಮಾಡಿದವರು ಯಶಸ್ವಿಯಾಗಿ ಒಬ್ಬ ಹೊಸ ಬಳಕೆದಾರರನ್ನು (ಆಹ್ವಾನಿತರು) ಆಹ್ವಾನಿಸಿ, ಆಹ್ವಾನಿತರು ಖಾತೆಯನ್ನು ರಚಿಸಿದಾಗ, ರೆಫರ್ ಮಾಡಿದವರು ಮತ್ತು ಆಹ್ವಾನ ಪಡೆದವರಿಬ್ಬರೂ ತಲಾ ರೂ. 2 ಗಳಿಸುತ್ತಾರೆ.
    • ಹಂತ 2 ರಿವಾರ್ಡ್: ಹಂತ 1 ರಿವಾರ್ಡ್ ಅನ್ನು ಸ್ವೀಕರಿಸಿದ ಆಹ್ವಾನಿತರು, ಆಪ್‌ ಇನ್‌ಸ್ಟಾಲ್ ಮಾಡಿದ ಮೊದಲ 7 ದಿನಗಳೊಳಗೆ ಫಾರ್ ಯೂ ಫೀಡ್‌ನಲ್ಲಿ 30 ನಿಮಿಷಗಳ ವೀಡಿಯೋಗಳನ್ನು ಯಶಸ್ವಿಯಾಗಿ ವೀಕ್ಷಿಸಿದಾಗ, ರೆಫರ್ ಮಾಡಿದವರು ಮತ್ತು ಆಹ್ವಾನಿತರಿಬ್ಬರೂ ತಲಾ ರೂ. 5 ಗಳಿಸುತ್ತಾರೆ.
  2. ಹೊಸ ಬಳಕೆದಾರರು ಎಂಬುದು ಮೊದಲ ಬಾರಿಗೆ ತನ್ನ ಸಾಧನದಲ್ಲಿ ಮೋಜ್ ಆಪ್‌ ಅನ್ನು ಡೌನ್‌ಲೋಡ್ ಮಾಡುವ ಆಹ್ವಾನಿತರನ್ನು ಉಲ್ಲೇಖಿಸುತ್ತದೆ.

  3. ಯಶಸ್ವಿ ರೆಫರಲ್‌ ಎಂಬುದು ರೆಫರಲ್‌ ಲಿಂಕ್ ಬಳಸಿ ಮೋಜ್ ಆಪ್‌ ಅನ್ನು ಹೊಸ ಬಳಕೆದಾರರು ಡೌನ್‌ಲೋಡ್ ಮಾಡಿ, ಆಪ್‌ನಲ್ಲಿ ಖಾತೆಯನ್ನು ರಚಿಸುವುದನ್ನು ಉಲ್ಲೇಖಿಸುತ್ತದೆ.

  4. ಮಿತಿಗಳು: ಪ್ರೋಗ್ರಾಮ್‌ ವೇಳೆ, ಪ್ರತಿ ಬಳಕೆದಾರರು 10 ಹೊಸ ಬಳಕೆದಾರರನ್ನು ಆಹ್ವಾನಿಸಬಹುದು.

  5. ಆಹ್ವಾನಿತರು ಯಶಸ್ವಿಯಾಗಿ ಆಪ್‌ ಅನ್ನು ಇನ್‌ಸ್ಟಾಲ್ ಮಾಡಿ ಲಾಗಿನ್ ಮಾಡಿದರೆ, ಅದೇ ಬಳಕೆದಾರರನ್ನು ಪುನಃ ಆಹ್ವಾನಿಸಲಾಗದು. ಹೊಸ ಬಳಕೆದಾರರನ್ನು ನಾವು ನೋಂದಾಯಿತ ಫೋನ್ ನಂಬರ್, ಸಾಧನ ಮಾಹಿತಿ ಮತ್ತು ಇತರ ಬಳಕೆದಾರರಿಗೆ ಸಂಬಂಧಿಸಿದ ಮಾಹಿತಿಯ ಆಧಾರದಲ್ಲಿ ಗುರುತಿಸುತ್ತೇವೆ.

  6. ರಿಡೆಂಪ್ಷನ್‌

    • ಒಬ್ಬ ಬಳಕೆದಾರರು ಕೇವಲ ಒಂದು ಬ್ಯಾಂಕ್ ಖಾತೆಯನ್ನು ತನ್ನ ಪ್ರೊಫೈಲ್‌ಗೆ ಲಿಂಕ್ ಮಾಡಬಹುದು.
    • ಒಂದು ಬ್ಯಾಂಕ್‌ ಖಾತೆಗೆ ತಮ್ಮ ರಿವಾರ್ಡ್ ಅನ್ನು ಬಳಕೆದಾರರು ರಿಡೀಮ್ ಮಾಡಿದಾಗ, ಇದೇ ಬ್ಯಾಂಕ್ ಖಾತೆಯನ್ನು ಯಾವುದೇ ಇತರ ಬಳಕೆದಾರರು ಬಳಸುವಂತಿಲ್ಲ.
    • ನಿಮ್ಮ ರಿವಾರ್ಡ್ ಅನ್ನು ರಿಡೀಮ್ ಮಾಡುವುದಕ್ಕೂ ಮೊದಲು ನಿಮ್ಮ ಬ್ಯಾಂಕ್ ಖಾತೆ ವಿವರಗಳನ್ನು ದಯವಿಟ್ಟು ದೃಢೀಕರಿಸಿ. ಒದಗಿಸಿದ ತಪ್ಪು ಬ್ಯಾಂಕ್ ವಿವರಗಳಿಗೆ ಮೋಜ್ ಜವಾಬ್ದಾರನಲ್ಲ.
  7. ಅನರ್ಹತೆಗೆ ಮಾನದಂಡ:

    • ರೆಫರಲ್ ಪ್ರೋಗ್ರಾಮ್‌ನಲ್ಲಿ ವರ್ಚುವಲ್ ಫೋನ್‌ ನಂಬರ್‌ಗಳನ್ನು ಅನುಮತಿಸಲಾಗುವುದಿಲ್ಲ.
    • ಆಪ್‌ ಚಟುವಟಿಕೆಯಲ್ಲಿ ಮಧ್ಯಪ್ರವೇಶಿಸಲು ಅಥವಾ ತಿದ್ದುಪಡಿ ಮಾಡಲು ಎಮ್ಯುಲೇಟರ್‌ಗಳಂತಹ ತೃತೀಯ ಪಕ್ಷದ ಪರಿಕರಗಳ ಬಳಕೆಯನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.
    • ಪ್ಲಾಟ್‌ಫಾರಂನಲ್ಲಿ ಅನುಮಾನಾಸ್ಪದ ಮೋಸದ ಚಟುವಟಿಕೆಗಳನ್ನು ಹೊಂದಿರುವ ಬಳಕೆದಾರರನ್ನು ನಿಷೇಧಿಸುವ ಹಕ್ಕನ್ನು ಮೋಜ್ ಆಪ್‌ ಕಾಯ್ದಿರಿಸಿದೆ.
  8. ಮೋಜ್ ಆಂಡ್ರಾಯ್ಡ್‌ ಆಪ್‌ನಲ್ಲಿ ಮಾತ್ರವೇ ಮೋಜ್ ರೆಫರಲ್‌ ಪ್ರೋಗ್ರಾಮ್‌ ಲಭ್ಯವಿದೆ. ರೆಫರಲ್ ರಿವಾರ್ಡ್‌ಗಳಿಗೆ ಮೋಜ್ ಐಒಎಸ್‌ ಆಪ್ ಮತ್ತು ಮೋಜ್ ಲೈಟ್ ಆಪ್‌ನಲ್ಲಿ ಇನ್‌ಸ್ಟಾಲ್ ಮಾಡಿದರೆ, ಅದು ಅರ್ಹವಾಗಿರುವುದಿಲ್ಲ.

ಮೋಜ್‌ ಆಪ್‌ನ ನಿಯಮ ಮತ್ತು ಗೌಪ್ಯತೆ ಹಾಗೂ ಸಮುದಾಯ ಮಾರ್ಗಸೂಚಿಗಳು ಸಮುದಾಯ ಮಾರ್ಗಸೂಚಿಗಳು.

ಹೆಚ್ಚಿನ ಮಾಹಿತಿಗಾಗಿ, ಮೋಜ್ ರೆಫರಲ್ ಪ್ರೋಗ್ರಾಮ್‌ ನಿಯಮ ಮತ್ತು ಷರತ್ತುಗಳು ಮತ್ತು ಎಫ್‌ಎಕ್ಯೂ ಅನ್ನು ನೋಡಿ.